ಬಡತನ “ಭಯಾನ(ರ)ಕ”

ನವೆಂಬರ್ 14, 2010 at 8:33 ಅಪರಾಹ್ನ (article)

ಅಬ್ಬಾ….. ಅದೆಂಥಾ ಕಲ್ಲು ಹೃದಯದಲ್ಲೂ ಸಣ್ಣನೆಯ ತಲ್ಲಣ ಮಾಡಿ, ಕರುಳು ಚುರ್… ಎಂದು ಕಣ್ಣಂಚಿನಲ್ಲಿ ಹನಿ ನೀರಿಳಿಸುವಂತಿತ್ತು ನಾನಿಂದು ಕಂಡ ದೃಶ್ಯ! ಜೀವನದಲ್ಲಿ ಮೊದಲ ಸಲ ಅಂಥಹ ಬಡತನದ ಕ್ರೂರ ಮುಖವನ್ನು ಕಂಡೆ. ಬಡತನದಲ್ಲಿ ಇಷ್ಟೊಂದು ಭಯಾನಕ ಲೋಕವಿದೆ ಎಂದು ತಿಳಿದೆ..; ಲೋಕವಲ್ಲವದು ನರಕ!!  

ಸಂಜೆಯನು ರಾತ್ರಿ ಆವರಿಸಿಯಾಗಿತ್ತು.. ಸೀತಾ ಸರ್ಕಲ್ ಪಕ್ಕದಲ್ಲೇ ಜನ ತುಂಬಿ ತುಳುಕುವ ಒಂದು ಚಾಟ್ ಅಂಗಡಿಗೆ ಸೇವ್ ಪುರಿ ತಿನ್ನೋಣ ಎಂದು ನಾನು ಮತ್ತು ಮನೆಯವರು ಒಂದು ವಾಕ್ ಹೋದೆವು.. ಹೋಗಿ ೧ ಪ್ಲೇಟ್ ಸೇವ್ ಎಂದು ಸ್ವಲ್ಪ ಹಿಂದೆ ನಿತ್ತೆವು.ಅವರಿವರ ಪ್ಲೇಟ್ ನೋಡಿದೆ.. ಹೆಚ್ಚಿನವರು ಮಾಸಾಲೆ ತಿನ್ತಾ ಇದ್ರು.. ಆಗ ಅಲ್ಲೇ ಒಂದು ಬೆಂಚಲ್ಲಿ ಇಬ್ಬರು ಹೆಂಗಸರು ಕೂತು ತಿನ್ತಾ ಇದ್ರು. ಅವರೆದುರಲ್ಲಿ ಒಬ್ಬ ಪುಟ್ಟ ಹುಡುಗ ಅದೆಲ್ಲಿಂದ ಬಂದನೋ ಕೈ ಒಡ್ಡಿ ಅವರು ತಿನ್ನುತ್ತಿದ್ದುದನ್ನ ಕೇಳೋಕೆ ಶುರು ಮಾಡಿದ.  ಅವನ ಹಿಂದೆಯೇ ಅವನಿಗಿಂತ ೨ ವರುಷ ದೊಡ್ಡವಿರಬಹುದೇನೋ ಆ ಹುಡುಗನೂ ಕೈ ಚಾಚಿ ಕೇಳೋಕೆ ಶುರು ಮಾಡಿದ. ಅಲ್ಲೇ ಹಿಂದಿನ ಬೆಂಚಲ್ಲಿ ಆಗತಾನೇ ಇಬ್ಬರು ತಿಂದು ಮುಗಿಸಿ ಪ್ಲೇಟ್ ಅಲ್ಲೇ ಬಿಟ್ಟು ಎದ್ದು ಹೋದರು.ಈ ಇಬ್ಬರು ಪುಟ್ಟ ಹುಡುಗರು ಓಡಿ ಹೋಗಿ ಅದನ್ನೇ ನೆಕ್ಕ ತೊಡಗಿದರು. ಆ ಮಕ್ಕಳನ್ನು ನೋಡುವಾಗಲೇ ಹೊಟ್ಟೆಗೇನೂ ಇಲ್ಲದವರಂತೆ ಕಾಣುತಿತ್ತು. ದೊಡ್ಡವನಿಗೆ ಬಾಯಾರಿಕೆ ಆಯಿತೇನೋ, ಮೇಲೆ ಇಟ್ಟಿದ್ದ ನೀರು ಕುಡಿಯಲು ಹೋಗಿ ಬೆಂಚು ಮಗುಚಿ ಬಿದ್ದು ಒಂದು ಪ್ಲೇಟ್ ಒಡೆಯಿತು. ಆಗ ಚಾಟ್ ಶಾಪ್ ಅಲ್ಲಿದ್ದ ನಾಲ್ಕು ಹುಡುಗರು ಪ್ಲೇಟ್ಗೆ ಹಾಕಿ ಕೊಡುತಿದ್ದವರು ಅವನನ್ನೇ ನೋಡಿದರು. ಈಗ ಹಿಗ್ಗಾ ಮುಗ್ಗ ಬೈಯುತ್ತಾರೇನೋ ಎಂದು ನನಗೆ ಮನದಲ್ಲೇ ಭಯ ಆಯ್ತು. ಆದ್ರೆ ಅವರು “ಒಡೆದು ಹಾಕಿದ್ಯೇನೋ ಪ್ಲೇಟ್…ನ.. ” ಎಂದು ಸುಮ್ಮನಾದರು. ಪಾಪ ಅವರಿಗು ಆ ಮಕ್ಕಳನ್ನು ನೋಡಿ ಕರುಣೆ ಬಂತೇನೋ. ಮತ್ತೆರದು ಮಾತು ಹೇಳಲೂ ಬಿಡುವಿಲ್ಲದಂತೆ ಚಾಟ್ ಹಾಕುವುದರಲ್ಲೇ ಫುಲ್ ಬ್ಯುಸಿ ಆಗಿದ್ರು ಆ ನಾಲ್ವರು.

ಮತ್ತೆ ಪುನಃ ಆ ಮಕ್ಕಳು ಅದೇ ಇಬ್ಬರು ಹೆಂಗಸರೆದುರು ಬಂದು ನಿತ್ತರು. ಒಂದೊಂದು ಚಮಚದಲ್ಲಿ ತೆಗೆದು ಅವರ ಕೈ ಗೆ ಹಾಕಿದಾಗ ಸಂತೋಷದಲ್ಲಿ ಆ ಮಕ್ಕಳು ನೆಕ್ಕಿದ್ದು ನೋಡಿದರೆ!.. ಮತ್ತೆ ಅಲ್ಲೇ ಪಕ್ಕದಲ್ಲಿ ಮೂಲೆಯಲ್ಲಿ ಮಲಗಿದ್ದ ಎಳೆ ಮಗುವನ್ನೆತ್ತಿಕೊಂಡು ಆ ದೊಡ್ಡ ಹುಡುಗ(೬ ವರುಷವಿರವಹುದಷ್ಟೆ) ಚಾಟ್ ಶಾಪ್ ಎದುರೆಯೇ ಬಂದು ತನ್ನ ಮಡಿಲಲ್ಲಿ ಮಲಗಿಸಿ ಕೂತ! ಪಿಳಿಪಿಳಿ ಕಣ್ಣು ಬಿಟ್ಟು ತಿನ್ನುವವರನ್ನೇ ನೋಡುತ್ತಿದ್ದರು. ಆಗ “ಮೇಡಂಮ್ ಸೇವ್” ಎಂದರು. ಪ್ಲೇಟ್ ತೆಕ್ಕೊಂದು ಒಂದು ಬಾಯಿಗೆ ಹಾಕೋ ಮೊದಲು ಮನೆಯವರಲ್ಲಿ ಹೇಳಿದೆ “ನೋಡಿದ್ರಾ.. ಹೀಗೂ ಲೋಕದಲ್ಲಿ ಇದೆಯಾ” ಅಂತ ಮಾತಿಗಿಳಿದೆ. ಸೇವ್ ಬಾಯೊಳಗೆ ಹಾಕಲೇ ಮನಸಾಗಲಿಲ್ಲ. ಮನೆಯವರು,”ಇದನ್ನು ತಿನ್ನು ನಾನು ಇನ್ನೊಂದು ರೆಡಿ ಮಾಡೋಕೆ ಹೇಳ್ತೇನೆ ಅವರಿಗೆ ಕೊಡೋಣ” ಅಂದ್ರು, ನಾನು “ನಂಗೆ ಇದೂ ಬೇಡ ಅವರನ್ನು ನೋಡಿ ನನಗೆ ಹಸಿವೆ ಹೋಯ್ತು. ಇದ್ದು ಅವ್ರಿಗೆ ಕೊಡ್ಲಾ?” ಕೇಳಿದೆ. “ಕೊಡು” ಅಂದ್ರು.ಪಾಪ ಅಲ್ಲೇ ಕೆಳಗೆ ಕೂತಿದ್ದ ಸಣ್ಣ ಹುಡುಗನ ಕೈಯಲ್ಲಿ ಕೊಟ್ಟೆ.. ಯೋ…! ಇಬ್ಬರೂ ಹತ್ತು ದಿನ ಏನೂ ತಿನ್ನದವರಂತೆ ಅದನ್ನು ತಿಂತಿದ್ದದ್ದು ನೋಡಿ ಕಣ್ಣಂಚಲ್ಲಿ ನೀರಿಳಿದು ಕೈಯೆಲ್ಲಾ ಕಂಪಿಸಿತು… ಅಲ್ಲಿಂದ ಹೊರಟು ಮನೆಗೆ ಬರುವಾಗ.. ಬಡತನ ಇಷ್ಟು… ಭಯಂಕರವೇ?  ನಮ್ಮ ಮನೆಯಲ್ಲಿ ಅನ್ನ ಹೆಚ್ಚಾಗಿ ಹಾಳಾಗಿ ಬಿಸಾಕುತ್ತೇವಲ್ಲ.. ಪಾಪ ಅವರಿಗೆ??.. ಹೀಗೆ ಇಂಥಾ ಮಾತುಗಳೇ.. ಮನೆಯವರೆಗೂ ಸಾಗಿತು… ನನ್ನನ್ನು ಬ್ಲಾಗ್ನಲ್ಲಿ ಬರೆಯುವಂತೆಯೂ ಮಾಡಿತು…

ಅವರ ಬದುಕು ನೋಡಿದರೆ…ನಾವೆಷ್ಟು ಸುಖಿಗಳು!!  ಅದು ಇಲ್ಲ, ಇದು ಇಲ್ಲ.. ಸಂಬಳ ಸಾಕಾಗೋದಿಲ್ಲ.. ಹೋಟೇಲ್ ಗೆ ಹೋದ್ರೆ ನೂರಕ್ಕಿಂತ ಕಡಿಮೆಯಲ್ಲಿ ತಿನ್ನೋಕೇ… ನಮಗೆ ಗೊತ್ತಿಲ್ಲ. ತಂದೆ ತಾಯಿಗಳಿಗೆ ದುಡಿದು ಅವರ ಪುಟ್ಟು ಮಕ್ಕಳ ಪುಟ್ಟು ಹೊಟ್ಟೆಯ ಹಸಿವನ್ನು ನೀಗಿಸಲಾರದಂತಿದೆಯೇ ಈ…ಪ್ರಪಂಚ!!!??

ಚಿತ್ರ ಕೃಪೆ:

ನಲ್ಮೆಯಿಂದ

ದಿವ್ಯ

Permalink 3 ಟಿಪ್ಪಣಿಗಳು

ಹೂ ಕ್ಯಾಮೆರ ನೋಡಿ ನಕ್ಕಾಗ..

ನವೆಂಬರ್ 11, 2010 at 7:21 ಅಪರಾಹ್ನ (article) (, , )

ನಮ್ಮ ಮನೆಯ ಪುಟ್ಟ ಚಟ್ಟಿಯಲ್ಲಿ , ಒಮ್ಮೆಲೆ ಪುಟ್ಟ ಗುಲಾಬಿ ಹೂಗಳು ಮುಗುಳು ನಕ್ಕಾಗ…..

ನಲ್ಮೆಯಿಂದ

ದಿವ್ಯ


Permalink 1 ಟಿಪ್ಪಣಿ