ಸಂಜಯನ ಆತ್ಮಹತ್ಯಾ ಪ್ರಕರಣ!

ಸೆಪ್ಟೆಂಬರ್ 3, 2010 at 12:38 ಅಪರಾಹ್ನ (article)

ಗಾಬರಿ ಆಗದಿರಿ!! ಇದು “ಜೋಗಿ” ಅವರ “ಕಾಡು ಹಾದಿಯ ಕತೆಗಳು” ಇದರಲ್ಲಿನ ಒಂದು ಕತೆಯ ಹೆಸರಷ್ಟೆ..! ಎಲ್ಲಾ ಕತೆಗಳು ಒಂದು ರೀತಿಯ ನಿಸ್ಸಾಹಯಕತೆ.. ಕುಗ್ಗಿದ ಆತ್ಮವಿಶ್ವಾಸ, ಭಯ,ಸಾವು …ಇದೆಲ್ಲ ಎತ್ತಿ ಹಿಡಿದು ಬರೆದಂತಿದೆ..ಒಪ್ಪುವಂಥಹ ಕತೆಗಳೇ. ಆದರೂ “ಸಂಜಯನ ಆತ್ಮಹತ್ಯಾ ಪ್ರಕರಣವು” ಎಂಬ ಕತೆಯನ್ನು , ಮನಸ್ಸಿಗೆ ಇನ್ನೂ  ಸ್ವೀಕರಿಸಿಕೊಳ್ಳಲಾಗುತ್ತಿಲ್ಲ! ಹೀಗೂ ಉಂಟೇ? ಎನ್ನೋ ಪ್ರಶ್ನೆ ಮೂಡಿಸಿತು..!ಅಂಥದ್ದೇನಿದೆ ಅದರಲ್ಲಿ?  ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಏನಿದೆಯಾ??! ವಠಾರದವರಿಗೆಲ್ಲಾ ಅದೇ ವಠಾರದಲ್ಲೇ ವಾಸಿಸುವ ಸಂಜಯ್ ಕಂಡ್ರೆ ಅಷ್ಟಕ್ಕಷ್ಟೆ! ಅದಕ್ಕೆ ಅವನನ್ನು ಹೇಗಾದ್ರೂ ಲೋಕದಿಂದ್ಲೇ ಓಡಿಸಬೇಕು ಎಂದು ನಿರ್ಧರಿಸಿ ಅವನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿಸುವುದು! ಸಂಜಯ್ ಆತ್ಮ ಹತ್ಯೆ ಮಾಡಿಕೊಳ್ಳೂತ್ತಾನೆ ಕೂಡಾ!! ಆ ಕತೆ ಓದಿ ಮುಗಿಸಿದ್ದೇ ತಡ ನೂರಾರು ಪ್ರಶ್ನೆಗಳು ಮೇಲಿಂದ ಮೇಲೆ ಮೂಡ ತೊಡಗಿತು.. ಕತೆ ಬರೆದ “ಶ್ರೀ ಗಿರೀಶ್ ರಾವ್” ಕಣ್ಣೆದುರೆ ಇರುತ್ತಿದ್ದರೆ ಎಲ್ಲಾ ಪ್ರಶ್ನೆಗೆ ಉತ್ತರ ಸಿಗುತ್ತಿತ್ತೇನೋ ಅಂದು ಕೊಂಡೆ! ಆದರೂ ಮನೆಯವರಲ್ಲೇ ಕೆಲವೊಂದು ಪ್ರಶ್ನೆ ಇಟ್ಟಾಗ ಸಿಕ್ಕಿದ ಉತ್ತರ “ಪೀಪ್ಲೀ ಲೈವ್” ನೋಡಿಲ್ವಾ.. ಅವನು ಆತ್ಮ ಹತ್ಯೆಗೆ ಹೇಗೆ ಒಪ್ಪಿಕೊಂಡ? ಹಾಗೆಯೇ!

ಅಬ್ಬಾ.!. ಅಲ್ಲಿ ಅವನ ಹೆಂಡತಿ ಆದ್ರೂ ಪ್ರತಿಭಟಿಸಿದ್ದಳು! ಇಲ್ಲಿ.. ಮುಹು.. ಸಂಜನ್ ನ ಹೆಂಡತಿ ಅವನ ಆತ್ಮ ಹತ್ಯೆಗೆ ಸಹಕರಿಸುತ್ತಾಳೆ! ಅವಳು ಗಂಡನನ್ನು ದ್ವೇಷಿಸುತ್ತಿರಲ್ಲ ಬದಲಾಗಿ ಪ್ರೀತಿಸ್ತಾಳೆ..  ಪ್ರೀತಿ ಮಾಡೋ ಯಾರಾದರು ಹೆಂಡತಿಯರು ತಮ್ಮ ಗಂಡ ಆತ್ಮೆಹತ್ಯೆ ಮಾದಿಕೊಳ್ಳೂವನನಿದ್ದಾನೆ ತಾನು ಅದಕ್ಕೆ ಎಡೆ ಮಾಡಿ ಕೊಟ್ಟು ಸಹಕರಿಸುವೆ ಎಂದು ಕನಸಲ್ಲೂ ಯೋಚಿಸಲು ಸಾಧ್ಯವಿಲ್ಲ.. ಆದರೆ ಆ ಕತೆಯಲ್ಲಿ ಅದೂ ನಡೆದಿದೆ..! ಹೇಗೆ? ಆ ವಠಾರದವ್ರು  ಸಂಜಯ್ ನ ಹೆಂಡತಿಯೂ ಅವನ ಆತ್ಮಹತ್ಯೆಗೆ ಸಹಕರಿಸುವಂತೆ ಮಾಡಲು ಯಾವರೀತಿ ಅವಳ ಮನಸ್ಸನ್ನು ತಿರುಗಿಸಿರಬಹುದು..? ಹೇಗೆ ಪ್ರೇರೇಪಿಸಿರಬಹುದು? ಇದಕ್ಕೆ ನಾವೇ ಉತ್ತರ ಕಂಡುಕೊಳ್ಳಬೇಕಷ್ಟೆ!! ಲೇಖಕರು ವಠಾರದವರು ಅವರಿಬ್ಬರನ್ನು ಹೇಗೆ  ಒಪ್ಪಿಸಿದರು ಎನ್ನುವುದನ್ನು ಬರೆದೇ ಇಲ್ಲ!! 😦 ಇದುವೆ ತಲೆಯಲ್ಲಿ ಕೊರೆಯುತ್ತಿರುವ ಹುಳ! ಇಲ್ಲಿ ಬರೆದಾದ್ರು ಹುಳ ನಿಮ್ಮ ತಲೆಗೂ ಬಿಡುವ ಅನಿಸಿತು ಬರೆದೆ..! 🙂

ನಲ್ಮೆಯಿಂದ
ದಿವ್ಯAdvertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: