ಟೀ..ಲೀಡಿಂಗ್ ಕಾಫೀ.. ?

ಮಾರ್ಚ್ 6, 2010 at 8:46 ಅಪರಾಹ್ನ (article) (, )


ವಲ್ಡ್ ಅಲ್ಲಿ ಟೀ ಕುಡಿಯೋರ ಸಂಖ್ಯೆ ಲೀಡಿಂಗ್ ಅಲ್ಲಿ ಇದೆಯಂತೆ!! 🙂 ಟೀ ಇಷ್ಟ ಪಟ್ಟು ಕುಡಿಯೋರೆಲ್ಲ ಹೇಳ್ಕೋಬಹುದು.. ಏನೋ ಕುತೂಹಲ ಅನಿಸೋಲ್ವೆ??
ಎರಡರಲ್ಲೂ ಪೊಸಿಟಿವ್, ನೆಗೆಟೀವ್ ಅಂಶಗಳಿದೆ.. ಆರೋಗ್ಯದ ದೃಷ್ಟಿಯಿಂದ ಎರಡರಲ್ಲೂ ಉತ್ತಮ ಗುಣಗಳಿವೆ ಹಾಗೆಯೇ ಹಾನಿಕಾರಕವೂ ಕೂಡಾ..

ಮೇಲ್ನೋಟಕ್ಕೆ ಕಾಫೀ,ಟೀ ಬೋತ್ ಹಾಟ್ ಡ್ರಿಂಕ್ಸ್ ಗಳು,ಅವುಗಳಲ್ಲೂ ಕೋಲ್ಡ್ ಗಳೂ ಇದೆ.. ಆದ್ರೂ ಹೆಚ್ಚಾಗಿ ಇದು ಬಿಸಿ ಪಾನೀಯಗಳು ಎಂದು ಖ್ಯಾತಿ ಪಡೆದಿವೆ. ಎರಡಕ್ಕೂ ಪ್ರಾಮುಖ್ಯತೆಯೇನೋ ಸಮಾನವಾಗಿದೆ, ಆದ್ರೆ ಅಂಕಿಅಂಶ ಲೆಕ್ಕಚಾರ ಪ್ರಕಾರ ಟೀ ಕುಡಿಯೋರ ಸಂಖ್ಯೆ ಜಾಸ್ತಿಯಂತೆ.

ಇರಬಹುದು, ನಮ್ಮ ಹಾಸ್ಟೆಲ್ ನಲ್ಲೂ ಟೀ ಕುಡಿಯೋರೆ ಜಾಸ್ತಿ ಇರೋದು. ಅದರ ಕ್ಯಾನ್ ಕಾಫೀ ಕ್ಯಾನ್ ಗಿಂತ ದೊಡ್ಡದಿದೆ. ಹಾಗಂತ ಕಾಫಿನೂ ಸ್ಪರ್ಧಾತ್ಮಕ ರೀತಿಯಲ್ಲಿಯೇ ಹಿಂದೇನೆ ಇದೆ! ಏನೇ ಹೇಳಿ.. ಕಾಫೀ ಡೇ ಎಲ್ಲಾ ಊರಲ್ಲೂ ತಲೆ ಎತ್ತುತ್ತಿರೋದು ನೋಡಿದ್ರೆ.. ಕಾಫಿ ಪ್ರಿಯರೇ ಜಾಸ್ತಿಯೇನೋ ಎಂದೆನಿಸುತ್ತಲ್ವಾ?? ಕಾಫಿಯಲ್ಲಿ ವೆರೈಟಿ ಕುಡಿಬೇಕಾದ್ರೆ ಅಲ್ಲಿಗೇ ಹೋಗ್ಬೇಕಷ್ಟೆ! ಬಟ್ ಟೀಯ ವರೈಟಿಯನ್ನ ಟೀ ಪ್ರಿಯರು ಮನೇಲೇ ಟ್ರೈ ಮಾಡ್ತಾರೆ.. ಬ್ಲಾಕ್ ಟೀ, ಮಸಾಲಾ ಟೀ, ಗ್ರೀನ್ ಟೀ, ಲೆಮನ್ ಟೀ.. ಇನ್ನೂ ಲಿಸ್ಟ ಇದೆ..!

ಇನ್ನೊಂದು ಕೆಟಗರಿ.. ಎರಡು ಕೂಡ ಒಕೆ.. ಅನ್ನೋರು, ಆದರೂ ಅವರಲ್ಲಿ ಯಾವದು ತೆಗೋತೀರಿ ಅಂದ್ರೆ, ಕೆಲವರಲ್ಲಿ ಟೀಗೆ ಪ್ರಯಾರಿಟಿ,ಇದ್ರೆ ಕೆಲವರು ಕಾಫಿಗೆ! ಇನ್ನು ಕೆಲ್ವರು ರಾನ್ಡಮ್ ಆಗಿ ತಕ್ಕೊಂದ್ರೆ, ಮತ್ತೆ ಕೆಲವರು ಟೈಮ್ ನೋಡಿ, ಪ್ಲೇಸ್ ನೋಡಿ, ಅದಕ್ಕೆ ಸರಿಯಾಗಿ ತಕ್ಕೊಂದ್ರೆ, ಕೆಲ್ವರು ಆಗಿನ ರೌಂಡ್ನಲ್ಲಿ  ಟೀ ಕುಡಿದೆ, ಈಗಿನ ರಂಡ್ನಲ್ಲಿ ಕಾಫಿ ಇರಲಿ ಅಂತಿರ್ತಾರೆ ಅಲ್ವಾ..? ನಮ್ಮ ಹಾಸ್ಟೆಲ್ ನಲ್ಲೂ ಆ ಕೆಟಗರಿ ಇದೆ.. ಎರಡಕ್ಕೂ ಮುಗಿ ಬಿದ್ದು ಲೋಟ ಹಿಡ್ಕೊಂದ್ರೆ, ಟೀಗೆ ಪ್ರಿಫರೆನ್ಸ್, ಎಲ್ಲಾದ್ರು ಟೀ ಖಾಲಿ ಆದ್ರೆ ಯಾವದಾದ್ರು ಒಕೆ ಅನ್ನೋರು ಕಪ್ ಗೆ ಕಾಫಿ ಹಾಕ್ತಾರೆ.. ಆಗದವರು ಪುನ ರೆಡಿ ಮಾಡೋವರೆಗೆ ಕಾಯ್ತಿರ್ತಾರೆ! ಈ ಕಾಫಿ, ಟೀ ಗೆ ಇಷ್ಟೊಂದು ಡಿಪೆಂದ್ ಆಗಿ ಬಿಟ್ವಾ….??!!

-ನಲ್ಮೆಯಿಂದ
ದಿವ್ಯ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: