“CAUTIOUSMIND” ಬ್ಲಾಗ್ ನಲ್ಲಿ ನನ್ನ “ಮಾತಾಡೋ ಮನ”

ಆಗಷ್ಟ್ 22, 2010 at 7:57 ಅಪರಾಹ್ನ (article)

ಸುಘೋಷ್ ಎಸ್. ನಿಗಳೆ. ಅವರ “ CAUTIOUSMIND ” ಬ್ಲಾಗ್ನಲ್ಲಿ ನನ್ನ ಬ್ಲಾಗ್ ಬಗ್ಗೆ ಒಂದಿಷ್ಟು ವಿಷಯ ತಿಳಿಸಿರುವುದ ಕಂಡು ಬೆರಗಾದೆ.  “ದಿವ್ಯಾರ ಮಾತಡೋ ಮನ ಖುಷಿ ಆಯ್ತು ನನ್ನ ಬ್ಲಾಗ್ ಬಗ್ಗೆ ಕಂಡು!! ತಮಗ ಇಲ್ಲಿಂದಲೇ ಧನ್ಯವಾದಗಳು..  ಹೀಗೇ ಪ್ರೋತ್ಸಾಹಿಸುತ್ತಿರಿ…

ನಲ್ಮೆಯಿಂದ

ದಿವ್ಯ

Advertisements

Permalink ನಿಮ್ಮ ಟಿಪ್ಪಣಿ ಬರೆಯಿರಿ

ಬೆಂಗಳೂರಲ್ಲಿ ಕಿಲಕಿಲ ನಕ್ಕ ಹೂಗಳು..

ಆಗಷ್ಟ್ 17, 2010 at 1:29 ಅಪರಾಹ್ನ (article) (, , , )

ಇಂಡಿಯಾ ಗೇಟ್

ಯಸ್.. “ಲಾಲ್ ಬಾಗ್ ನಲ್ಲಿ ಫಲಪುಷ್ಫ ಪ್ರದರ್ಶನ, ಹತ್ತು ದಿನ ನಡೆಯಿತು ಹೂವು ಹಣ್ಣುಗಳ ನರ್ತನ..”
ನಿನ್ನ ಚೆಲುವಿಗೆ ಮನ ಸೋಲದವರಾರು?? ಎಂಥಾ ನೋವನ್ನೂ ಮರೆಸಿ ನಿನ್ನೆಡೆಗೆ ಸೆಳೆಯುವ ಅಯಸ್ಕಾಂತ ನೀನು.. ಹೂಗಳ ವಿಷಯ ಹೇಳ್ತಾ ಇದೀನಿ.. ಹುಡುಗೀರ್ದಲ್ಲ.. ಕಣ್ರೀ..

ಬೆಂಗಳೂರೆಂಬ ಐಟಿ ಬಿಟಿ ನಗರದಲ್ಲಿ, ಬರಿ ಸಿಲಿಕಾನ್ ಮಾತ್ರವಲ್ಲ ಫ್ಲವರ್ ಗಾರ್ಡನ್ ಇದೆ ಎಂದು ತೋರಿಸಿತು ಆ ಪ್ರದರ್ಶನ. ಆಗಸ್ಟ್ ಎಂಟರಂದು ಮುಸ್ಸಂಜೆ ಹೋಗಿದ್ದೆ. ಅಯ್ಯೋ ಟ್ರಾಫಿಕ್ .. ಪಾರ್ಕಿಂಗ್ ಗೆ ಜಾಗಾನೆ ಇಲ್ಲ.. ಲಾಲ್ ಬಾಗ್ ಎಲ್ಲಾ ಗೇಟ್ ಎದುರು ಸುತ್ತು ಬಂದು ಅಂತೂ ಒಂದು ಕಡೆ ಸಿಕ್ತು.. ೩೦ರೂ ಪ್ರವೇಶ ದರ! ಎತ್ತ ಕಡೆಯಿಂದ ನೋಡಲು ಪ್ರಾರಂಭಿಸೋಣ ಎನ್ನೋ ಕನ್‌ಫ್ಯೂಶನ್ … ಅಂತೂ ಗಾಜಿನರಮನೆಗೆ ಮೊದಲ ಎಂಟ್ರಿ ಕೊಟ್ಟೆ.. ವಾವ್.. ಎದುರೆ ಬೃಹದಾಕರದಲ್ಲಿ ನಿರ್ಮಿಸಿದ್ದರು ಇಂಡಿಯಾ ಗೇಟ್..! ಕೆಂಪು ಗುಲಾಬಿಯ ಗೇಟ್! ಹಾಗೇ ಒಂದು ಮೂಲೆಯೊಂದ ನೋಡುತ್ತಾ.. ನೋಡುತ್ತಾ ಪ್ರತಿಯೊಂದು ಹೂಗಳ ಫೋಟೋ ಹಿಡಿಯುತ್ತಾ.. ಪೋಲೀಸರಿಂದ “ಮುಂದೆ ಹೋಗಿ ಮುಂದೆ ಹೋಗಿ” ಎಂದು ಹೇಳಿಸ್ಕೊಳ್ತಾ ಮುಂದೆ ಸಾಗಿದೆ..

ಆಹಾ.. ಪುಟ್ಟ ಹೂವಿಗೂ ಅದೆಂತಹಾ ಚೆಲುವು! ದೊಡ್ಡ ಹೂವಿಂದ ಹಿಡಿದು ಅತಿ ಪುಟ್ಟದಾದ ಹೂಗಳೂ ನೋಡುಗರನ್ನು ಆಕರ್ಷಿಸಿತು.. ಎಲ್ಲಾ ಬಣ್ಣದ ಹೂಗಳು..! ಅವುಗಳಲ್ಲೆಲ್ಲಾ ಮೊದಲ ಬಹುಮಾನ, ಎರಡನೇ ಬಹುಮಾನ ಎಂಬಿತ್ಯಾದಿ ಬೋರ್ಡಗಳು. ಆರ್ಕಿಡ್ ಹೂಗಳಂತೂ ಸುಂದರ! ಏನ್ ಕಲರ್ ಫುಲ್  ಅಂತೀರಾ.. ಹೀಗೆ ಹೊಗಳುತ್ತಾ ಚೆಲುವನ್ನು ನೋಡುತ್ತಾ ಗಾಜಿನರಮನೆಯ ಹೊರಬರಲು ಬೇಕಾಯ್ತು ೨ ಗಂಟೆ! ಆಮೇಲೆ ಕಣ್ಣಿಗೆ ಬಿತ್ತು, ದೊಡ್ಡದಾದ ಬಾಸ್ಕೆಟ್ ಬ್ಯಾಗ್.. ವಯರ್ ಗಳ ಜೋಣಣೆಯಿಂದ ಮಾಡಿದ್ದೆಂದು ಹತ್ತಿರದಿಂದ ನೋಡಿದಾಗಳೇ ತಿಳಿಯಿತು.

ಸುಗಂಧರಾಜ

ಆರ್ಕಿಡ್

ಕಳ್ಳಿ ಗಿಡ

ಕಳ್ಳಿ ಹೂಗಳನ್ನು ಪಕ್ಕದ ಕಾರ್ನರ್ನಲ್ಲೇ ಇಟ್ಟಿದ್ದರು.., ಆದರೆ ಅದು ಎಲ್ಲರ ಕಣ್ಣಿಗೆ ಬೀಳೋ ಜಾಗದಲ್ಲಿರಲಿಲ್ಲ ಏಕೋ?! ಹೊಸದಾಗಿತ್ತು! ಪುಟ್ಟ ಸ್ಟಾಲ್ ನಲ್ಲಿ ಹೂಗಳ ಬೀಜ ಬೇರು ಮಕ್ಕಳ ಆಟಿಕೆಗಳು ಔಷದೀಯ ಸಸ್ಯಗಳು ಮಾರಾಟಕ್ಕಿಟ್ಟಿದ್ದರು, ಮುಂದೆ ಹೋದಾಗ ಕಣ್ಣಿಗೆ ಕಂಡಿತು ತರಕಾರಿ ಬೆಳೆಸಿದ ಪಾಟ್ಗಳು, ಕ್ಯಾರೆಟ್ ನಿಂದ ಹಿಡಿದು ಕುಂಬಳಕಾಯಿವರೆಗೂ ಎಲ್ಲಾ ತರಕಾರಿ ಸಸ್ಯ,ಬಳ್ಳಿಗಳಿದ್ದವು.

ಚಪ್ಪಟೆ ಕುಂಬಳಕಾಯಿ ನನಗೆ ಹೊಸದಾಗಿತ್ತು ಅಬ್ಬಾ ಅದ್ಭುತವೇ ಸರಿ! ಹಣ್ಣುಗಳ ಪ್ರದರ್ಶನ ಇರುವ ಜಾಗದಲ್ಲಂತು ಕಂಡು ಕೇಳರಿಯದ ಹಣ್ಣುಗಳನ್ನು ನೋಡಿ ಖುಷಿ ಆಯ್ತು.ಇವೆಲ್ಲಾ ನೋಡಿ ಮುಗಿಸೋ ಹೊತ್ತಿಗೆ ಕಾಲುಗಳು ಸೋತು ಹೋಗಿದ್ದರಿಂದ ಮನೆ ಕಡೆಗೆ ಹೆಜ್ಜೆ ಹಾಕಿದೆ..

ನಲ್ಮೆಯಿಂದ
ದಿವ್ಯ

ಚಿತ್ರಕೃಪೆ: ಉಮೇಶ್ ಕುಮಾರ್. ಶಿಮ್ಲಡ್ಕ.

Permalink 4 ಟಿಪ್ಪಣಿಗಳು

Next page »