ಡಾ|| ಅಂಬೇಡ್ಕರ್ ರವರೆ ಮಗದೊಮ್ಮೆ ಹುಟ್ಟಿ ಬಂದು ಸಮಾನತೆಯ ತನ್ನಿ!

ಏಪ್ರಿಲ್ 13, 2010 at 1:47 ಅಪರಾಹ್ನ (article) (, )

ಎಪ್ರಿಲ್ ೧೪.., ಮಹಾನ್ ವ್ಯಕ್ತಿ ಡಾ|| ಅಂಬೇಡ್ಕರ್ ಅವರು ಜನುಮವೆತ್ತಿ ಬಂದ ದಿನ.. ಮರೆಯಲಾದೀತೇ ನಮ್ಮ ಸಂವಿಧಾನ ಶಿಲ್ಪಿಯ? ರಾಷ್ಟ್ರಕ್ಕೆ ಮಹಾನ್ ಕೊಡುಗೆಯನ್ನೇ ಕೊಟ್ಟಿದ್ದಾರೆ. ಸಮಾಜದ ಗಣ್ಯ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಅಸ್ಪೃಶ್ಯತೆಯನ್ನು ಹೋಗಲಾಡಿಸಿದವರು.. ಮೀಸಲಾತಿ ನೀತಿಯನ್ನು ತಂದಿಟ್ಟವರು..

ಮಾಡಿದ್ದೆಲ್ಲವೂ ಒಳಿತೆನ್ನೋಣ.. ಆದರೆ ಅಂಬೇಡ್ಕರ್ರವರು ಒದಗಿಸಿದ, ಜಾತಿವರ್ಗ ಎನ್ನೋ ಮೀಸಲಾತಿ ನೀತಿಯ ಅಡ್ವಾನ್ಟೇಜ್ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?? ಈಗ ಮೀಸಲಾತಿ ಬೇಕಿರುವುದು ಬಡತನದ ರೇಖೆಗಿಂತ ಕೆಳಗಿರುವವರಿಗೆ ಹೊರತು, ಜಾತಿವರ್ಗಗಳಿಗಲ್ಲ…!!
ಅಂಬೇಡ್ಕರರವರು ಗತಿಸಿ ವರುಷಗಳೇ ಕಳೆದರೂ ಜಾತಿವರ್ಗದಲ್ಲಿ ಸಾಮಾನ್ಯ ಮಟ್ಟದ ಸಮಾನತೆ ಬಂದಮೇಲೂ ಓಟ್ ಗೋಸ್ಕರ ಮೀಸಲಾತಿ ಕಾಯಿದೆಯನ್ನು ಮುಂದುವರೆಸುವ ಅಗತ್ಯವಿಲ್ಲ.. ಅದರ ಅಗತ್ಯವಿರುವುದು ಬಡತನದಲ್ಲಿರುವವರಿಗೆ.

ಕೆಳವರ್ಗದವರು  ಅಂಬೇಡ್ಕರ್ ಕಾಲದಲ್ಲಿ ಬಡವರಾಗಿದ್ದರು ಒಪ್ಪಿಕೊಳ್ಳೋಣ. ಏನೋ ಮುಂದುವರಿಯಲಿ ಎಂದು ಮೀಸಲಾತಿಗೆ ಎಸ್ ಎಂದರೆ  ಮುಂದುವರಿದ ನಂತರವೂ ಅದಕ್ಕೋಸ್ಕರ ಹಾತೊರೆಯುವುದು ಎಷ್ಟು ಸಮಂಜಸ? ಎಲ್ಲಾ ವರ್ಗದಲ್ಲೂ ಬಡತನದಲ್ಲಿರುವವರಿದ್ದಾರೆ.. ಅಂಥವರಿಗೆ ಇನ್ನು ಮೀಸಲಾತಿ ಕಲ್ಪಿಸಬೇಕಾಗಿದೆ. ಮೀಸಲಾತಿಯ ವಿರುದ್ದ ಯಾರೂ ಏಕೆ ಮಾತನಾಡುತ್ತಿಲ್ಲ. ಅವರು ೪-೫ ಮಾಳಿಗೆ ಮನೆ ಕಟ್ಟಿ ಸುಖದಲ್ಲಿ, ಕಡಿಮೆ ಖರ್ಚಿನಲ್ಲಿ ವಿಧ್ಯಭ್ಯಾಸವೆಲ್ಲ ದೊರೆತು ಮುಂದುವರಿದರೂ, ಹಿಂದುಳಿದಿದ್ದೇವೆಂದು ಆ ಮೀಸಲಾತಿ ಕಾಯಿದೆಯ ಸದುಪಯೋಗ ಪಡೆಯುವಾಗ, ಅದನ್ನು ವಿರೋಧಿಸುವುದಾದರೂ ಹೇಗೆ??

ಕೊನೆಯ ಪಕ್ಷ, ಶೈಕ್ಷಣಿಕ ಕ್ಷೇತ್ರದಲ್ಲಾದರೂ,ಈ ಮೀಸಲಾತಿಯನ್ನು  ರದ್ದುಗೊಳಿಸಬಹುದು. ಅದರ ಅಗತ್ಯ ಅಲ್ಲಿಲ್ಲ!! ಕಷ್ಟ ಪಟ್ಟು ಸಿ.ಇ.ಟಿ ಬರೆದ ಮಕ್ಕಳು ಇರುಳು ಹಗಲು ಓದಿ ನಿರ್ಧಿಷ್ಟ ಗುರಿ ಇಟ್ಟು, ಉತ್ತಮ ಕಾಲೇಜಿನ ಕನಸು ಕಂಡು, ಕೌಂನ್ಸಿಲ್ ಗೆ ಹೋದರೆ, ಅವನಿಗೆ ಉತ್ತಮ ಅಂಕವಿದ್ದರೂ ಬೇಕಾದ ಕಾಲೇಜ್ ಸಿಗಲ್ಲ, ಅದೇ ಮೀಸಲಾತಿ ಇರುವವರಿಗೆ, ಮೊದಲ ಆಧ್ಯತೆಯ ಕಾಲೇಜ್ನಲ್ಲಿ ಪ್ರವೇಶ. ಅನ್ಯಾಯವೆಂದೆನಿಸುವುದಿಲ್ಲವೇ?? ಎಲ್ಲಾ ಮಕ್ಕಳೂ ಅವರ ಶ್ರಮ, ಪ್ರಯತ್ನಕ್ಕೆ ತಕ್ಕ ಫಲವನ್ನೇ ಬಯಸುತ್ತಾರೆ. ಹೀಗೆ ಕಣ್ಣೆದುರಿಗೆ ತಾವು ಹೆಚ್ಚು ಶ್ರಮವಹಿಸಿದರೂ ಸಿಗದ ಸೀಟ್ ಕಡಿಮೆ ಅಂಕದವನಿಗೆ ದೊರಕಿದಾಗ ಅನ್ಯಾಯವಾಗುತ್ತಿದೆ ಎಂದು ಎನಿಸದಿರದು!!
ಇಂಜಿನಿಯರಿಂಗ್ ಗೆ ಎಲ್ಲರೂ ೧೬೦೦೦ ಸಿ.ಇ.ಟಿ ಗೆ ಕಟ್ಟಿದರೆ ಮೀಸಲಾತಿ ಇರುವವರಿಗೆ ಬರಿ ೨೦೦೦!!! ಸಿಗುವ ವಿಧ್ಯಾಭ್ಯಾಸ ಇಬ್ಬರಿಗೂ ಸೇಮ್!! ಮತ್ತೆ ಕೊಡುವ ಹಣದಲ್ಲೇಕೆ ವ್ಯತ್ಯಾಸ?? ಈಗ ಬ್ಯಾಂಕ್ ಲೋನ್ ಗಳೆಲ್ಲ ಇರುವುದರಿಂದ ಹಣ ಕಟ್ಟಲು ಕಷ್ಟವಾಗದು. ಕಷ್ಟ ಪಟ್ಟು ಓದಿ ದುಡಿದು ತೀರಿಸಿದರಾಯಿತು.!! ಸುಲಭದಲ್ಲಿ ದೊರೆತ ವಿದ್ಯೆಯಲ್ಲಿ ಯಾವತ್ತೂ ಓದುವ ಪ್ರಯತ್ನ ಕಡಿಮೆಯೇ ಇರುತ್ತದೆ!!

ಇದು ಹಾಗಿರಲಿ, ವರುಷಕ್ಕೂ ಎಲ್ಲರಿಗೂ ೧೬೦೦೦ ವಾದರೆ, ಮೀಸಲಾತಿಯವರಿಗೆ ೨೦೦೦ವಷ್ಟೇ,,!! ಎಲ್ಲಿದೆ ಸಮಾನತೆ?? ಗ್ರಂಥಾಲಯ ಓದುವ ವಿಷಯದಲ್ಲೂ ಏಕೀ ಮೀಸಲಾತಿ?? ಮೀಸಲಾತಿ ಇರುವವರಿಗೆ ಗ್ರಂಥಾಲಯದ ಒಳಗೊಂದು ಬೇರೆಯೇ ಕೊಠಡಿ ಅಲ್ಲಿಗೆ, ಮೀಸಲಾತಿಯವರಿಗೆ ಮಾತ್ರ ಪ್ರವೇಶ. ಜನರಲ್ ಲೈಬ್ರೆರಿಯಲ್ಲಿ ಎಲ್ಲಾ ಹಳೆಯ ಸಿಲೆಬಸ್ ನಲ್ಲಿ ಹೇಳಿರದ ಪುಸ್ತಕಗಳಿದ್ದರೆ, ಆ ಕೊಠಯಲ್ಲಿ ಎಲ್ಲಾ ಹೊಸ ಎಡಿಶನ್ ಪುಸ್ತಕ!! ಮೀಸಲಾತಿಯವರಿಗೆ ಹೊರಗಿಂದ ಸಾವಿರಾರು ರುಪಾಯಿಗಳ ಪುಸ್ತಕ ತೆಗೆಯೋ ಅಗತ್ಯವೇ ಬರಲ್ಲ! ಎಕ್ಟ್ರಾ ಪುಸ್ತಕಗಳೂ ಇರುತ್ತವೆ!! ಜನರಲ್ ಗೆ ಏನೂ ಇಲ್ಲ!! ಓದುವ ವಿಷಯಕ್ಕೂ ಮೀಸಲಾತಿ ಬೇಕೇ??? ಮೀಸಲಾತಿ ಇರುವವರಲ್ಲಿ, ಹಣವಿಲ್ಲದೇನಲ್ಲ, ಹೀಗೆ ಸೌಲಭ್ಯಗಳಿದ್ದರೆಮೀಸಲಾತಿ ಸಿಗುತ್ತಿರುವವರೆಲ್ಲರೂ ಬಡತನದಲ್ಲಿಯೇ ಇರುವರೆಂದು ಹೇಳಿದರೆ ನಂಬುವುದಾದರೂ ಹೇಗೆ?? ಸುಲಭದಲ್ಲಿ ಸೀಟ್! ಕಡಿಮೆ ಹಣದಲ್ಲಿ ಉತ್ತಮ ಮಟ್ಟದ ವಿಧ್ಯಾಭ್ಯಾಸ, ಮೀಸಲಾತಿ ಪುಸ್ತಕಗಳು!! ದೊಡ್ಡ ಮನೆಯ ಮಾಲಿಕರ ಮಕ್ಕಳು, ಅದೇ ಮಟ್ಟದಲ್ಲಿ ಅನಗತ್ಯ ಖರ್ಚು ಮಾಡುವುದು!! ಸುಲಭದಲ್ಲಿ ಮೀಸಲಾತಿಯಿಂದ ಉದ್ಯೋಗ!! ಪರಿಶ್ರಮ ಪಟ್ಟವನಿಗೆ ಪಡುತ್ತಲೇ ಇರಬೇಕು!! ಇದು ಮೀಸಲಾತಿಯ ಆಗು ಹೋಗುಗಳು!! ಇದೆಲ್ಲವೂ ಮನಸ್ಸಿನಲ್ಲಿ,ಸಮಾಜದಲ್ಲಿ,ನಿಜವಾಗಿಯೂ ಅಸಮಾನತೆಯು ಎದ್ದು ನಿಲ್ಲುವಂತೆ ಮಾಡುತ್ತವೆಂದು ಎನಿಸುವುದಿಲ್ಲವೇ??

ಡಾ|| ಬಿ ಆರ್ ಅಂಬೇಡ್ಕರ್ ರವರೆ ಮತ್ತೊಮ್ಮೆ ಜನ್ಮವೆತ್ತಿ ಇದೇ ಭಾರತಾಂಬೆಯ ಓಡಲಲ್ಲಿ ಹುಟ್ಟಿ ಬನ್ನಿ.. ಈ ಅಸಮಾನತೆನ್ನು ಹೋಗಲಾಡಿಸಿ… ಬಡತನದಲ್ಲಿರುವವರಿಗೆ ಮೀಸಲಾತಿ ಸಿಗುವಂತೆ ಮಾಡಿ.. ಅದು ನಿಮ್ಮಿಂದ ಮಾತ್ರವೇ ಸಾಧ್ಯ!! ದೇಶದ ಜನತೆಗೆ ನ್ಯಾಯ ದೊರಕಿಸಿ ಕೊಡಿ!!!

-ನಲ್ಮೆಯಿಂದ
ದಿವ್ಯ

Advertisements

Permalink 12 ಟಿಪ್ಪಣಿಗಳು

ಬದುಕಲ್ಲಿ ಬಾರದಿನ್ನು ಆ ದಿನಗಳು…

ಏಪ್ರಿಲ್ 12, 2010 at 10:30 AM (article) (, , )

ಗೇರುಬೀಜ..

ಇಂದು ಸಂಪದದಲ್ಲಿ ರಶ್ಮಿಯವರು ಬರೆದ ಒಂದು ಬಾಲ್ಯದ ತುಣುಕು ನನ್ನ  ಕೀಲಿ ಮಣೆ ಕುಟ್ಟುವಂತೆ ಮಾಡಿತು..
ಬಾರದಿನ್ನು ಆದಿನಗಳು ಎಂದೆನಿಸಿದ್ದು ಹೌದು. ಈ ಹೆಚ್ಚಿನ ಓದು, ಕಾಂಗೀಟ್ ನಾಡು ನನ್ನೆಲ್ಲಾ ಕಳೆದ ಬಾಲ್ಯವನ್ನು ಮತ್ತೆ ಬಾರದಂತೆ ಮಾಡಿದೆ..

ಇದೇ ಎಪ್ರಿಲ್ ,ಮೇ ತಿಂಗಳು ಶಾಲೆಗೆ ರಜ.. ತಿರುಗಾಟದಲ್ಲಿ ಮಜ! ಊರಿಗೆ ಹೋದರೆ ನಾವು ಚಿಕ್ಕಪ್ಪನ ಮಕ್ಕಳೆಲ್ಲಾ ಸೇರಿ ಅಜ್ಜಿ ಜೊತೆ ಗೇರು ಬೇಜ ಗುಡ್ಡಕ್ಕೆ ಹೋದರೆ, ಅಜ್ಜಿ.. ಗೇರು ಬೀಜ ಕೊಕ್ಕೆಯಲ್ಲಿ ಎಳೆದು ಉದುರಿಸಿದರೆ ನಾವು ಜಗಳವಾಡಿ ಹೆಕ್ಕುತ್ತಿದ್ದೆವು. ಉತ್ಸಾಹದಲ್ಲಿ ಮಾಡಿದರೆ ಗೋಡಂಬಿ ಜಾಸ್ತಿ ಸಿಗುತ್ತದೆ.. 🙂 ಅಜ್ಜಿ ಇಂಪ್ರೆಸ್ ಆಗ್ಬೇಕಲ್ಲಾ..  ನಾಜೂಕಾಗಿರೋ.. ಕಡು ಕೆಂಪು, ಹಳದಿ ಬಣ್ಣದ ಚೂರೂ ತರಚಿರದ ಹಣ್ಣುಗಳನ್ನು ಆರಿಸಿಟ್ಟು ಕೊಳ್ಳುತ್ತಿದ್ದೆವು. ಹೆಕ್ಕಿದ ಎಲ್ಲಾ ಗೇರು ಬೀಜವನ್ನು ಕುರುವೆಗೆ(ಬಿದಿರಿನಿಂದ ಮಾದಿದ ಬಕೆಟ್)  ತುಂಬಿ ಮನೆಯಂಗಳದಲ್ಲಿ ಹಾಕಿ, ನೆಕ್ಸ್ಟ್ ಪ್ರೋಗ್ರಾಂಮ್ ಆ ಬೀಜವನ್ನು ಹಣ್ಣಿನಿಂದ ಬೇರ್ಪಡಿಸುವುದು. ತಿರುಚಿ, ತಿರುಚಿ ಜೋಶ್ ನಲ್ಲೇ ಬೀಜ ಬೇರ್ಪಡಿಸಿದೆವು.. ಆದರೆ ಆ ಹಣ್ಣಿನ ರಸ ಕೈಗೆಲ್ಲ ಸೋಕಿದಾಗ ಮೂಸುವ ಸಾಹಸ ಮಾಡಬಾರದು. ಕೆಟ್ಟ ವಾಸನೆ. ಬಟ್ಟೆ ಒಗೆಯೋ ಸೋಪ್ ಹಾಕಿ ತಿಕ್ಕಿದರೂ.. ಹೋಗದು. ಕೆಲ್ವೊಮ್ಮೆ ಆ ಕೆಲ್ಸಕ್ಕೆ ಹಿಂದೇಟು ಹಾಕುತ್ತಿದ್ದೆವು.. ಇದೇ ಕಾರಣಕ್ಕೆಯೇ..! 🙂 ಆರಿಸಿಟ್ಟ ಹಣ್ಣುಗಳನ್ನು ಸಮವಾಗಿ ತುಂಡರಿಸಿ ಉಪ್ಪನ್ನು ಸವರಿ ತಿಂದ ರುಚಿ, ಸ್ಟ್ರಾಬೆರೆ ಸವಿದರೆ ಸಿಗದು!!

ಅಜ್ಜನ ಜೊತೆ ಎಲ್ಲ ಮೊಮ್ಮಕ್ಕಳ ದಂಡು ಒಂದು ಪುಟ್ಟ ಕೊಕ್ಕೆ ಹಿಡಿದು ತೋಟಕ್ಕೆ ಹೋಗುವುದರಲ್ಲೇ ಗೊತ್ತಾಗುತ್ತಿತ್ತು ಜಂಬುನೇರಳೆಗೆ ಇವತ್ತು ಕೆಳಗುದುರುವ ಸಂಭ್ರಮವೆಂದು! ಮಾವಂದಿರು ಜೊತೆಗಿದ್ದರೆ ಮಕ್ಕಳಿಗೆ ಅವರಿಗಾಗಿ ಉಳಿದದ್ದು ಎಂದು ಹೇಳಬೇಕೆಂದಿಲ್ಲ.. ಕೊಕ್ಕೆ ಅವರ ಕೈ ಸೇರಿದರೆ ಕಿತ್ತು ಹಾಕಿ , ಹಣ್ಣು ಅವರ ಹೊಟ್ಟೇ ಸೇರುತ್ತಿತ್ತು.. ಅದಕ್ಕೆ ಅಜ್ಜ,,ಇಲ್ಲ ನಾವು  ಮಕ್ಕಳೇ ಮಾತ್ರ ಹೊರಡುತ್ತಿದ್ದೆವು. ಸಾಹಸ ಪಟ್ಟು ಮೊದಲ ಕೊಂಬೆಗೆ ಕಾಲಿಟ್ಟು ಬಾಲೆನ್ಸ್ ಅಲ್ಲಿ ಕೆಳಕ್ಕೆ ಹಾಕಿ ಅದನ್ನು ಕ್ಯಾಚ್ ಹಿಡೆಯಲು ನಾಲ್ಕಾರು ಮಂದಿ, ಒಬ್ಬರ ಕೈಗೂ ಸಿಗದೆ ಕೆಳಕ್ಕೆ ದೊಪ್ಪೆಂದು ಉದುರುತ್ತಿತ್ತು. ಅದು ಹಣ್ಣುಗಳ ಬ್ಯಾಲೆನ್ಸ್!! 🙂

ಸಂಜೆ ಮನೆಯವರೆಲ್ಲಾ ಸೇರಿ ಬೀಜ ಸುಟ್ಟು ಹಾಕುವುದಕ್ಕೆ ಸಿದ್ಧತೆ.. ಕಳೆದ ವರುಷದ ಸ್ಟಾಕ್ ಇಟ್ಟ ಗೇರು ಬೀಜಗಳನ್ನು ಅಟ್ಟದಲ್ಲಿಟ್ಟ ಕರಿ ಮಣ್ಣಿನ ಮಡಿಕೆಯಿಂದ ಹೊರ ತೆಗೆದು ಅಂಗಳದಲ್ಲಿ ಹಾಕಿ ಅದರ ಮೇಲೆ ಸ್ವಲ್ಪ ಸೀಮೆ ಎಣ್ಣೆಯ ಪ್ರೋಕ್ಷಣೆ.. ಬೆಂಕಿ ಹತ್ತಬೇಕಲ್ಲಾ… ಅದಕ್ಕೆ!  ತೆಂಗಿನ ಒಣಗಿದ ಗರಿಗಳನ್ನು ಒಟ್ಟುಗೂಡಿಸಿ ಅದಕ್ಕೆ ಬೆಂಕಿ ಕೊಟ್ಟು ಮೆಲ್ಲಗೆ ಬೀಜಗಳಿಗೆಲ್ಲಾ ಬೆಂಕಿಯ ಸ್ಪರ್ಶ ಮಾಡಿವುಸು, ನಾವೆಲ್ಲ ಕುತೂಹಲದಲ್ಲಿ ಸುತ್ತಲೂ  ನಿಂತು ಬಿಟ್ಟ ಕಣ್ಣು ಬಿಟ್ಟಂತೆ ನೋಡುವುದು, ಅಜ್ಜಿ ದೂರ ಹೋಗಿ ಮಕ್ಕಳೇ ಎಂದು ಬೊಬ್ಬಿಡುವುದು.. ಅದು ಟಪ್ ಟಪ್ ಎಂದು ಸದ್ದು ಮಾಡಿದಾಗ, ಅಡಿಕೆ ಹಾಳೆಯಲ್ಲಿ ತಂದಿಟ್ಟ ಒಲೆಯ ಬೂದಿಯನ್ನು ಅದರತ್ತ ಎಸೆಯುವುದು. ಇದು ಉರಿಯುತ್ತಿರುವ  ಬೆಂಕಿ ಆರಿಸುವ ಮೆಥಡ್!! ಅಗ್ನಿಶಾಮಕದವರಿಗೆ ಗೊತ್ತಿರಲಿಕ್ಕಿಲ್ಲ 😉 ತಣ್ಣಗಾದ ಮೇಲೆ ಅದನ್ನು ಗುದ್ದಿ ಬೀಜವನ್ನು ತೆಗೆದು ಡಬ್ಬಕ್ಕೆ ಹಾಕುತ್ತಿದ್ದರೆ ನಾವೆಲ್ಲ ತಿನ್ನಲು ಸಿಗದೇ..? ಎಂದು ಆಸೆಯಲ್ಲಿ ನೋಡುವುದು ಆಗ ಅಜ್ಜಿ ಎರಡೆರದು ಕೈಗೆ ಗೇರು ಬೇಜ ಕೊಟ್ಟು ಎಲ್ಲ ಕೆಲಸ ಮುಗಿದ ನಂತರ ಕೊಡ್ತೇವೆ ಆಡಿಕೊಳ್ಳಿ ಎಂದು ಕಳುಹಿಸುತ್ತಿದ್ದರು. ರಾತ್ರಿ ಒಂದೊಂದು ಮುಷ್ಟಿ ಎಲ್ಲರಿಗೂ ಗೋಡಂಬಿಯನ್ನು ಕೊಟ್ಟು ಒಂದೆಡೆ ಎಲ್ಲರೂ ಕೂತು ಮಾತಾಡುತ್ತಾ ತಿನ್ನುತ್ತಿದ್ದೆವು.. ಎಲ್ಲಾ ಸಂಭ್ರಮದ ದಿನಗಳವು..!!


ಕೈಯಲ್ಲಿ ಪೇಟೆಯಿಂದ ತಂದು ಗೋಡಂಬಿ ತಿನ್ನುವಷ್ಟೆಲ್ಲಾ ಹಣವಿದ್ದ ಕಾಲವಲ್ಲ. ಈಗ ಹಣವಿದೆ.. ಮಾಲ್ ಗಳಲ್ಲೇ ಬೇಕಾದ ಬ್ರಾಂಡ್  ಸಿಗುತ್ತದೆ.. ಆದರೆ ಮೇಲೆ ಬರೆದ ಅನುಭವಗಳೆಲ್ಲಾ ಏನೂ ಸಿಗದು! ಮತ್ತೆ ಆ ನೂರು ಇನ್ನೂರು ತೆತ್ತು ತಿಂದ ಗೋಡಂಬಿಯಲ್ಲಿ ಸಿಕ್ಕುವ ರುಚಿಯಾದರೂ ಎಂತು?? ಹಣವಿಲ್ಲದಿದ್ದಾಗ ಸಂತೋಷ ನೆಮ್ಮದಿ ಆತ್ಮೀಯತೆ ಇತ್ತು. ಹಣವಿಲ್ಲವೆಂಬ ಕೊರಗಿತ್ತು. ಹಣ ಬಂದಾಗ ಆ ಸಂತೋಷ ನೆಮ್ಮದಿ ಸಿಗದಿನ್ನು ಎನ್ನುವಂತಾಯಿತು.. ಹಾಸ್ಟೆಲಿನ ರೂಮಿನಲ್ಲಿ ಒಬ್ಬಳೇ ಕೀಲಿ ಮನೆ ಕುಟ್ಟುತ್ತಿದ್ದರೆ ನಾವು ಅವರನ್ನು ನೆನೆದು ಕೊಳ್ಳುವುದು, ಮನೆಯಲ್ಲಿ ಅವರು ನಮ್ಮನು ನೆನೆದು ಕೊಳ್ಳುವುದು.. ಬದುಕೆಂದರೆ ಇಷ್ಟೆಯೇ..??
ವಿಷು ಹಬ್ಬಕ್ಕೆ ಊರಿಗೊಂದು ಟ್ರಿಪ್ ಹಾಕಿ ದೊಡ್ಡವರ ಹಾರೈಕೆಯನ್ನು ಪಡೆದು ಬಂದು ಮತ್ತಷ್ಟು ಬಾಲ್ಯದ ಸಿಹಿ ನೆನಪನ್ನು ಬರೆಯುತ್ತೇನೆ..
ಪುತ್ತೂರು ಜಾತ್ರಾ ಮಹೋತ್ಸವಕ್ಕೆ( ೧೭-೪-೨೦೧೦) ಓದುಗರಿಗೆಲ್ಲರಿಗೂ ಸ್ವಾಗತ…
“ಮರಳಿ ಮಣ್ಣಿಗೆ””


-ನಲ್ಮೆಯಿಂದ
ದಿವ್ಯ

Permalink 2 ಟಿಪ್ಪಣಿಗಳು

Next page »