ನಮ್ಮ ಹಾಸ್ಟೆಲ್ ಪಿಂಕಿ!!

ಮಾರ್ಚ್ 9, 2010 at 10:38 AM (article)

ಹಾಲಿನ ಬಣ್ಣದ ಮೈಯವಳು.. , ಆ ಬಡಾವಣೆಗೇ ಸುಂದರಿ!! ಬೀದಿಯಲ್ಲಿ ಹೋದರಂತೂ ಸ್ಟೇರ್ ಕೊಡುವವರೇ ಜಾಸ್ತಿ.. ಕೆಲವರಿಗೆ ಪಿಂಕಿ ಕಂಡ್ರೆ ಬಲು ಇಷ್ಟ. ಇನ್ನು ಹಲವರಿಗೆ ಅವಳನ್ನು ಕಂಡರೆ ಕಷ್ಟ. ಏಕೋ.. ಅವಳು ತೆಳ್ಳಗೆ ಬೆಳ್ಳಗೆ ಇದ್ದರೂ ಕೆಲವರಿಗೆ ಇಷ್ಟವಾಗೋದಿಲ್ಲ. ಈವನ್ ನನಗೂ..! ಅವಳಿಗೆ ಎಷ್ಟು ಒಳ್ಳೆ ಹೆಸರಿಂದ ನಾಮಕರಣ ಮಾಡಿದ್ದಾರೋ.. “ಪಿಂಕಿ”ಎಂದು. ಹೆಸರಿಗೆ ತಕ್ಕಂತೆ  ಪಿಂಕ್ ಪಿಂಕಾಗಿಲ್ಲ! 😦

ನಮ್ಮ ಹಾಸ್ಟೆಲ್ ವರ್ಕರ್ಗಳೆಲ್ಲ ಸೇರಿ ಸಾಕುತ್ತಿರುವ ಮುದ್ದಿನ ನಾಯಿಯೇ ಈ ಪಿಂಕಿ!! ಅದ್ಯಾರು ಆ ಪಿಂಕಿಗೆ ನಮ್ಮ ಹಾಸ್ಟೆಲ್ ಅಡ್ರೆಸ್ ಕೊಟ್ರೋ ಗೊತ್ತಿಲ್ಲ.. ಕೊಟ್ಟವ್ರಿಗೆ ಮಾತ್ರ..ಮುಂದೊಂದು ದಿನ ಕಾದಿದೆ!! ಬಂದಾಗ ಏನೋ ಕರುಣಾಭಾವನೆ ನಮಗೂ ಇತ್ತು. ಪಾಪ ಎಲ್ಲಿಂದಲೋ ಬಂದಿದೆ. ಇರಲಿ ಇಲ್ಲೆ.. ಅದರ ಹೊಟ್ಟೆಗಿಷ್ಟು ಹಾಕಿದ್ರೆ, ನಮ್ಮ ಹೊಟ್ಟೆಗೇನು ಕಡಿಮೆಯಾಗದು ಎಂದು ಒಳ್ಳೆಯ ಮನೋಭಾವನೆಯಿಂದ ಮುದ್ದು ಮಾಡಿದ್ವಿ!! ವರ್ಕರ್ಸ್ ಅಂತೂ ಅವರ ಸ್ವಂತ ಮಕ್ಕಳನ್ನೂ ನಾಯಿಯನ್ನು ಮುದ್ದಿಸಿದಷ್ಟು ಮುದ್ದಿಸಿರಲಿಕ್ಕಿಲ್ಲ! ಮರುದಿನ ನಾಯಿಯನ್ನು ಕ್ಯೂಟ್ ಆಗಿ ಪಿಂಕೀ.. ಎಂದು ನಾಮಕರಣ ಮಾಡಿ ಕೂಗಲು ಶುರು ಮಾಡಿದ್ರು..ಅಲ್ಲಿಗೆ ಅವಳ  ಹೆಸರು ಪಿಂಕಿ ಎಂದಾಯ್ತು!!

ಒಹ್.. ಕಾಲೇಜ್ ,ಹಾಸ್ಟೆಲ್ ದಾರಿ ಮಧ್ಯದಲ್ಲಿ ಅದು ಇದ್ರೂ..ಸರಿ.. ಪಿಂಕೀ ಎಂಬ ಕೂಗು ಕೇಳಿದರೆ ಸಾಕು ಹಾಜಿರ್!! ಹಾಗೆಯೇ ಹಾಸ್ಟೆಲ್ ನಲ್ಲೂ.. ದಾರಿಯಲ್ಲಿ ಚಿನ್ನದ ಸರ ಎಳ್ಕೊಂಡು ಹೋಗ್ಬೇಕಾದ್ರೆ ಹುಡುಗೀರು ಬೊಬ್ಬಿಟ್ರೂ ಹಾಸ್ಟೆಲ್ ವರ್ಕರ್ಸ್ ಗೆ ಕೇಳಲ್ಲ, ಪಿಂಕಿ ಕೂಗು ಮಾತ್ರ ಕೇಳ್ಸುತ್ತೆ.. ವಾಚ್ಮೆನ್ ಒಮ್ಮೆ ಗೇಟ್ ಹೊರಗಡೆ ಬಂದು ಇಣುಕುತ್ತಾರೆ.. ಸೇಫ್ ಆಗಿದಾಳೆಯೇ ಎಂದು ನೋಡಲು!! ಅವಳ ಸೌಂದರ್ಯಕ್ಕೆ ಮಾರು ಹೋಗದವರು ಯಾರು?? ಅವಳು ಗೇಟ್ ಹೊರಗಡೆ ಕ್ಯಾಟ್ ವಾಕ್ ಮಾಡಿದ್ರೆ ಬೀದಿನಾಯಿಗೆಳೆಲ್ಲ ಕೂಗಿ ಬೊಬ್ಬಿಟ್ಟು, ಸಂಕೋಲೆ ಬಿಚ್ಚುವ ಪ್ರಯತ್ನದಲ್ಲಿ ಕೆಲ್ವರಿದ್ರೆ, ಕೆಲವು ಅವಳ ಹಿಂದೆ!!

ಸುಂದರಿ.., ಆಗಿರ್ಲೇಬೇಕು!! ನಮಗೆ ಟೀ ಕಾಫಿಗೆ ಹಾಲಿಲ್ಲದಿದ್ರೂ ಪರ್ವಾಗಿಲ್ಲ.. ಪಿಂಕಿಗೆ ದಿನಾಲು ೨ ಲೋಟ ಹಾಲು ಮೊಸರು ಪೌಷ್ಠಿಕ ಆಹಾರ.. ಇಷ್ಟು ಸಾಲದೇ ಅವಳ ಸುಂದರತೆಗೆ!! ಬಿಸಿಲಿಗೆ ಓಡಾಡೋದಿಲ್ಲ.. ಗಟ್ಟಿ ತಿಂದು ಒಳಗೆನೇ ನಿದ್ದೆ! ಮುದ್ದಾಡುವ ಮನುಷ್ಯರು.. ಒಮ್ಮೊಮ್ಮೆ ವಾಕಿಂಗ್ ..ಫಿಗರ್ ಮೆಂಯಿಂಟೆನ್ ಮಾಡ್ಬೇಕಲ್ವಾ..!

ಅಂತೂ ನಮ್ಮ ಪಿಂಕೆ ಒಮ್ಮೆ ಗರ್ಭಿಣೆ ಆದ್ಲು.. ಆಗ ಅದಕ್ಕೆ ಸಿಕ್ಕ ಉಪಚಾರ, ಬೇರೆ ಯಾವ ಗರ್ಭಿಣಿ ನಾಯಿಗೂ ಸಿಕ್ಕಿರಲಿಕ್ಕಿಲ್ಲ!! ಅಂತೂ ೪ ಮರಿಗೆ ಜನ್ಮ ನೀಡಿತು.   ಸುಂದರಿಯ ಮರಿ ಸುಂದರವಾಗಿಯೇ ಇರ್ತವಲ್ವೇ.. ಎಲ್ಲಾ ಬುಕ್ ಆಗಿ ಎತ್ಕೊಂಡು ಹೋದ್ರು.. ಇಲ್ಲಾಂದ್ರೆ ನಮಗೆ ಮೆಸ್ ಬಿಲ್ಲ ಇನ್ನೂ ಆಡ್ ಆಗಿ ಬರ್ತಿತ್ತು!! ನಮ್ಮ ಪಿಂಕಿಗೂ ಕೆಲವೊಮ್ಮೆ ಬೊಗಳಬೇಕೆಂದೆನಿಸುತ್ತದೆ.. ಆಗ ಎದುರಿನ ಆಂಟಿ ಸರಿಯಾಗಿ ಬೈತಿರ್ತಾರೆ.. ಹರಟೆ.. ಕೇಳೋಕಾಗೋಲ್ಲ.. ಅಂತ ಒಂದಿಷ್ಟು ಬಂದ ಕಸ್ಟಮರ್ ಗಳತ್ರ ಹೇಳ್ಕೊತಾರೆ.. ಪಾಪ ಅದರ ಬೊಬ್ಬೆ ಬಿಟ್ರೆ ಬೇರೇನೂ ಕೇಳೋಲ್ಲ.. ! ರಾತ್ರಿ ಜೋರು ನಶೆ ಏರಿದ್ರೆ.. ಓವರ್ ನೈಟ್ ಕೂಗ್ತಿರುತ್ತೆ.. ಅದರದ್ದು ಮಾತ್ರ ಸಾಲದಕ್ಕೆ ಅದ್ರ ಸಂಗಾತಿಯರದ್ದು ಜೊತೆಗೇ..!! ಫೋನಲ್ಲಿ ನಾವು ಮಾತಾಡ್ತಿದ್ರೆ ಅದರ ಕೂಗು, ಅತ್ತ ಕಡೆ ಮಾತಾಡೋರಿಗೆ ಕೇಳಿ, ಏನೇ… ನಾಯಿಗೆ ಕಲ್ಲು ಬಿಸಾಕಿದ್ಯಾ ಅಂತ ಕೇಳ್ತಾರೆ!! 😦 ಕೆಲವರಿಗೆ ನಿದ್ದೆ ಬರೋದಿಲ್ವಂತೆ ಅದರ ಸಂಗೀತಕ್ಕೆ! ಬಂದ ದಿನ  ತಮಗೆಂದು ತೆಕ್ಕೊಂಡ ಕುರುಕುರೆಲ್ಲ ಹಾಕಿ ಮುದ್ದಿಸಿದ್ರು.. ಈಗ ಅವರೇ ಬೈತಾರೆ!! ಅದರ ಕಲರ್  ಸ್ವಲ್ಪ ಸ್ವಲ್ಪವೇ ಬ್ರವ್ನ್ ಬಣ್ಣಕೆ ತಿರುಗಿದೆ.. ಸ್ನಾನ ಮಾಡಿಸೋರಿಲ್ಲದೆ! 🙂 ಆದ್ರೂ ಸುಂದರಿ ಅಂತ ಮೆರೆಯೋದಕ್ಕೇನು ಕಡಿಮೆ ಇಲ್ಲ..!!

ಪಿಂಕೀ… ನೀನು ಅಲ್ಲಿ ಇಲ್ಲಿ ಸೋಂಕಿ..
ಬರದಿರು ನಮ್ಮ ಬಳಿಗೆ…, ಕ್ಯೋಂಕಿ..
ಹೇಳುವರು ನಮಗೆ ಚುಚುಮದ್ದು ಹಾಕಿ!! 😦



-ನಲ್ಮೆಯಿಂದ
ದಿವ್ಯ

12 ಟಿಪ್ಪಣಿಗಳು

  1. Sandeepa Nadahalli said,

    Good one Divya.

    Keep writing.

    Cheers!:)

  2. ಆತ್ರಾಡಿ ಸುರೇಶ ಹೆಗ್ಡೆ said,

    ನಿಮ್ಮ ಪಿಂಕಿಯನ್ನೊಮ್ಮೆ ಕಣ್ತುಂಬಾ ನೋಡುವಾಸೆ ಮನದಲ್ಲಿ…

  3. rakeshsshetty said,

    ಮುಂದಿನ ಸರಿ ಊರಿಗೆ ಬಂದಾಗ ಪಿಂಕಿಯನ್ನ ನೋಡ್ಬೇಕು 😉

  4. ISHWARA BHAT K said,

    Chennagide writing style 🙂 🙂

    Nice weekend

    IBK

  5. venu said,

    ಪಿಂಕಿಯನ್ನು ಚೆನ್ನಾಗಿ ನೋಡಿಕೊಳ್ತಿರೋದು ಖುಷಿಯ ವಿಚಾರ..

  6. Keshava Prasad M said,

    Pinky…. estu chanda idrooo nam mane nayi Mothi thara irlikkilla…. 😛

  7. chukkichandira said,

    ಹಾಯ್‌ ಮೇಡಂ. ನಾನು ಪ್ರವೀಣ ಚಂದ್ರ ಪುತ್ತೂರು ಅಂತ. ಟೈಮ್ಸ್‌ ಗ್ರೂಪ್‌ನ ವಿಜಯ ನೆಕ್ಸ್ಟ್‌ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ವಾರ ಯುವ ಪುಟಕ್ಕೆ ಹಾಸ್ಟೇಲ್‌ ಲೈಫ್‌ ಬಗ್ಗೆ ಲೇಖನ ಬರೆಯುತ್ತೀದ್ದೇನೆ. ಆಗ ನಿಮ್ಮ ಈ ಲೇಖನ ನೆನಪಾಯಿತು. ನಿಮ್ಮ ಹಾಸ್ಟೇಲ್‌ ಅನುಭವದ ಒಂದಿಷ್ಟು ಮಾಹಿತಿಗಳನ್ನು ನಿಮ್ಮದೇ ಹೆಸರಿನಲ್ಲಿ ನನ್ನ ಲೇಖನದಲ್ಲಿ ಅಳವಡಿಸಿಕೊಳ್ಳಬಹುದೇ? ಅನುಮತಿ ನೀಡಿದರೆ ಒಳ್ಳೆಯದಿತ್ತು. ಯಾಕೆಂದರೆ ನಿಮ್ಮ ಹಾಸ್ಟೇಲ್‌ ನೆನಪು ಆಸಕ್ತಿದಾಯಕವಾಗಿದೆ.
    ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷೆಯಲ್ಲಿ. ದಯವಿಟ್ಟು ಪ್ರತಿಕ್ರಿಯಿಸಿ

    nanna mail id: bpchand@gmail.com

Leave a reply to Sandeepa Nadahalli ಪ್ರತ್ಯುತ್ತರವನ್ನು ರದ್ದುಮಾಡಿ