ಮುದ್ದಿನ ಚಪ್ಪಲ್ ಕಾಲು ಬಿಟ್ಟಾಗ!!

ಡಿಸೆಂಬರ್ 7, 2010 at 7:58 ಅಪರಾಹ್ನ (article)

ಚಪ್ಪಲಿನ ಪ್ರೇಮಿಗಳ ಪಟ್ಟಿ ಮಾಡಿದ್ರೆ ತಮಿಳುನಾಡಿನ  ಜಯಲಲಿತಾ ಹೆಸರಿನ ನಂತರ ನಂದೇ ಇರುತ್ತಿತ್ತೇನೋ.. ಅಷ್ಟೂ ಚಪ್ಪಲ್ ಎಂದರೆ ಹುಚ್ಚು ಪ್ರೀತಿ(ಕ್ರೇಜ್). ಹೈಸ್ಕೂಲ್ ಗೆ ಸೇರಿದಲ್ಲಿಂದ ನನಗೆ ಗೊತ್ತಿರೋ  ಹಾಗೆ ಚಪ್ಪಲ್ ನಲ್ಲಿ ತುಂಬಾ ಚ್ಯೂಸಿಯಾಗಿ ಬಿಟ್ಟಿದ್ದೆ. ೪-೫ ಅಂಗಡಿಗಳಿಗೆ ಸುತ್ತದೆ ನನಗೆ ಬೇಕಾಗಿರೋದು ಸಿಗುತ್ತಿರಲಿಲ್ಲ. ಅಪ್ಪನ ಕೈಯಿಂದ ಇದಕ್ಕೆಲ್ಲ ದುಡ್ದು ಜಾರೀಸೋದು ನಿಜಕ್ಕೂ ಕಷ್ಟಾನೆ…! ಮನೆ ಮುಂದೆ ಐಸ್ ಕ್ಯಾಂಡಿ ಗಾಡಿ ಬಂದಾಗ ಅದನ್ನು ನಿಲ್ಲಿಸಿ; ತಂಗಿ , ಅಮ್ಮ ತೆಕ್ಕೊಂಡ್ರೆ ನಾನು ನಿಲ್ಲಿಸಿದವಳು ನಂಗೆ ಬೇಡ.. ಆ ಹಣ ಕೊಡಿ, ಎಂದು ಕೂಡಿಟ್ಟು ಆ ನೆವದಲ್ಲಿ ಚಪ್ಪಲ್ ಎಂದು ರಾಗ ಎಳೀತಿದ್ದವಳು. ಕಾಲಕ್ಕೊಂದು ಚಪ್ಪಲ್ ಕಾಡಿ ಬೇಡಿ ಪೂಸಿ ಹೊಡೆದು ಮಾರ್ಕ್ಸ್ ತೆಗೆದಾದ್ರು.. ಚಪ್ಪಲ್ ವಸೂಲಿ ಮಾಡ್ತಿದ್ದೆ :P. ಬೇಗ ಹಾಳು ಮಾಡಲು ಮನಸ್ಸು ಬರ್ತಿರ್ಲಿಲ್ಲ. ಚಪ್ಪಲ್ ಹಾಳಾಗದೆ ಹೊಸ ಚಪ್ಪಲ್ ಸಿಗ್ತಿರ್ಲಿಲ್ಲ??! 😦

ಈಗ ಬಾಳಸಂಗಾತಿ ಬಂದು ಬದುಕೇ ಬೆಂಗಳೂರು ಆಗಿ.. ಬೆಂಗಳೂರಲ್ಲಿ ತರ ತರದ ಚಪ್ಪಲ್ ಸಿಗೋ ಜಾಗ, ಶೋ ರೂಮ್ಗಳಿಗೇನು ಕಡಿಮೆನಾ??! ಬೇಡಾ ಅಂದ್ರೂ ಕಣ್ಣು ಚಪ್ಪಲ್ ಶಾಪ್ಗಳನ್ನೇ ಹುಡುಕುತ್ತದೆ. ಒಂದಿನ ಜಯನಗರ ನಾಲ್ಕನೇ ಹಂತಕ್ಕೆ ತಂಗಿ ಜೊತೆ ಹೋದೆ. ಕಣ್ಣಿಗೆ ಮೊದಲು ಕಂಡಿದ್ದೇ ಬಗೆ ಬಗೆಯ ಚಪ್ಪಲ್ ೧೦೦ ರೂ ಗೆ ಚೆಂದ ಚೆಂದದ ಚಪ್ಪಲ್! ತಿಂಗಳಿಗೆ ಒಂದೊಂದು ತೆಕ್ಕೊಳ್ಳೋರಿಗೆ ಇಷ್ಟರದ್ದೇ ಜಾಸ್ತಿಯಾಯ್ತು ಅಲ್ವಾ?. ಅಂತೂ ಫ್ಲಾಟ್, ದೊಡ್ಡ ಸೈಜ್ ಅದು ಇದು ನನ್ನ ಕಂಡೀಶನ್ ಗೆ ಚಪ್ಪಲ್ ಹುಡ್ಕೋನಿಗೆ ಸಕಾಗಿ ಹೋಯ್ತು. ಅಂತೂ ಕೊನೆಗೊಂದು ಚಪ್ಪಲ್ ಹುಡ್ಕಿ ತೆಕ್ಕೊಂಡು ಬಂದೂ ಆಯ್ತು.. ಅದನ್ನು ಹಾಕಿ ಸಿಕ್ಕಾ ಪಟ್ಟೆ ಓಡಾಡಿದ್ದು ಆಯ್ತು. ಒಂದು ಭಾನುವಾರ ಮನೆಗೆ ಬಂದ ತಂಗಿ ಜೊತೆ ವಾಯುವಿಹಾರಕ್ಕೆ ಹೊರಟಾಗ ಅದೇ ಚಪ್ಪಲ್ ಹಾಕಿದೆ.

ಮನೆಗೆ ಹಿಂತಿರುಗಿ ಬರುವಾಗ ಕೇಳಿದ್ಲು ನೋಡಿ..” ಅಕ್ಕ ಮೊನ್ನೆ ೪ ದಿನ ಮೈಸೂರಲ್ಲಿ ಇದೇ ಚಪ್ಪಲ್ ಹಾಕೇ ಸುತ್ತಾಡಿದ್ದಾ…?” “ಹ್ಮ್ಮ್” ಅಂದೇ. “ಇನ್ನೂ ಹಾಳಾಗ್ಲಿಲ್ವಾ? ನಂದು ಯಾವತ್ತೋ ಕಿತ್ತು ಹೋಗಿದೆ.”. ಅಂದ್ಲು. ಇಬ್ಬರೂ ಜೊತೆಗೇ ತೆಕ್ಕೊಂಡಿದ್ವಿ. “ಇದು ಹಾಳಾಗ್ತಾ ಬಂದಿದೆ.. ಎಲ್ಲೋ ನಾಲ್ಕು ದಿನ ಬರ್ಬಹುದೇನೋ .. ಆದ್ರು ನನ್ಗೆ ಇಷ್ಟ ಆಯ್ತು.. ಹಾಳಾದ್ರು ಇನ್ನೊಂದು ಈ ತರದ್ದೇ ತೆಕ್ಕೊಳ್ತೇನೆ” ಅಂದೆ. ಅಷ್ಟು ಹೇಳೋ ಹೊತ್ತಿಗೆ ಚಪ್ಪಲ್ ಅಡಿ ಕಿತ್ತೋಯ್ತ!!. ಇನ್ನೇನು ಮಾಡ್ಲಿ? ಅದನ್ನು ಎಳ್ಕೊಂಡು ಬರೋದು ಕಷ್ಟಾನೆ.. ಅಂತ ಅಡಿಯನ್ನ ಅಲ್ಲೇ ಕಿತ್ತಾಕಿ ಹೇಗೋ ನಡ್ಕೊಂಡು ಬಂದೆ. ಅದರ ನಂತರ ೨-೩  ಚಪ್ಪಲ್ ತೆಕ್ಕೊಂಡ್ರೂ ಆ ಚಪ್ಪಲ್ ನ ತುಂಬಾ ಮಿಸ್ ಮಾಡ್ತಿದೇನೆ 😦  .ಹೆಚ್ಚಿನ ಹೆಂಗಸ್ರಿಗೆ ಎದುರೆ ಹೆಂಗಸ್ರು ಕಂಡಾಗ ಕಣ್ಣು ಸೀದಾ ಕುತ್ತಿಗೆನಾ ನೋಡುತ್ತಂತೆ. ಚಿನ್ನದ ಸರ ಯಾವ ಡಿಸೈನ್ ಎಂದು.ಆದ್ರೆ ನನ್ನ ಕಣ್ಣು ಮಾತ್ರ ಬೇಡಾ ಅಂದ್ರೂ ಸೀದಾ.. ಚಪ್ಪಲ್ ನೋಡುತ್ತೆ. ಚೆನ್ನಾಗಿದ್ರೆ.. ಇನ್ನು ಈ ತರದ್ದು ತೆಕ್ಕೊಳ್ಬೇಕು ಅನ್ಸೋಕೆ ಶುರುವಾಗುತ್ತೆ! 🙂

ನಲ್ಮೆಯಿಂದ
ದಿವ್ಯ

Advertisements

Permalink 7 ಟಿಪ್ಪಣಿಗಳು