“ಮಾತಾಡೋ ಮನ”ಕ್ಕೀಗ ಒಂದು ವರುಷ!

ಜನವರಿ 13, 2011 at 1:00 AM (article)

“ಮಾತಾಡೋ ಮನ”

ಮಾತಾಡಿಸಿದೆ ನನ್ನ..

೩-೪ ವರುಷದ ಹಿಂದೆ ನಾನು ಡಿಪ್ಲೊಮಾ ಕಲಿಯುತ್ತಿದ್ದಾಗ ನನ್ನ ಒಂದೆರಡು ಕವನಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದವು.. ನಂತರ ೨-೩ ಕಳುಹಿಸಿದ್ದೆ ಹಾಕಲೇ ಇಲ್ಲ. ಬೇಸರವಾಗಿ ಕಳುಹಿಸುವ ಸಾಹಸವ ಕೈ ಬಿಟ್ಟೆ. ಏನೋ ಕಳೆದುಕೊಂಡ ಅನುಭೂತಿ! ಆದರೂ ಬರೆಯಲು ಮನಸ್ಸಾದಾಗಲೆಲ್ಲಾ ಕವನಕ್ಕೆಂದು ಮಾಡಿದ ಪುಸ್ತಕದಲ್ಲೇ ಬರೆದಿಡುತ್ತಿದ್ದೆ.

ಮುಂದೊಂದು ದಿನ ಇಂಜಿನಿಯರಿಂಗ್ ಪದವಿ ಮಾಡುವಾಗ ಕಂಪ್ಯೂಟರಿನ ಒಡನಾಟವಾದಾಗ ಗೊತ್ತಾಯಿತು. . ಬ್ಲೋಗ್ ಎಂಬ ಲೋಕದ ಬಗ್ಗೆ. ಸಂಪದದಲ್ಲಿ ಮೊದಲಿಗೆ ನನ್ನ ಬ್ಲೋಗ್ ಮಾಡಿ ಬರೆಯತೊಡಗಿದೆ. ಇದೇ ಜನವರಿ ೧೩-೨೦೧೦ರಂದು ನನ್ನದೇ ಬ್ಲೋಗ್ ಇರಲೆಂದು ಇದನ್ನು “ಮಾತಾಡೋ ಮನ” ಎಂದು ನಾಮಕರಣ ಮಾಡಿ ಬರೆಯಲು ಪ್ರಾರಂಭಿಸಿದೆ. ಇದಕ್ಕೆಲ್ಲದಕ್ಕೂ ನನಗೆ ಪ್ರೋತ್ಸಾಹಿಸಿದವರು ಅನೇಕರು! ಸಂಪದ ಬಳಗ, ಸ್ನೇಹಿತರು, ಮನೆಯವರು ನನ್ನ ಬ್ಲಾಗ್ ಓದುಗರು.

“ಮಾತಾಡೋ ಮನ”, ನನ್ನ ಮನಸ್ಸಿನ ಸಂತೋಷ, ದುಖಃ , ತೊಳಲಾಟ, ಭಾವನೆ, ವಿಮರ್ಶೆ ಎಲ್ಲವನ್ನೂ ನನ್ನದೇ ಪದಗಳಲ್ಲಿ ವ್ಯಕ್ತಪಡಿಸುವ ವೇದಿಕೆಯಾಯಿತು. ನನ್ನ  ಆಪ್ತ ಸ್ನೇಹಿತೆಯಾಯಿತು.  ಇದುವರೆಗೆ ೪೭ ಪೋಸ್ಟ್ ಗಳನ್ನು ಮಾಡಿದ್ದು, ಬಂದು ಹೋದವರ ಸಂಖ್ಯೆ “೫೭೩೮”. ಓದುಗರೇ  ನಿಮ್ಮೆಲ್ಲರ ಬೆಂಬಲ ಸಹಕಾರ ಇನ್ನು ಮುಂದೆಯೂ ಇರಲಿ..

ನನಗೆ ಬರೆಯಲು ಪ್ರೋತ್ಸಾಹ ನೀಡುತ್ತಿರುವವರೆಲ್ಲರಿಗೂ ಹೃದಯ ಪೂರ್ವಕ ವಂದನೆಗಳು.

“ಮಾತಾಡೋ ಮನ”ವೇ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಷಯಗಳು.

ನಲ್ಮೆಯಿಂದ

ದಿವ್ಯ

Advertisements

7 ಟಿಪ್ಪಣಿಗಳು

 1. shimladkaumesh said,

  ದಿವ್ಯಾ… ಶುಭಾಶಯಗಳು… ಹೆಮ್ಮೆ ಅನಿಸುತ್ತಿದೆ…

 2. ISHWARA BHAT said,

  ಶುಭಾಶಯಗಳು ಮತ್ತೆ ಮುಂದುವರೆಯಲಿ ಎಂಬ ಹಾರೈಕೆ !!

 3. ಜಗದೀಶಶರ್ಮಾ said,

  ಅನಂತ ಕಾಲ ಸಾಗಲಿ… ಮನ ಮಾತನಾಡುತ್ತಾ…

 4. lohitha said,

  ’ಮಾತಾಡೋ ಮನ’ವು ಮಾತು ಮುಂದುವರಿಸಲಿ.
  ಜನ್ಮದಿನಕ್ಕೆ ಶುಭಶಯ….

 5. ಆತ್ರಾಡಿ ಸುರೇಶ ಹೆಗ್ಡೆ said,

  ಮಾತಾಡೋ ಮನದ ಮಾತು ನಿರಂತರವಾಗಿರಲಿ
  ಅದಕ್ಕೆ ವರುಷ ಒಂದೇನು ಇನ್ನೂ ನೂರಾರಾಗಲಿ

  ವರುಷ ತುಂಬಿದ ಹರುಷದ ಈ ಗಳಿಗೆಯಲಿ ಶುಭಾಶಯ

 6. Dr.Gurumurthy Hegde said,

  Happy Birthday

  heege barita iri

  wish you all the best

 7. ksraghavendranavada said,

  ದಿವ್ಯಾ, ಹೀಗೇ ಮಾತಾಡುತ್ತಿರಿ ನೀವು ನಮ್ಮೊ೦ದಿಗೆ ನೂರಾರು ವರುಷ..
  ಸದಾ ಕೇಳುತ್ತಲೇ ಇರುತ್ತೇವೆ ನಾವು ಮನದಲಿ ತು೦ಬಿಕೊ೦ಡು ಹರುಷ

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: