ಸಮಸ್ತ ಕನ್ನಡಿಗರ “ಹೆಮ್ಮೆ”!!!

ಮಾರ್ಚ್ 18, 2010 at 12:05 ಅಪರಾಹ್ನ (article)

ಸಮಸ್ತ ಕನ್ನಡಿಗರ ಹೆಮ್ಮೆಯ ದಿನಪತ್ರಿಕೆಗೆ ಇಂದೇನಾಗಿದೆ??
ಕೆಲವೊಂದು ಬ್ಲಾಗ್ ಗಳಲ್ಲಿ ವಿಜಯ ಕರ್ನಾಟಕದ ಹೆಮ್ಮೆಯನ್ನು ಧೈರ್ಯದಲ್ಲಿ ಎತ್ತಿ ಹಿಡಿದಿದ್ದಾರೆ…
ಬೆಕ್ಕಿಗೆ ಗಂಟೆ ಕಟ್ಟಲು.. ಎಲ್ಲೋ ಪ್ಲಾನ್ ಹಾಕಬೇಕಾಗಿದೆ.. ಹಾಗಾಗಿ ನನ್ನ ಬ್ಲಾಗ್ ನಲ್ಲೂ ವಿಜಯ ಕರ್ನಾಟಕಕ್ಕೊಂದು “ಧಿಕ್ಕಾರ”!!

ಬೀಗುವುದನ್ನ ಸ್ವಲ್ಪ ಕಡಿಮೆಗೊಳಿಸಿ ತಪ್ಪನ್ನು ತಿದ್ದಿಕೊಂಡರೆ ಒಳಿತು…!
ಹೆಮ್ಮೆಯ ದಿನಪತ್ರಿಕೆಯಾಗಿತ್ತೇನೋ ನಿಜ… ಅದನ್ನು ಹಾಗೆಯೇ ಮೈಂಟೈನ್ ಮಾಡೋದು ಬಿಟ್ಟು, ಜಾಸ್ತಿ ಹೆಮ್ಮೆಯಾದರೆ.. ಹೀಗೇ ಆಗೋದು..
ಖ್ಯಾತ “ವಿಮರ್ಶಕಿ” ಬ್ಲಾಗ್ ನಲ್ಲಿ. “ಮನದಾಳದ ಮಾತು” ಬ್ಲಾಗ್ನಲ್ಲಿ.. ಇನ್ನು ಹಲವು ಬ್ಲಾಗ್ ನಲ್ಲಿ ವಿಜಯಕರ್ನಾಟಕದ ನಿಜವಾದ ಮುಖವನ್ನು ಬಹಿರಂಗ ಪಡಿಸಿದ್ದಾರೆ.. ಅವರೊಂದಿಗೆ ನನ್ನದೊಂದು ರೇಟಿಂಗ್ ಇರಲಿ.. ಅದಕ್ಕಾಗಿಯೇ ಈ ಪೋಸ್ಟಿಂಗ್!

ಹಿಂದೆ ನನ್ನ ಮೆಚ್ಚಿನ ಪತ್ರಿಕೆಯಾಗಿತ್ತು..ಸಿಲ್ಲಿ ಪಾಯಿಂಟ್, ಪ್ರತಾಪ್ ರವರ ಕಾಲಂ ಇತ್ಯಾದಿಗಳಿಗೆ ಹಿಂದಿನ ದಿನವೇ ಕಾಯ್ತಿರ್ತಿದ್ದೆ..!! ಬಟ್ ಪೇಪರ್ ಕೆಟ್ಟೋಗ್ತಿದೆ..!!   ನಾವೆಲ್ಲ ಹಿಂದಿನ ವಿಜಯ ಕರ್ನಾಟಕವನ್ನೇ ಬಯಸುತ್ತಿದ್ದೇವೆ…!!. ಈಗೇಕೆ ಹೀಗಾಗುತ್ತಿದೆ?? ವಿಷಯಗಳ ಬದಲು ಜಾಹಿರಾತುಗಳೇ ಪುಟಗಳನ್ನೆಲ್ಲಾ ತುಂಬಲು ಶುರುವಾಗಿದೆ, ೧೫ನೇ ದಿನದ ಪೇಪರ್ನಲ್ಲಂತೂ ಬೆಂಗಳೂರು ಎಡಿಶನ್ ಅಡ್ವರ್ಟೈಸ್ ಗೇ ಸೀಮಿತವಾಗಿದ್ದಂತಿತ್ತು. ಇವತ್ತಿನ ಪತ್ರಿಕೆಯ ಲವಲವಿಕೆ ಮೊದಲ ಪೇಜ್  ಓದಿ, ಪೌಷ್ಟಿಕ ಹುಡುಗಿ ಬಗ್ಗೆ ಬರೆದಿದ್ದಾರೆ.. ಅಲ್ಲ ವಿಷಯಕ್ಕೂ ಅದರನ್ನು ಹೇಳೋ ರೀತಿಗೂ ಕನಿಷ್ಟ ಸಾಮ್ಯತೆ ಬೇಡವೇ??? ಹೀಗೇಕೆ ಹೆಮ್ಮೆಯ ದಿನಪತ್ರಿಕೆಯಲ್ಲಿ ತಪ್ಪುಗಳಾಗುತ್ತಿದೆ?? ಮೇಲಿಂದ ಮೇಲೆ?? ದೊಡ್ಡ ದೊಡ್ಡ ಕಾಲಂಗಳಿಗರು  ಇದ್ದಾರೆ ನಿಜ.. ಓದುವವರಿದ್ದಾರೆ ಹೇಳಿ ಹೇಗೆ ಬೇಕಂದ ಹಾಗೆ ಪ್ರಕಟಿಸುವುದು ಯಾವ ನ್ಯಾಯ?? ಪ್ರಕಟಿಸುವುದಕ್ಕೆ ಮೊದಲು ನೀವೊಮ್ಮೆ ಓದಿಕೊಳ್ಳಿ!

ದೃಶ್ಯ ಫೋಟೋಸ್ ಬ್ಲಾಗ್ ಓನರ್ ಆಗಿರೋ ಖ್ಯಾತ ಚಿತ್ರಗ್ರಾಹಕ” ಹರೀಶ್ ಹಳೆಮನೆ” ಅವರು, ಫ್ಲಿಕ್ಕರ್ ಅಲ್ಲಿ ಶೇರ್ ಮಾಡಿರೋ ಫೋಟೋವನ್ನು ಕದ್ದು ಪೇಪರ್ ಗೆ ಹಾಕೋ ಅವಶ್ಯಕತೆ ಏನಿತ್ತು?? ಅದೂ ಬೈ ಲೈನ್ ಇಲ್ಲದೇಯೇ ಪ್ರಕಟವಾಗಿದೆ!! ಇವರಿಗೆಲ್ಲ ಕೇಳೋರಿಲ್ಲವೇ?? ಫ್ಲಿಕ್ಕರಿಗರೇ ಎಚ್ಚರ!! ಸುಂದರ ಫೋಟೋಗಳನ್ನು ಕದಿಯುವವರಿದ್ದಾರೆ..!! ಶಾರೂಖ್ ಖಾನ್ ಅವರಿಗೆಲ್ಲ ಖಾನ್ ಕುಲ್ ಕರಿಸಿದ ಪ್ರತಾಪ್ ಸಿಂಹರವರೇ.. ವಿಜಯ ಕರ್ನಾಟಕ  ಪತ್ರಿಕಯ ತಪ್ಪುಗಳನ್ನು ಕೋಲ್ ಕರಿಸಿ, ಎತ್ತಿ ಹಿಡಿದಿದ್ದೇವೆ.. ಎಚ್ಚರಿಸಲು ಹಿಂಜರಿಕೆಯೇಕೆ??? ಹೆಮ್ಮೆಯ ಪತ್ರಿಕೆಯ ಪುಟಗಳನ್ನೊಮ್ಮೆ ಸಮಸ್ತರೂ ತಿರುವಿ ಹಾಕಿ…!! ಗೊತ್ತಾದೀತು!!

ಹೆಚ್ಚಿನ ಮಾಹಿತಿಗೆ ವಿಮರ್ಶಕಿ ತಾಣ,ಮನದಾಳದ ಮಾತು ತಾಣಕ್ಕಭೇಟಿ ಕೊಡಿ:

ಕೃಪೆಯಿಂದ:

http://wp.me/py6fj-bL

http://blog.nadahalli.com/2010/01/blog-post.html

http://blog.nadahalli.com/2009/12/blog-post.html

ಚಿತ್ರ ಕೃಪೆ: http://connect.in.com/vijaya-karnataka/connection-522652-390250.html

-ನಲ್ಮೆಯಿಂದ

ದಿವ್ಯ

Advertisements

7 ಟಿಪ್ಪಣಿಗಳು

 1. ಹರೀಶ್ ಹಳೆಮನೆ said,

  ಫ್ಲಿಕರ್ ಇರೋದು ಚಿತ್ರ ಕದೀಲಿಕ್ಕೆ ಅಂತ ತಿಳ್ಕೊಂಡು ಬಿಟ್ಟಿದ್ದಾರೆ. ನಾನು ಇನ್ನೂ ಫ್ಲಿಕರ್‌ನಲ್ಲಿ ಚಿತ್ರ ಹಾಕಬೇಕೆಂಬುದು ನನ್ನ ಗೆಳೆಯರ ಆಸೆ. ಏನು ಮಾಡೋಣ? ಒಂದು ಛಾಯಾಚಿತ್ರ ಸ್ಪರ್ಧೆಗಾಗಿ ನಾನು ಆ ಚಿತ್ರವನ್ನು ವಾಟರ್‌ಮಾರ್ಕ್ ಇಲ್ಲದೇ ಪೋಸ್ಟ್ ಮಾಡಿದ್ದೆ. (ಅದು ಫ್ಲಿಕರ್‌ನಲ್ಲೇ ಅಪ್‌ಲೋಡ್ ಮಾಡಬೇಕಾದ ಸ್ಪರ್ಧೆಯಾಗಿತ್ತು). ನನಗಂತೂ ಫ್ಲಿಕರ್ ಬೇಡವೇ ಬೇಡವೆಂದಾಗಿದೆ.
  ಏನೇ ಆದರೂ, ದಿವ್ಯಾ… ಈ ಬಗ್ಗೆ ಬ್ಲಾಗ್‌ನಲ್ಲಿ ಬರೆದಿದ್ದು ಖುಷಿ ಆಯಿತು. ನನ್ನಂತೆ ಇನ್ನು ಮುಂದೆ ಯಾರಿಗೂ ಆಗಬಾರದು.

 2. ದಿವ್ಯ said,

  ಹರಿಶಣ್ಣ… ಎಲ್ಲರಿಗೂ ಗೊತ್ತಾಗುತ್ತೆ ಬಿಡಿ..
  ನೀವು ಮಾತ್ರ ಅಪ್ಲೋಡ್ ಮಾಡೋದು ನಿಲ್ಲಿಸ್ಬೇಡಿ…

 3. Tejaswini Hegde said,

  ದಿವ್ಯ,

  ನನಗಂತೂ “ಈ ನಂ.೧ ಪೇಪರ್ ಬೇಡಪ್ಪ ಬೇರೆದನ್ನ ಹಾಕು” ಅಂತ ಹೇಳಿ ಹೇಳಿ ಸಾಕಾಗಿ ಹೋಗಿದೆ…..ಎರಡು ದಿನ ಕಾಣದ ಭೂತ ಮೂರನೆಯ ದಿನ ವಕ್ಕರಿಸಿದಂತೆ ಮತ್ತೆ ಅದೇ ಬಂದು ಬೀಳುತ್ತದೆ. ಚೆನ್ನಾಗಿ ಬದುಕಿರುವ ಅಮೀರ್‌ಖಾನ್‍ನನ್ನೇ ಪುಣೆಯ ಬಾಂಬ್ ಬ್ಲಾಸ್ಟಿನಲ್ಲಿ ಸಾಯಿಸಿದವರು ಇವರು. 🙂 ಇಂತಹವರಿಂದ ಚಟ್ಟವನ್ನಷ್ಟೇ ಕಟ್ಟಲು ಸಾಧ್ಯ ಬಿಡಿ..:) ಎನೇ ಆದರೂ ಈ ರೀತಿ ಇನ್ನೊಬ್ಬರ ಪ್ರತಿಭೆಯನ್ನು ಗೌರವಿಸದೇ ಕದಿಯುವ ಬುದ್ಧಿ ಮಾತ್ರ ಅಕ್ಷಮ್ಯ. ಹರೀಶ್ ಅವರಿಗೆ ಎಷ್ಟು ನೋವಾಗಿರಬಹುದೆಂದು ಅರಿಯಬಲ್ಲೆ. ಕನಿಷ್ಟ ಅವರನ್ನು ಒಂದು ಮಾತು ಕೇಳಿಯಾದರೂ ಬಳಸಿಕೊಳ್ಳಬೇಕೆನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇ ಈ ಪತ್ರಿಕೆಗೆ?…ಛೇ!!

 4. ದಿವ್ಯ said,

  ಹ್ಮ್ಮ್ ತೇಜಸ್ವಿನಿ ಯವರೆ.. ಸಾಮಾನ್ಯ ಜ್ಞಾನ ಇಲ್ಲದ ಪತ್ರಿಕೆಯಂತಾಡುತ್ತದೆ ಕೆಲ್ವೊಮ್ಮೆ!!

 5. rakeshsshetty said,

  ಏನ್ ದಿವ್ಯ ಫುಲ್ಲ ರಾಂಗ್ ಆಗಿದ್ಯಾ? 😉
  ಒಳ್ಳೆಯದು ಮಾತ್ರ ಕೇಳುತ್ತೆ ಬಿಡು,ಇದೆಲ್ಲ ಕೇಳೋಲ್ಲ ..

  @ಹರಿಶ್ರವರು ಈ ಬಗ್ಗೆ ಪತ್ರಿಕೆಯವರನ್ನ ಕೇಳಲಿಲ್ಲವೇ?

 6. Keshava Prasad M said,

  Its so sad.. a state level paper … Uffff

 7. 2010 in review « ಮಾತಾಡೋ ಮನ said,

  […] ಸಮಸ್ತ ಕನ್ನಡಿಗರ “ಹೆಮ್ಮೆ”!!! March 2010 6 comments 4 […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: