ಸಂಗೀತ ಅಹಾ ಅಹಾ..

ಮಾರ್ಚ್ 23, 2010 at 10:04 ಅಪರಾಹ್ನ (article) (, )

ಚಿತ್ರ ಕೃಪೆ: http://www.univie.ac.at/


ಆ… ಸಂಗೀತಕ್ಕೆ ಬಾಡಿ ಮೂವ್ ಮಾಡದವರಾರು??? ಯಾರು ರಾಗ ತಾಳ ಶೃತಿಯನ್ನು ಕಂಡು ಹಿಡಿದ್ರೋ… ಗ್ರೇಟ್ ಅಪ್ಪಾ…!!
ಮೂಡ್ ಹೋಗಿಸಲು ಸಂಗೀತ.. ಮೂಡ್ ಬರಿಸಲು ಸಂಗೀತ.. ಇದು ವರ್ಕ್ ಆಗುತ್ತೆ .. ಪ್ರಯತ್ನ ಮಾಡಿ ನೋಡಿ ಬೇಕಿದ್ರೆ..  🙂
ಫುಲ್ ಲವ್ ಮೂಡನಲ್ಲಿ ಇದ್ರೆ.. ಅದಕ್ಕೆ ಸೂಟ್ ಆಗೋ ಹಾಡುಗಳು.. ಸುಮ್ಮನೆ ಕೇಳಿ ನೋಡಿ.. ಮತ್ತೂ ಫೀಲಿಂಗ್ಸ್ ಹೆಚ್ಚು ಮಾಡ್ತವೆ!! ಜೋರು ಮನೆ ನೆನಪಾಗ್ತಿದ್ಯಾ… ನೆನೆಪುಗಳ ಮತು ಮಧುರ… ಇಂಥ  ಹಾಡು ಕೇಳಿ… ಕಣ್ಣಲ್ಲಿ ನೀರೇ ಬಂದು ಬಿಡುತ್ತೆ…  😦

ಯಾವುದೋ ಸ್ಯಾಡ್ ಮೂಡ್ ಅಲ್ಲಿ ಇದೀರಾ… “ಚಕ್ಕಲಿ ನಿಪ್ಪಟ್ಟು ತಿನ್ಕೊಂಡು ಗೋಲಿ ಆಟ ಆಡ್ಕೊಂಡು… “ ಇಂಥ ಹಾಡು ಪ್ಲೇ ಮಾಡಿ.. ಸ್ಯಾಡ್ ಮೂಡ್ ಎಲ್ಲ ಹೋಗಿ.. ಬಾಡಿ ಮೂವ್ ಮಾಡದಿದ್ರೆ… ಕೇಳಿ!! ಸುಮ್ಮನೆ ಟೈಂಪಾಸ್ ಆಗ್ಬೇಕೋ.. “ಸಕತ್ತಾಗವ್ಳೆ… ಸುಮ್ಮನೆ ನಗ್ತಾಳೆ” ಇಂಥ ಸಾಂಗ್ ಪ್ಲೇ ಮಾಡಿ…
ದೈವ ಭಕ್ತಿ ಬೇಕೆಂದಾಗ… “ಪಿಳ್ಳಂಗೋವಿಯ ಚೆಲುವ ಕೃಷ್ಣನ …” ಪ್ಲೇ ಮಾಡಿ.. ಹಾಗೆ.. ಮುಳುಗಿ ಹೋಗುತ್ತೆ ಮನಸ್ಸು…!

ಅನಿಮೇಟೆಡ್ ಪ್ರಾಣಿಗಳೇ ಆಕ್ಟರ್ ಆಗಿರೋ.. “ಐ ಲೈಕ್ ಟು ಮೂವ್ ಇಟ್ ಮೂವ್ ಇಟ್..” ಸಕತ್ ಮೂವ್ ಮಾಡ್ಸುತ್ತೆ.. 🙂 “ಜಿಂಕೆ ಮರಿನ..” ಇದೂ ಅಷ್ಟೆ, “ಚಿತ್ರಾನ ಚಿತ್ರಾನ… “ ಇವೆಲ್ಲ ಎಷ್ಟೇ ಬೇಜಾರು ಮನಸ್ಸಲ್ಲಿದ್ರೂ.. ಬೇರೇನೇ ಲೋಕಕ್ಕೆ ಕರ್ಕೊಂಡು ಹೋಗುತ್ತೆ…
ಪ್ರಸ್ತುತ ಯಾವ ಭಾವನೆಯಲ್ಲಿರುತ್ತೀರೋ ಅದಕ್ಕೆ ತಕ್ಕುದಾದ ಹಾಡು ಹಾಕಿ ಕೇಳಿ ನೋಡಿ.. ಒಂಥರಾ.. ಚೇಂಜಸ್ ಬಂದೇ ಬರುತ್ತೆ. ಬೇಜಾರದಲ್ಲಿದ್ರೆ… ಕಣ್ಣ ಹನಿ ಸುರಿಲೇ ಬೇಕಿದ್ರೆ… “ಬಾಡಿ ಹೋದ ಬಳ್ಳಿಯಿಂದ..” ಬೇಡ್ವಾ… ಹೊರಗೆ ಬರ್ಬೇಕು ಅಂದ್ರೆ…. ” ಜಲ ಜಲ ಜಲ್ಜಾಕ್ಷಿ.. ಮಿನ ಮಿನ ಮಿನ ಮೀನಾಕ್ಷಿ …” 🙂

ಮತ್ತೆ ವಯಸ್ಸಿಗೆ ತಕ್ಕಂತೆ ಬೇಕಾದ ಹಾಡುಗಳು… ಪುಟಾಣಿಗಳಿಗೆ.. “ತೊಂಡೆಕಾಯಿ ಬೆಂಡೆಕಾಯಿ ತೋಟದಲ್ಲಿದೆ… “ 😉 ಟೀನ್ ವಯಸ್ಸಿಗರಿಗೆ.. “ಅಮ್ಮ ಅಂತಾರೆ ಚೆಲ್ಲು ಚೆಲ್ಲಾಗಾಡ್ಬೇಡಾ… ಅಪ್ಪ ಅಂತಾರೆ ಹೊರಗೆಲ್ಲೂ ಹೋಗ್ಬೇಡಾ…” ಸ್ವಲ್ಪ ಟ್ವೆಂಟಿ ದಾಟಿ ಪ್ರಭುದ್ಧತೆ ಬಂದವರಿಗೆ.. “ಏನಾಗಲಿ ಮುಂದೆ ಸಾಗು ನೀ…” ಹಿರಿಯರಿಗೆ.. “ನಮ್ಮ ಸಂಸಾರ ಆನಂದ ಸಾಗರ..” 🙂 ಹೇಗೆ ಬೇಕೋ ಹಾಗೆ!!

ಸಂಗೀತಕ್ಕೆ ಎಷ್ಟೊಂದು ಶಕ್ತಿ ಇದೆ ಅಲ್ವಾ…. ? ಎಫ್ ಎಂ ಚಾನೆಲ್ ಗಳೆಲ್ಲ  ಪ್ರಸಿದ್ಧಿ ಆಗ್ತಿರೋದು ಇದಕ್ಕಾಗ್ಯೇ ಇರ್ಬೇಕು… 🙂 ಬೇರೆ ಭಾಷೆಗಳಲ್ಲೂ ಇದೆ… ಕೆಲವೊಂದನ್ನಷ್ಟೇ ಹೇಳಿದೆ… ನಿಮಗೊಂದಿಷ್ಟು.. ಭಾವನೆಗಳನ್ನು ಪುಷ್ಟೀಕರಿಸಿದ, ಮನದ ಯೋಚನೆಯನ್ನೇ ಬದಲಾಯಿಸಿದ ಹಾಡುಗಳಿದ್ದರೆ..ಪ್ರತಿಕ್ರಿಯೆಯಲ್ಲಿ ಹಾಕಿ…. ನಮ್ಮ ಭಾವನೆಗಳನ್ನೂ ಚೇಂಜ್ ಮಾಡಿಸಬಹುದು… ಅಲ್ವೇ…!!

-ನಲ್ಮೆಯಿಂದ

ದಿವ್ಯ


Advertisements

3 ಟಿಪ್ಪಣಿಗಳು

 1. ISHWARA BHAT K said,

  ಸಂಗೀತ ಅಂದ್ರೆ someಗೀತ ಆಗಿಬಿಟ್ಟಿದೆ. ಎಲ್ಲ ಭಾಷೆಗಳಲ್ಲೂ ಹಾಡುಗಳಿಗೆ ಅದರಲ್ಲೂ ರಂಜನೀಯ ಹಾಡುಗಳಿಗೆ ಮೊದಲ ಸ್ಥಾನ !!

 2. Sowmya said,

  Very true Divya!!!
  We(me & Devika) use to hear Enagali song for Self Motivation:)

 3. ದಿವ್ಯ said,

  oh.. is it!! 🙂 okay enjoy…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: