ಡಾ|| ಅಂಬೇಡ್ಕರ್ ರವರೆ ಮಗದೊಮ್ಮೆ ಹುಟ್ಟಿ ಬಂದು ಸಮಾನತೆಯ ತನ್ನಿ!

ಏಪ್ರಿಲ್ 13, 2010 at 1:47 ಅಪರಾಹ್ನ (article) (, )

ಎಪ್ರಿಲ್ ೧೪.., ಮಹಾನ್ ವ್ಯಕ್ತಿ ಡಾ|| ಅಂಬೇಡ್ಕರ್ ಅವರು ಜನುಮವೆತ್ತಿ ಬಂದ ದಿನ.. ಮರೆಯಲಾದೀತೇ ನಮ್ಮ ಸಂವಿಧಾನ ಶಿಲ್ಪಿಯ? ರಾಷ್ಟ್ರಕ್ಕೆ ಮಹಾನ್ ಕೊಡುಗೆಯನ್ನೇ ಕೊಟ್ಟಿದ್ದಾರೆ. ಸಮಾಜದ ಗಣ್ಯ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಅಸ್ಪೃಶ್ಯತೆಯನ್ನು ಹೋಗಲಾಡಿಸಿದವರು.. ಮೀಸಲಾತಿ ನೀತಿಯನ್ನು ತಂದಿಟ್ಟವರು..

ಮಾಡಿದ್ದೆಲ್ಲವೂ ಒಳಿತೆನ್ನೋಣ.. ಆದರೆ ಅಂಬೇಡ್ಕರ್ರವರು ಒದಗಿಸಿದ, ಜಾತಿವರ್ಗ ಎನ್ನೋ ಮೀಸಲಾತಿ ನೀತಿಯ ಅಡ್ವಾನ್ಟೇಜ್ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?? ಈಗ ಮೀಸಲಾತಿ ಬೇಕಿರುವುದು ಬಡತನದ ರೇಖೆಗಿಂತ ಕೆಳಗಿರುವವರಿಗೆ ಹೊರತು, ಜಾತಿವರ್ಗಗಳಿಗಲ್ಲ…!!
ಅಂಬೇಡ್ಕರರವರು ಗತಿಸಿ ವರುಷಗಳೇ ಕಳೆದರೂ ಜಾತಿವರ್ಗದಲ್ಲಿ ಸಾಮಾನ್ಯ ಮಟ್ಟದ ಸಮಾನತೆ ಬಂದಮೇಲೂ ಓಟ್ ಗೋಸ್ಕರ ಮೀಸಲಾತಿ ಕಾಯಿದೆಯನ್ನು ಮುಂದುವರೆಸುವ ಅಗತ್ಯವಿಲ್ಲ.. ಅದರ ಅಗತ್ಯವಿರುವುದು ಬಡತನದಲ್ಲಿರುವವರಿಗೆ.

ಕೆಳವರ್ಗದವರು  ಅಂಬೇಡ್ಕರ್ ಕಾಲದಲ್ಲಿ ಬಡವರಾಗಿದ್ದರು ಒಪ್ಪಿಕೊಳ್ಳೋಣ. ಏನೋ ಮುಂದುವರಿಯಲಿ ಎಂದು ಮೀಸಲಾತಿಗೆ ಎಸ್ ಎಂದರೆ  ಮುಂದುವರಿದ ನಂತರವೂ ಅದಕ್ಕೋಸ್ಕರ ಹಾತೊರೆಯುವುದು ಎಷ್ಟು ಸಮಂಜಸ? ಎಲ್ಲಾ ವರ್ಗದಲ್ಲೂ ಬಡತನದಲ್ಲಿರುವವರಿದ್ದಾರೆ.. ಅಂಥವರಿಗೆ ಇನ್ನು ಮೀಸಲಾತಿ ಕಲ್ಪಿಸಬೇಕಾಗಿದೆ. ಮೀಸಲಾತಿಯ ವಿರುದ್ದ ಯಾರೂ ಏಕೆ ಮಾತನಾಡುತ್ತಿಲ್ಲ. ಅವರು ೪-೫ ಮಾಳಿಗೆ ಮನೆ ಕಟ್ಟಿ ಸುಖದಲ್ಲಿ, ಕಡಿಮೆ ಖರ್ಚಿನಲ್ಲಿ ವಿಧ್ಯಭ್ಯಾಸವೆಲ್ಲ ದೊರೆತು ಮುಂದುವರಿದರೂ, ಹಿಂದುಳಿದಿದ್ದೇವೆಂದು ಆ ಮೀಸಲಾತಿ ಕಾಯಿದೆಯ ಸದುಪಯೋಗ ಪಡೆಯುವಾಗ, ಅದನ್ನು ವಿರೋಧಿಸುವುದಾದರೂ ಹೇಗೆ??

ಕೊನೆಯ ಪಕ್ಷ, ಶೈಕ್ಷಣಿಕ ಕ್ಷೇತ್ರದಲ್ಲಾದರೂ,ಈ ಮೀಸಲಾತಿಯನ್ನು  ರದ್ದುಗೊಳಿಸಬಹುದು. ಅದರ ಅಗತ್ಯ ಅಲ್ಲಿಲ್ಲ!! ಕಷ್ಟ ಪಟ್ಟು ಸಿ.ಇ.ಟಿ ಬರೆದ ಮಕ್ಕಳು ಇರುಳು ಹಗಲು ಓದಿ ನಿರ್ಧಿಷ್ಟ ಗುರಿ ಇಟ್ಟು, ಉತ್ತಮ ಕಾಲೇಜಿನ ಕನಸು ಕಂಡು, ಕೌಂನ್ಸಿಲ್ ಗೆ ಹೋದರೆ, ಅವನಿಗೆ ಉತ್ತಮ ಅಂಕವಿದ್ದರೂ ಬೇಕಾದ ಕಾಲೇಜ್ ಸಿಗಲ್ಲ, ಅದೇ ಮೀಸಲಾತಿ ಇರುವವರಿಗೆ, ಮೊದಲ ಆಧ್ಯತೆಯ ಕಾಲೇಜ್ನಲ್ಲಿ ಪ್ರವೇಶ. ಅನ್ಯಾಯವೆಂದೆನಿಸುವುದಿಲ್ಲವೇ?? ಎಲ್ಲಾ ಮಕ್ಕಳೂ ಅವರ ಶ್ರಮ, ಪ್ರಯತ್ನಕ್ಕೆ ತಕ್ಕ ಫಲವನ್ನೇ ಬಯಸುತ್ತಾರೆ. ಹೀಗೆ ಕಣ್ಣೆದುರಿಗೆ ತಾವು ಹೆಚ್ಚು ಶ್ರಮವಹಿಸಿದರೂ ಸಿಗದ ಸೀಟ್ ಕಡಿಮೆ ಅಂಕದವನಿಗೆ ದೊರಕಿದಾಗ ಅನ್ಯಾಯವಾಗುತ್ತಿದೆ ಎಂದು ಎನಿಸದಿರದು!!
ಇಂಜಿನಿಯರಿಂಗ್ ಗೆ ಎಲ್ಲರೂ ೧೬೦೦೦ ಸಿ.ಇ.ಟಿ ಗೆ ಕಟ್ಟಿದರೆ ಮೀಸಲಾತಿ ಇರುವವರಿಗೆ ಬರಿ ೨೦೦೦!!! ಸಿಗುವ ವಿಧ್ಯಾಭ್ಯಾಸ ಇಬ್ಬರಿಗೂ ಸೇಮ್!! ಮತ್ತೆ ಕೊಡುವ ಹಣದಲ್ಲೇಕೆ ವ್ಯತ್ಯಾಸ?? ಈಗ ಬ್ಯಾಂಕ್ ಲೋನ್ ಗಳೆಲ್ಲ ಇರುವುದರಿಂದ ಹಣ ಕಟ್ಟಲು ಕಷ್ಟವಾಗದು. ಕಷ್ಟ ಪಟ್ಟು ಓದಿ ದುಡಿದು ತೀರಿಸಿದರಾಯಿತು.!! ಸುಲಭದಲ್ಲಿ ದೊರೆತ ವಿದ್ಯೆಯಲ್ಲಿ ಯಾವತ್ತೂ ಓದುವ ಪ್ರಯತ್ನ ಕಡಿಮೆಯೇ ಇರುತ್ತದೆ!!

ಇದು ಹಾಗಿರಲಿ, ವರುಷಕ್ಕೂ ಎಲ್ಲರಿಗೂ ೧೬೦೦೦ ವಾದರೆ, ಮೀಸಲಾತಿಯವರಿಗೆ ೨೦೦೦ವಷ್ಟೇ,,!! ಎಲ್ಲಿದೆ ಸಮಾನತೆ?? ಗ್ರಂಥಾಲಯ ಓದುವ ವಿಷಯದಲ್ಲೂ ಏಕೀ ಮೀಸಲಾತಿ?? ಮೀಸಲಾತಿ ಇರುವವರಿಗೆ ಗ್ರಂಥಾಲಯದ ಒಳಗೊಂದು ಬೇರೆಯೇ ಕೊಠಡಿ ಅಲ್ಲಿಗೆ, ಮೀಸಲಾತಿಯವರಿಗೆ ಮಾತ್ರ ಪ್ರವೇಶ. ಜನರಲ್ ಲೈಬ್ರೆರಿಯಲ್ಲಿ ಎಲ್ಲಾ ಹಳೆಯ ಸಿಲೆಬಸ್ ನಲ್ಲಿ ಹೇಳಿರದ ಪುಸ್ತಕಗಳಿದ್ದರೆ, ಆ ಕೊಠಯಲ್ಲಿ ಎಲ್ಲಾ ಹೊಸ ಎಡಿಶನ್ ಪುಸ್ತಕ!! ಮೀಸಲಾತಿಯವರಿಗೆ ಹೊರಗಿಂದ ಸಾವಿರಾರು ರುಪಾಯಿಗಳ ಪುಸ್ತಕ ತೆಗೆಯೋ ಅಗತ್ಯವೇ ಬರಲ್ಲ! ಎಕ್ಟ್ರಾ ಪುಸ್ತಕಗಳೂ ಇರುತ್ತವೆ!! ಜನರಲ್ ಗೆ ಏನೂ ಇಲ್ಲ!! ಓದುವ ವಿಷಯಕ್ಕೂ ಮೀಸಲಾತಿ ಬೇಕೇ??? ಮೀಸಲಾತಿ ಇರುವವರಲ್ಲಿ, ಹಣವಿಲ್ಲದೇನಲ್ಲ, ಹೀಗೆ ಸೌಲಭ್ಯಗಳಿದ್ದರೆಮೀಸಲಾತಿ ಸಿಗುತ್ತಿರುವವರೆಲ್ಲರೂ ಬಡತನದಲ್ಲಿಯೇ ಇರುವರೆಂದು ಹೇಳಿದರೆ ನಂಬುವುದಾದರೂ ಹೇಗೆ?? ಸುಲಭದಲ್ಲಿ ಸೀಟ್! ಕಡಿಮೆ ಹಣದಲ್ಲಿ ಉತ್ತಮ ಮಟ್ಟದ ವಿಧ್ಯಾಭ್ಯಾಸ, ಮೀಸಲಾತಿ ಪುಸ್ತಕಗಳು!! ದೊಡ್ಡ ಮನೆಯ ಮಾಲಿಕರ ಮಕ್ಕಳು, ಅದೇ ಮಟ್ಟದಲ್ಲಿ ಅನಗತ್ಯ ಖರ್ಚು ಮಾಡುವುದು!! ಸುಲಭದಲ್ಲಿ ಮೀಸಲಾತಿಯಿಂದ ಉದ್ಯೋಗ!! ಪರಿಶ್ರಮ ಪಟ್ಟವನಿಗೆ ಪಡುತ್ತಲೇ ಇರಬೇಕು!! ಇದು ಮೀಸಲಾತಿಯ ಆಗು ಹೋಗುಗಳು!! ಇದೆಲ್ಲವೂ ಮನಸ್ಸಿನಲ್ಲಿ,ಸಮಾಜದಲ್ಲಿ,ನಿಜವಾಗಿಯೂ ಅಸಮಾನತೆಯು ಎದ್ದು ನಿಲ್ಲುವಂತೆ ಮಾಡುತ್ತವೆಂದು ಎನಿಸುವುದಿಲ್ಲವೇ??

ಡಾ|| ಬಿ ಆರ್ ಅಂಬೇಡ್ಕರ್ ರವರೆ ಮತ್ತೊಮ್ಮೆ ಜನ್ಮವೆತ್ತಿ ಇದೇ ಭಾರತಾಂಬೆಯ ಓಡಲಲ್ಲಿ ಹುಟ್ಟಿ ಬನ್ನಿ.. ಈ ಅಸಮಾನತೆನ್ನು ಹೋಗಲಾಡಿಸಿ… ಬಡತನದಲ್ಲಿರುವವರಿಗೆ ಮೀಸಲಾತಿ ಸಿಗುವಂತೆ ಮಾಡಿ.. ಅದು ನಿಮ್ಮಿಂದ ಮಾತ್ರವೇ ಸಾಧ್ಯ!! ದೇಶದ ಜನತೆಗೆ ನ್ಯಾಯ ದೊರಕಿಸಿ ಕೊಡಿ!!!

-ನಲ್ಮೆಯಿಂದ
ದಿವ್ಯ

Advertisements

12 ಟಿಪ್ಪಣಿಗಳು

 1. ksraghavendranavada said,

  ನಮಸ್ಕಾರ, ದಿವ್ಯ

  ಈ ದಿನ ಮೊದಲನೇ ಬಾರಿಗೆ ನಿಮ್ಮ ಬ್ಲಾಗ್ ಗೆ ಭೇಟಿ ಕೊಟ್ಟೆ. ಮೊದಲನೇ ಸಲವೇ ದ೦ಗಾಗಿ ಹೋದೆ! ಎ೦ಥಹ ಅಧ್ಬುತ ಬರಹಗಾರ್ತಿ ನೀವು! ಅಬ್ಬಾ. ಅ೦ಬೇಡ್ಕರ್ ಚಿ೦ತನೆ ನನಗೆ ಹಿಡಿಸಿತು. ಚೆನ್ನಾಗಿರಿ! ನಿಮ್ಮ ಲೇಖನಿಯಿ೦ದ ಇ೦ಥಾ ಇನ್ನೂ ಹೆಚ್ಚೆಚ್ಚು ಚಿ೦ತನೆಗಳು ಬರಲಿ ಎನ್ನುವುದೇ ನಮ್ಮ ಹಾರೈಕೆ.

  ನಮಸ್ಕಾರ.

 2. ದಿವ್ಯ said,

  ನಾವಡ ಸಾರ್…
  ತಮ್ಮ ಪ್ರೋತ್ಸಾಹಕ್ಕ ಚಿರರುಣಿ… ಖಂಡಿತಾ ಬರೆಯುತ್ತೇನೆ.. ಹೀಗೇ ಪ್ರೋತ್ಸಾಹಿಸುತ್ತಿರಿ

 3. ವಿನಾಯಕ ಕುರುವೇರಿ said,

  ದಿವ್ಯ,
  ಮೀಸಲಾತಿಯನ್ನು ಇಮ್ಪ್ಲೆಮೆಂತ್ ಮಾಡಿದಾಗ ಅಂಬೇಡ್ಕರರು ಇದರ ದುಷ್ಪರಿಣಾಮಗಳನ್ನೂ ಮುಂದಾಲೋಚಿಸಿದ್ದರು. ಅದಕ್ಕಾಗೆ ಅವರು ಈ ಮೀಸಲಾತಿ ಕಾಯಿದೆ ಕೇವಲ ಸ್ವಾತಂತ್ರ್ಯಾನಂತರದ ಹತ್ತಿಪ್ಪತ್ತು ವರ್ಷಗಳಿಗಷ್ಟೇ ಇರಬೇಕೆಂದೂ ಇಚ್ಚಿಸಿದ್ದರು.ಆದ್ರೆ ನಮ್ಮ ದುರುಳ ಸರಕಾರಗಳು ತಮ್ಮ ವೋಟು ಬ್ಯಾಂಕ್ ಕಾಪಾಡಿಕೊಳ್ಳಲು ಇದನ್ನೇ ಅಸ್ತ್ರವಾಗಿ ಬಳಸುತ್ತಾ ಇನ್ನೂ ಮೀಸಲಾತಿಯನ್ನೇ ಹಿಡಿದುಕೊಂಡು ತೊಳಚಾಡುತ್ತಿವೆ . ಪುಣ್ಯಕ್ಕೆ ನಾರಾಯಣ ಮೂರ್ತಿಯಂಥವರ ದಿಟ್ಟ ನಡೆಗಳಿಂದ ಐ.ಟಿ ಕ್ಷೇತ್ರವೊಂದು ಮಾತ್ರ ಈ ಕಪಿಮುಷ್ಟಿಯಿಂದ ಮುಕ್ತಿ ಹೊಂದಿದೆ. ಬೇರೆ ಕ್ಷೇತ್ರಗಳೂ ಇನ್ತಾಗಲಿ ಅಂತ ಆಶಿಸೋಣ.

 4. Sandeep said,

  ಮಿಸಲಾತಿಯನ್ನು ನಮ್ಮ ಸರಕಾರಗಳು ದುರುಪಯೋಗ ಮಾಡಿ ಕೊಳ್ಳುತ್ತಾ ಇರುವುದನ್ನ ಎಲ್ಲ ಜನ ಸೇರಿ ವಿರೋಧಿಸಬೇಕು ಅಂತ ಒಳ್ಳೆ ಸಾಹಿತ್ಯ ದೊಂದಿಗೆ ಮನದಟ್ಟು ಮಾಡಿಕೊತ್ತದಕ್ಕೆ ಧನ್ಯವಾದಗಳು ದಿವ್ಯಾ.
  ಮಿಸಲಾತಿಯನ್ನು ಕೇವಲ ಹಿಂದುಳಿದ ವರ್ಗಗಲಿಗಷ್ಟೇ ಇದ್ದೆ ನಮ್ಮ ಕಾಂಗ್ರೆಸ್ ಸರಕಾರ ತಮ್ಮ ವೋಟು ಬ್ಯಾಂಕ್ ಗಳಿಗೂ ವಿಸ್ತರಿಸ ಹತ್ತಿದೆ ಇದನ್ನು ವಿರೋಧಿಸಿ ಮಿಸಲಾತಿಯ ಸರಿಯಾದ ಅರ್ಥ ತಿಳಿಸಲು ಶ್ರೀಮಾನ್ ಅಂಬೇಡ್ಕರ್ ಮತ್ತೆ ಹುಟ್ಟಿ ಬರಲೇ ಬೇಕು.

  ಥ್ಯಾಂಕ್ಸ್ ದಿವ್ಯಾ…

 5. sughosh s. nigale said,

  ಲೇಖನ 100% ಕರೆಕ್ಟಾಗಿದೆ….ಇಂತಹ ಮತ್ತಷ್ಟು ಲೇಖನಗಳು ಬರುತ್ತಿರಲಿ….

 6. rakeshsshetty said,

  ಗುಡ್ ದಿವ್ಯ 🙂

  ನಾನು ಈ ಬಗ್ಗೆ ಬರೀಬೇಕು ಅಂತ ೧ ತಿಂಗಳಿಂದ ಅಂದುಕೊಳ್ತಾನೆ ಇದ್ದೀನಿ…ಅದ್ಯಾವಾಗ ಬರಿತಿನೋ …ನಿನ್ನ ಪ್ರಶ್ನೆಗಳೇ ನನ್ನವು ಸಹ

 7. ಮಹೇಶ ಎಳ್ಯಡ್ಕ said,

  ದಿವ್ಯಾ,
  ಒಳ್ಳೆಯ ಚಿಂತನೆ, ತುಂಬಾ ಒಳ್ಳೆಯ ಬರವಣಿಗೆ. 🙂
  <>
  ಸರಿಯಾದ ಮಾತು.
  ಸಮಾನತೆಯ ತಕ್ಕಡಿ ತಪ್ಪುದಿಕ್ಕಿನೆಡೆಗೆ ಬಾಗುತ್ತಿದೆ. ಮತ್ತೊಮ್ಮೆ ಅಂಬೇಡ್ಕರ್ ಬರಬೇಕಾಗಿದೆ.

  ಒಳ್ಳೆಯ ಲೇಖನಕ್ಕೆ ಧನ್ಯವಾದಗಳು!

 8. santosh said,

  good one, liked it.

 9. Gurumurthy said,

  Good one Divyaa

  tumbaa chennagide article

 10. 2010 in review « ಮಾತಾಡೋ ಮನ said,

  […] ಡಾ|| ಅಂಬೇಡ್ಕರ್ ರವರೆ ಮಗದೊಮ್ಮೆ ಹುಟ್ಟಿ ಬಂ… April 2010 11 comments […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: