ಮೌನವೇ ಮಾತಾಡಿತು..

ಸೆಪ್ಟೆಂಬರ್ 28, 2010 at 12:03 ಅಪರಾಹ್ನ (kavana)
ಕಂಡ ಕನಸುಗಳಲ್ಲಿ
ನನಸಾದವು ಹಲವು,
ಕಣ್ಣೀರಲ್ಲೇ ತೊಳೆದು
ಹೋದವು ಕೆಲವು..

ಹಿಂಡಿ ಹಿಪ್ಪೆಯಾಗಿಸಿತು
ಹಲವರ ಮಾತು..
ನಾಲ್ಕು ಗೋಡೆಯೊಳಗೆ
ಕಮರಿತು ಬದುಕು..

ಮೌನವೆಂದದರೆ  ಏನು
ಎಂದರಿಯದ ಜೀವಕೆ,
ಏಕಾಂತದ ಬದುಕು..
ಮಾತ ಮರೆವಂತೆ ಮಾಡಿತು.

ನಲ್ಮೆಯಿಂದ
ದಿವ್ಯ

ಚಿತ್ರ ಕೃಪೆ: ಉಮೇಶ್ ಕುಮಾರ್.ಎಸ್

Advertisements

Permalink 5 ಟಿಪ್ಪಣಿಗಳು

ರಾತ್ರಿಯಲ್ಲಿ ಬೆಚ್ಚಿ ಬೀಳಿಸುವ ಟಾಯಿಲೆಟ್ಗಳು!

ಸೆಪ್ಟೆಂಬರ್ 17, 2010 at 4:29 ಅಪರಾಹ್ನ (article)


ಅಂದು ಚೌತಿ ಹಬ್ಬ ಮುಗಿಸಿ ಮರಳಿ ಬೆಂಗಳೂರಿಗೆ ಬರಲು ಸುಗಮ ಟೂರಿಸ್ಟ್ ಬಸ್ ಸಿಕ್ಕಿತ್ತು..ಬೇರೆ ಯಾವದರಲ್ಲೂ ಟಿಕೆಟ್ ಸಿಕ್ಕಿರಲಿಲ್ಲ.. ಇನ್ನೇನು ಮಾಡೋದು? ಪುತ್ತೂರಿನಿಂದ ಬೆಂಗಳೂರಿಗೆ ಬರೋ ಬಸ್ ಹೊರಟಿತು…. !! ನಿದ್ದೆ ಸರ್ಯಾಗಿ ಎಲ್ಲಿ ಬರುತ್ತೆ?? ಆ “ಗಡ ಗಡ” ಬಸ್ಸಲ್ಲಿ!!


ಎಲ್ಲೋ ಹಿಮೇಶ್ ರೆಶಮಿಯಾರ ಹಾಡುಗಳು ದೊಡ್ಡದಾಗಿ ಕೇಳಿಸುತ್ತಿತ್ತು.. ಗಂಟೆ ನೋಡಿದಾಗ ರಾತ್ರೆ ಒಂದುವರೆ! ಕಿಟಕಿಯಲ್ಲೇ ಇಣುಕಿದೆ.. “ಗೇಟ್ ವೇ ಆಫ್ ಮಲ್ನಾಡ್” ಹೋಟೇಲ್ ಬೋರ್ಡ್ ಕಾಣಿಸಿತು, ಓಹ್ ಬಸ್ಸ್ ೧೦ ನಿಮಿಷ ನಿಲ್ಲುತ್ತೆ, ಇಳ್ಕೊಬಹುದು ಅಂದ್ರು. ಇನ್ನೇನು, ಎಲ್ಲರೂ ಇಳಿತಾ ಇದ್ರು. ಸ್ವಲ್ಪ ಯೋಚಿಸಿ ನಾನೂ ಇಳ್ಕೊಂಡೆ. ಪ್ರಕೃತಿಯ ಕರೆ ಬಂದಿದ್ದರಿಂದ ಇಳಿಯಬೇಕಾದ ಅನಿವಾರ್ಯತೆ!  ೩-೪ ಬಸ್ ಬೇರೆ ಬಸ್ಗಳೂ ಅಲ್ಲಿದ್ದವು. ಪ್ರಯಾಣಿಕರೆಲ್ಲ ಹೊರಗಡೆ ಅತ್ತಿತ್ತ ವಾಕಿಂಗ್! ನಾನು ನೇರವಾಗಿ  ಹೋಟೆಲ್ ಒಳಗಡೆ ಹೋದೆ. ೪-೫ ಜನ ಒಳಗಡೆ ದೋಸೆ ,ಇಡ್ಲಿ ತಿಂತಾ ಇದ್ರು. ಟಾಯಿಲೆಟ್ ಬೋರ್ಡ ಎಲ್ಲಿದೆ ಎಂದು ನೋಡಿ ಆ ಕಡೆ ಹೋದೆ. ಒಂದಿಬ್ಬರು ಹೆಂಗಸರು ಒಂದು ರೀತಿಯ ಮುಖ ತಿರುವಿ ಹೊರಬರುತ್ತಿದ್ದರು!


ಒಲ್ಲದ ಮನಸ್ಸಿಂದ ಮೆಲ್ಲನೆ ಹೋಗಿ ಬಾಗಿಲು ದೂಕಿದೆ. ಬೆಚ್ಚಿ ಬೀಳಿಸಿತು ಆ ಗಲೀಜು ಟಾಯಿಲೆಟ್! ಎಷ್ಟು ಕೆಟ್ಟದಾಗಿ ಟಾಯಿಲೆಟ್ ಕಾಣಿಸಿಕೊಳ್ಳ ಬಲ್ಲದೋ ಅದರ ಗೆರೆಯನ್ನೂ ಮೀರಿ ಹೋಗಿತ್ತು!! ಮತ್ತಿನ ಬಾಗಿಲು ತೆರೆದರೆ ಅದೂ ಸೇಮ್! ಅದರ ಮತ್ತಿನ ಬಾಗಿಲು ಪುಶ್ ಮಾಡಿದೆ ಓಪನ್ ಏನೋ ಆಯ್ತು! ಒಳಗೊಂದು ಹೆಂಗಸು “ಸಾರಿ ಸಾರಿ” ಎಂದು ಬೊಬ್ಬಿಟ್ಟು ಹೊರ ಹೋದರು! ಒಮ್ಮೆ ಹೆದರಿ ಬೆಚ್ಚಿ ಬಿದ್ದೆ! ಅದೊಂದು ಟಾಯಿಲೆಟ್ ಗೆರೆಯನ್ನು ದಾಟಿರಲಿಲ್ಲ.ಆದರೆ ಗೆರೆ ತಲುಪಿತ್ತು ಬಿಡಿ! ಇನ್ನೇನು ಒಳ ಹೋದರೆ ಚಿಲಕ ಇಲ್ಲ! ಇದು ಬಿಟ್ಟರೆ ಬೇರೆ ಗತಿ ಇಲ್ಲ! ಒಂದು ಕೈ ಡೋರ್ ಚಿಲಕಕ್ಕೆ ಹಿಡಿದಿರಬೇಕಾಯ್ತು! ಬೇಡ ಬೇಡ ಎಂದರೂ ಒಳಗಿದ್ದ ಡೆಸ್ಟ ಬಿನ್ ನತ್ತ ಕಣ್ಣು ಹಾಯಿತು! ದೇವರೇ ನಾನೆಲ್ಲಿದ್ದೇನೆ ಎಂದು ಸಂಶಯ ಹುಟ್ಟಿಸಿತು!! ಅದರಲ್ಲಿ ಸಾರಾಯಿ ಬಾಟಲ್ ನಿಂದ ಕಾಂಡೋಮ್ ವರೆಗೂ.. ತುಂಬಿತ್ತು! ಅಬ್ಬಾ ದಡ ಬಡ ಹೋಟೆಲ್ ಹೊರ ಬಂದು ಒಂದು ಸೆಕುಂಡು ನಿಟ್ಟುಸಿರು ಬಿಟ್ಟು ಅತ್ತ ತಿರುಗಿದೆ.ಕತ್ತಲಾದ ಬಯಲು ಆ ಕಡೆ.ಅಲ್ಲೆಲ್ಲಾ ಗಂಡಸರು ಅವರ ಪಾಡಿಗೆ ಮೂತ್ರ ಹೊಯ್ಯುವುದರಲ್ಲಿ ಬ್ಯುಸಿ! ಕೆಟ್ಟ ಟಾಯಿಲೆಟ್ ದರುಶನ ಮಾಡ್ಬೇಕಾಗಿ ಬರೋದಿಲ್ಲ! ಏನೂ ಕಾಣದ ಕತ್ತಲ ಬಯಲು!


ಸೀದ ಬಸ್ ಒಳಗೆ ಹತ್ತಿ ಹೋಟೆಲ್ ಬೋರ್ಡ ನೋಡಿದೆ.. ಜಾಗದ ಹೆಸರಿರಲಿಲ್ಲ, ಆದ್ರೆ ಇದು ಹಾಸನವೇ ಇರಬೇಕೆಂದು ಟಾಯಿಲೆಟ್ ನೋಡಿ ಅಂದುಕೊಂಡೆ! ಆ ಯೋಚನೆಯನ್ನೂ ಬೆಚ್ಚಿಬೀಳಿಸುವಷ್ಟು ದೊದ್ದದಾಗಿ ಅಲ್ಲಿದ್ದ ಧ್ವನಿವರ್ಧಕ! ಪಾಪ ಬಸ್ ನಲ್ಲಿದ್ದ ಮಕ್ಕಳಿಬ್ಬರು ಅಳುತ್ತಿದ್ದವು.. ಆ ಶಬ್ದವೇ ಅವ್ರನ್ನು ನಿದ್ದೆ ಇಂದ ಎಬ್ಬಿಸಿರಬಹುದು! ಎಲ್ಲಾ ಪ್ರೈವೇಟ್ ಬಸ್ ಗಳೂ ಅಲ್ಲೇ ಬಂದು ನಿಲ್ಲುತ್ತಿತ್ತು! ಬಸ್ ನವರನ್ನೊಮ್ಮೆ ಟಾಯಿಲೆಟ್ ಒಳಗೆ ಕಳುಹಿಸಬೇಕು ಎಂದು ನಮ್ಮವರಲ್ಲಿ ಗುಸುಗುಸು ಎನ್ನುತ್ತಿದ್ದೆ.ಕೊನೆಗೆ ಮನದಲ್ಲಿ ಮೂಡಿದ ಮಾತೆಂದರೆ ನಾನೂ ಹುಡುಗನಾಗಿ ಹುಟ್ಟಿದ್ದರೆ ಟಾಯಿಲೆಟ್ ಗೆ ಒದ್ದಾಡ ಬೇಕಿರಲಿಲ್ಲ ಎಂದುಕೊಂಡೆ!ಆ ಟಾಯಿಲೆಟ್ ದರುಶನ ಪಡೆದ  ಎಲ್ಲಾ ಹೆಣ್ಣು ಮಕ್ಕಳಲ್ಲಿ ಈ  ಮಾತೊಂದು ಮನದಲ್ಲೇ  ಮೂಡುತ್ತಿತ್ತೇನೋ!!ಬೆಂಗಳೂರು ವರೆಗೂ ಆ ಟಾಯಿಲೆಟ್ ದೃಶ್ಯಗಳೇ ಕಣ್ಣೆದುರೆ ಬರುತ್ತಿತ್ತು! ಎಷ್ಟೊಂದು ನಿರ್ಮಲ ಶೌಚಾಲಯಗಳಿಲ್ಲ… ಅವುಗಳೆದುರೇ ನಿಲ್ಲಿಸಬಾರದೇ.?. ೨ ರೂ ಕೊಟ್ಟರೇನಂತೆ? ಬಂದು ನೆಮ್ಮದಿಯಲ್ಲಿ ನಿದ್ರಿಸಬಹುದು! ಇದರ ಕುರಿಸು ಎಚ್ಚರಿಸುವವರಾರು? ದನಿಗೂಡಿಸುವವರಾರು?


ನಲ್ಮೆಯಿಂದ

ದಿವ್ಯ


ಚಿತ್ರಕೃಪೆ:ಗೂಗಲ್

Permalink 5 ಟಿಪ್ಪಣಿಗಳು

Next page »