ಸಂಗೀತ ಅಹಾ ಅಹಾ..

ಮಾರ್ಚ್ 23, 2010 at 10:04 ಅಪರಾಹ್ನ (article) (, )

ಚಿತ್ರ ಕೃಪೆ: http://www.univie.ac.at/


ಆ… ಸಂಗೀತಕ್ಕೆ ಬಾಡಿ ಮೂವ್ ಮಾಡದವರಾರು??? ಯಾರು ರಾಗ ತಾಳ ಶೃತಿಯನ್ನು ಕಂಡು ಹಿಡಿದ್ರೋ… ಗ್ರೇಟ್ ಅಪ್ಪಾ…!!
ಮೂಡ್ ಹೋಗಿಸಲು ಸಂಗೀತ.. ಮೂಡ್ ಬರಿಸಲು ಸಂಗೀತ.. ಇದು ವರ್ಕ್ ಆಗುತ್ತೆ .. ಪ್ರಯತ್ನ ಮಾಡಿ ನೋಡಿ ಬೇಕಿದ್ರೆ..  🙂
ಫುಲ್ ಲವ್ ಮೂಡನಲ್ಲಿ ಇದ್ರೆ.. ಅದಕ್ಕೆ ಸೂಟ್ ಆಗೋ ಹಾಡುಗಳು.. ಸುಮ್ಮನೆ ಕೇಳಿ ನೋಡಿ.. ಮತ್ತೂ ಫೀಲಿಂಗ್ಸ್ ಹೆಚ್ಚು ಮಾಡ್ತವೆ!! ಜೋರು ಮನೆ ನೆನಪಾಗ್ತಿದ್ಯಾ… ನೆನೆಪುಗಳ ಮತು ಮಧುರ… ಇಂಥ  ಹಾಡು ಕೇಳಿ… ಕಣ್ಣಲ್ಲಿ ನೀರೇ ಬಂದು ಬಿಡುತ್ತೆ…  😦

ಯಾವುದೋ ಸ್ಯಾಡ್ ಮೂಡ್ ಅಲ್ಲಿ ಇದೀರಾ… “ಚಕ್ಕಲಿ ನಿಪ್ಪಟ್ಟು ತಿನ್ಕೊಂಡು ಗೋಲಿ ಆಟ ಆಡ್ಕೊಂಡು… “ ಇಂಥ ಹಾಡು ಪ್ಲೇ ಮಾಡಿ.. ಸ್ಯಾಡ್ ಮೂಡ್ ಎಲ್ಲ ಹೋಗಿ.. ಬಾಡಿ ಮೂವ್ ಮಾಡದಿದ್ರೆ… ಕೇಳಿ!! ಸುಮ್ಮನೆ ಟೈಂಪಾಸ್ ಆಗ್ಬೇಕೋ.. “ಸಕತ್ತಾಗವ್ಳೆ… ಸುಮ್ಮನೆ ನಗ್ತಾಳೆ” ಇಂಥ ಸಾಂಗ್ ಪ್ಲೇ ಮಾಡಿ…
ದೈವ ಭಕ್ತಿ ಬೇಕೆಂದಾಗ… “ಪಿಳ್ಳಂಗೋವಿಯ ಚೆಲುವ ಕೃಷ್ಣನ …” ಪ್ಲೇ ಮಾಡಿ.. ಹಾಗೆ.. ಮುಳುಗಿ ಹೋಗುತ್ತೆ ಮನಸ್ಸು…!

ಅನಿಮೇಟೆಡ್ ಪ್ರಾಣಿಗಳೇ ಆಕ್ಟರ್ ಆಗಿರೋ.. “ಐ ಲೈಕ್ ಟು ಮೂವ್ ಇಟ್ ಮೂವ್ ಇಟ್..” ಸಕತ್ ಮೂವ್ ಮಾಡ್ಸುತ್ತೆ.. 🙂 “ಜಿಂಕೆ ಮರಿನ..” ಇದೂ ಅಷ್ಟೆ, “ಚಿತ್ರಾನ ಚಿತ್ರಾನ… “ ಇವೆಲ್ಲ ಎಷ್ಟೇ ಬೇಜಾರು ಮನಸ್ಸಲ್ಲಿದ್ರೂ.. ಬೇರೇನೇ ಲೋಕಕ್ಕೆ ಕರ್ಕೊಂಡು ಹೋಗುತ್ತೆ…
ಪ್ರಸ್ತುತ ಯಾವ ಭಾವನೆಯಲ್ಲಿರುತ್ತೀರೋ ಅದಕ್ಕೆ ತಕ್ಕುದಾದ ಹಾಡು ಹಾಕಿ ಕೇಳಿ ನೋಡಿ.. ಒಂಥರಾ.. ಚೇಂಜಸ್ ಬಂದೇ ಬರುತ್ತೆ. ಬೇಜಾರದಲ್ಲಿದ್ರೆ… ಕಣ್ಣ ಹನಿ ಸುರಿಲೇ ಬೇಕಿದ್ರೆ… “ಬಾಡಿ ಹೋದ ಬಳ್ಳಿಯಿಂದ..” ಬೇಡ್ವಾ… ಹೊರಗೆ ಬರ್ಬೇಕು ಅಂದ್ರೆ…. ” ಜಲ ಜಲ ಜಲ್ಜಾಕ್ಷಿ.. ಮಿನ ಮಿನ ಮಿನ ಮೀನಾಕ್ಷಿ …” 🙂

ಮತ್ತೆ ವಯಸ್ಸಿಗೆ ತಕ್ಕಂತೆ ಬೇಕಾದ ಹಾಡುಗಳು… ಪುಟಾಣಿಗಳಿಗೆ.. “ತೊಂಡೆಕಾಯಿ ಬೆಂಡೆಕಾಯಿ ತೋಟದಲ್ಲಿದೆ… “ 😉 ಟೀನ್ ವಯಸ್ಸಿಗರಿಗೆ.. “ಅಮ್ಮ ಅಂತಾರೆ ಚೆಲ್ಲು ಚೆಲ್ಲಾಗಾಡ್ಬೇಡಾ… ಅಪ್ಪ ಅಂತಾರೆ ಹೊರಗೆಲ್ಲೂ ಹೋಗ್ಬೇಡಾ…” ಸ್ವಲ್ಪ ಟ್ವೆಂಟಿ ದಾಟಿ ಪ್ರಭುದ್ಧತೆ ಬಂದವರಿಗೆ.. “ಏನಾಗಲಿ ಮುಂದೆ ಸಾಗು ನೀ…” ಹಿರಿಯರಿಗೆ.. “ನಮ್ಮ ಸಂಸಾರ ಆನಂದ ಸಾಗರ..” 🙂 ಹೇಗೆ ಬೇಕೋ ಹಾಗೆ!!

ಸಂಗೀತಕ್ಕೆ ಎಷ್ಟೊಂದು ಶಕ್ತಿ ಇದೆ ಅಲ್ವಾ…. ? ಎಫ್ ಎಂ ಚಾನೆಲ್ ಗಳೆಲ್ಲ  ಪ್ರಸಿದ್ಧಿ ಆಗ್ತಿರೋದು ಇದಕ್ಕಾಗ್ಯೇ ಇರ್ಬೇಕು… 🙂 ಬೇರೆ ಭಾಷೆಗಳಲ್ಲೂ ಇದೆ… ಕೆಲವೊಂದನ್ನಷ್ಟೇ ಹೇಳಿದೆ… ನಿಮಗೊಂದಿಷ್ಟು.. ಭಾವನೆಗಳನ್ನು ಪುಷ್ಟೀಕರಿಸಿದ, ಮನದ ಯೋಚನೆಯನ್ನೇ ಬದಲಾಯಿಸಿದ ಹಾಡುಗಳಿದ್ದರೆ..ಪ್ರತಿಕ್ರಿಯೆಯಲ್ಲಿ ಹಾಕಿ…. ನಮ್ಮ ಭಾವನೆಗಳನ್ನೂ ಚೇಂಜ್ ಮಾಡಿಸಬಹುದು… ಅಲ್ವೇ…!!

-ನಲ್ಮೆಯಿಂದ

ದಿವ್ಯ


Advertisements

Permalink 3 ಟಿಪ್ಪಣಿಗಳು

ಸಮಸ್ತ ಕನ್ನಡಿಗರ “ಹೆಮ್ಮೆ”!!!

ಮಾರ್ಚ್ 18, 2010 at 12:05 ಅಪರಾಹ್ನ (article)

ಸಮಸ್ತ ಕನ್ನಡಿಗರ ಹೆಮ್ಮೆಯ ದಿನಪತ್ರಿಕೆಗೆ ಇಂದೇನಾಗಿದೆ??
ಕೆಲವೊಂದು ಬ್ಲಾಗ್ ಗಳಲ್ಲಿ ವಿಜಯ ಕರ್ನಾಟಕದ ಹೆಮ್ಮೆಯನ್ನು ಧೈರ್ಯದಲ್ಲಿ ಎತ್ತಿ ಹಿಡಿದಿದ್ದಾರೆ…
ಬೆಕ್ಕಿಗೆ ಗಂಟೆ ಕಟ್ಟಲು.. ಎಲ್ಲೋ ಪ್ಲಾನ್ ಹಾಕಬೇಕಾಗಿದೆ.. ಹಾಗಾಗಿ ನನ್ನ ಬ್ಲಾಗ್ ನಲ್ಲೂ ವಿಜಯ ಕರ್ನಾಟಕಕ್ಕೊಂದು “ಧಿಕ್ಕಾರ”!!

ಬೀಗುವುದನ್ನ ಸ್ವಲ್ಪ ಕಡಿಮೆಗೊಳಿಸಿ ತಪ್ಪನ್ನು ತಿದ್ದಿಕೊಂಡರೆ ಒಳಿತು…!
ಹೆಮ್ಮೆಯ ದಿನಪತ್ರಿಕೆಯಾಗಿತ್ತೇನೋ ನಿಜ… ಅದನ್ನು ಹಾಗೆಯೇ ಮೈಂಟೈನ್ ಮಾಡೋದು ಬಿಟ್ಟು, ಜಾಸ್ತಿ ಹೆಮ್ಮೆಯಾದರೆ.. ಹೀಗೇ ಆಗೋದು..
ಖ್ಯಾತ “ವಿಮರ್ಶಕಿ” ಬ್ಲಾಗ್ ನಲ್ಲಿ. “ಮನದಾಳದ ಮಾತು” ಬ್ಲಾಗ್ನಲ್ಲಿ.. ಇನ್ನು ಹಲವು ಬ್ಲಾಗ್ ನಲ್ಲಿ ವಿಜಯಕರ್ನಾಟಕದ ನಿಜವಾದ ಮುಖವನ್ನು ಬಹಿರಂಗ ಪಡಿಸಿದ್ದಾರೆ.. ಅವರೊಂದಿಗೆ ನನ್ನದೊಂದು ರೇಟಿಂಗ್ ಇರಲಿ.. ಅದಕ್ಕಾಗಿಯೇ ಈ ಪೋಸ್ಟಿಂಗ್!

ಹಿಂದೆ ನನ್ನ ಮೆಚ್ಚಿನ ಪತ್ರಿಕೆಯಾಗಿತ್ತು..ಸಿಲ್ಲಿ ಪಾಯಿಂಟ್, ಪ್ರತಾಪ್ ರವರ ಕಾಲಂ ಇತ್ಯಾದಿಗಳಿಗೆ ಹಿಂದಿನ ದಿನವೇ ಕಾಯ್ತಿರ್ತಿದ್ದೆ..!! ಬಟ್ ಪೇಪರ್ ಕೆಟ್ಟೋಗ್ತಿದೆ..!!   ನಾವೆಲ್ಲ ಹಿಂದಿನ ವಿಜಯ ಕರ್ನಾಟಕವನ್ನೇ ಬಯಸುತ್ತಿದ್ದೇವೆ…!!. ಈಗೇಕೆ ಹೀಗಾಗುತ್ತಿದೆ?? ವಿಷಯಗಳ ಬದಲು ಜಾಹಿರಾತುಗಳೇ ಪುಟಗಳನ್ನೆಲ್ಲಾ ತುಂಬಲು ಶುರುವಾಗಿದೆ, ೧೫ನೇ ದಿನದ ಪೇಪರ್ನಲ್ಲಂತೂ ಬೆಂಗಳೂರು ಎಡಿಶನ್ ಅಡ್ವರ್ಟೈಸ್ ಗೇ ಸೀಮಿತವಾಗಿದ್ದಂತಿತ್ತು. ಇವತ್ತಿನ ಪತ್ರಿಕೆಯ ಲವಲವಿಕೆ ಮೊದಲ ಪೇಜ್  ಓದಿ, ಪೌಷ್ಟಿಕ ಹುಡುಗಿ ಬಗ್ಗೆ ಬರೆದಿದ್ದಾರೆ.. ಅಲ್ಲ ವಿಷಯಕ್ಕೂ ಅದರನ್ನು ಹೇಳೋ ರೀತಿಗೂ ಕನಿಷ್ಟ ಸಾಮ್ಯತೆ ಬೇಡವೇ??? ಹೀಗೇಕೆ ಹೆಮ್ಮೆಯ ದಿನಪತ್ರಿಕೆಯಲ್ಲಿ ತಪ್ಪುಗಳಾಗುತ್ತಿದೆ?? ಮೇಲಿಂದ ಮೇಲೆ?? ದೊಡ್ಡ ದೊಡ್ಡ ಕಾಲಂಗಳಿಗರು  ಇದ್ದಾರೆ ನಿಜ.. ಓದುವವರಿದ್ದಾರೆ ಹೇಳಿ ಹೇಗೆ ಬೇಕಂದ ಹಾಗೆ ಪ್ರಕಟಿಸುವುದು ಯಾವ ನ್ಯಾಯ?? ಪ್ರಕಟಿಸುವುದಕ್ಕೆ ಮೊದಲು ನೀವೊಮ್ಮೆ ಓದಿಕೊಳ್ಳಿ!

ದೃಶ್ಯ ಫೋಟೋಸ್ ಬ್ಲಾಗ್ ಓನರ್ ಆಗಿರೋ ಖ್ಯಾತ ಚಿತ್ರಗ್ರಾಹಕ” ಹರೀಶ್ ಹಳೆಮನೆ” ಅವರು, ಫ್ಲಿಕ್ಕರ್ ಅಲ್ಲಿ ಶೇರ್ ಮಾಡಿರೋ ಫೋಟೋವನ್ನು ಕದ್ದು ಪೇಪರ್ ಗೆ ಹಾಕೋ ಅವಶ್ಯಕತೆ ಏನಿತ್ತು?? ಅದೂ ಬೈ ಲೈನ್ ಇಲ್ಲದೇಯೇ ಪ್ರಕಟವಾಗಿದೆ!! ಇವರಿಗೆಲ್ಲ ಕೇಳೋರಿಲ್ಲವೇ?? ಫ್ಲಿಕ್ಕರಿಗರೇ ಎಚ್ಚರ!! ಸುಂದರ ಫೋಟೋಗಳನ್ನು ಕದಿಯುವವರಿದ್ದಾರೆ..!! ಶಾರೂಖ್ ಖಾನ್ ಅವರಿಗೆಲ್ಲ ಖಾನ್ ಕುಲ್ ಕರಿಸಿದ ಪ್ರತಾಪ್ ಸಿಂಹರವರೇ.. ವಿಜಯ ಕರ್ನಾಟಕ  ಪತ್ರಿಕಯ ತಪ್ಪುಗಳನ್ನು ಕೋಲ್ ಕರಿಸಿ, ಎತ್ತಿ ಹಿಡಿದಿದ್ದೇವೆ.. ಎಚ್ಚರಿಸಲು ಹಿಂಜರಿಕೆಯೇಕೆ??? ಹೆಮ್ಮೆಯ ಪತ್ರಿಕೆಯ ಪುಟಗಳನ್ನೊಮ್ಮೆ ಸಮಸ್ತರೂ ತಿರುವಿ ಹಾಕಿ…!! ಗೊತ್ತಾದೀತು!!

ಹೆಚ್ಚಿನ ಮಾಹಿತಿಗೆ ವಿಮರ್ಶಕಿ ತಾಣ,ಮನದಾಳದ ಮಾತು ತಾಣಕ್ಕಭೇಟಿ ಕೊಡಿ:

ಕೃಪೆಯಿಂದ:

http://wp.me/py6fj-bL

http://blog.nadahalli.com/2010/01/blog-post.html

http://blog.nadahalli.com/2009/12/blog-post.html

ಚಿತ್ರ ಕೃಪೆ: http://connect.in.com/vijaya-karnataka/connection-522652-390250.html

-ನಲ್ಮೆಯಿಂದ

ದಿವ್ಯ

Permalink 7 ಟಿಪ್ಪಣಿಗಳು

Next page »