ನಮ್ಮನೆಲ್ಲ ಪೊರೆವ ತಾಯಿ..

ಫೆಬ್ರವರಿ 28, 2010 at 7:52 AM (article)

ಚಿತ್ರದಲ್ಲಿ ಕಂಡ ತಾಯಂದಿರು ದಿನವೂ ಕಾಣ ಸಿಗುತ್ತಾರೆ. ಈ ಅಮ್ಮಂದಿರಿಗೆ ಹೆರಿಗೆ ರಜೆಗಳೂ ಇಲ್ಲ ರೆಸ್ಟ್ ಅಂತೂ ಮೊದಲೇ ಇರಲಿಕ್ಕಿಲ್ಲ. ತನ್ನ ಕಂದನಾದರೂ ಹೊಟ್ಟೆ ತುಂಬಾ ಊಟ ಮಾಡಲಿ ಎಂದು ತಮ್ಮ ತುತ್ತನ್ನೂ ನೀಡಿ ಕಂದನನ್ನು ಬೆಳೆಸುತ್ತಾರೆ. ಬಟ್ಟೆಯಿಂದ ತೋಳ ತೆಕ್ಕೆಯಲ್ಲಿ ಕಟ್ಟಿ, ಕೆಲ್ಸದ ಜೊತೆಯಲ್ಲಿ ಬೆನ್ನಲ್ಲಿ ಮಗು!  ಅವರ ಮಕ್ಕಳನ್ನು ನೋಡಿಕೊಳ್ಳಲು ಯಾವ ನರ್ಸ್, ಆಯಾ, ಕೆಲಸದವರಿಲ್ಲ! ಪ್ಲೇ ಹೋಮ್ ಅಂತೂ ಕನಸಿನ ಮಾತು. ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕಿಂತ ಅವರಿಗೆ ತುತ್ತು ಅನ್ನವನ್ನೊದಗಿಸುವುದೇ ಮೊದಲ ಕರ್ತವ್ಯವಾದರೆ, ವಿದ್ಯಾಭ್ಯಾಸ ಎಲ್ಲಿ ಬಂತು!!

ಇಂಥ ದೃಶ್ಯ ನೋಡಿದಾಗ ಒಮ್ಮೆ ಮನದಲ್ಲಿ ಕಳವಳ,ಕರುಣಾ ಭಾವನೆ,ಆತಂಕ ಎಲ್ಲ ಗಳಿಗೆಯಲ್ಲಿ ಅಟ್ಯಾಕ್ ಮಾಡಿ ಬಿಡುತ್ತವೆ. ನಮ್ಮ ಅಮ್ಮಂದಿರು ಕಣ್ಣ ಮುಂದೆ ಬಂದು ಬಿಡುತ್ತಾರೆ. ನಾವೆಷ್ಟೋ ಸುಖಿಗಳು ಪುಣ್ಯವಂತರೆ ಸರಿ..!. ರಸ್ತೆಗೆ ಓಡಿದರೂ ಹಿಂದೆಯೇ ಓಡಿಬರುತ್ತಿದ್ದ ಅಮ್ಮಾ… ಆದ್ರೆ ಈ ಮಕ್ಕಳಿಗೆ ರಸ್ತೆಯೇ ಆಟವಾಡೋ ಜಾಗ! ಒಂದು ಕೆಮ್ಮು ಶೀತ ಬಂದರೂ ನಮ್ಮ ಅಮ್ಮಂದಿರ ಕಳವಳ, ಉಪಚಾರಿಕೆ, ಕಾಳಜಿಗೆ ತಲೆ ಬಾಗಲೇ ಬೇಕು. ಆದರೆ ಆ ಮಕ್ಕಳನ್ನು ನೋಡಿ.. ಹೇಗಿರುತ್ತವೆ ಅಲ್ಲವೇ.. ಆದರೂ ಆ ತಾಯಿ ತನ್ನ ಕೈಗೆಟುಕಿದ ರೀತಿಯಲ್ಲಿ ಮಕ್ಕಳನ್ನು ಕಾಪಾಡುತ್ತಾಳೆ.

ನಾವು ದೊಡ್ಡವರಾದಂತೆ ಅಂತಹ ಪ್ರೊಟೆಕ್ಟೀವ್ ಅಮ್ಮಂದಿರನ್ನ ಕಳೆದುಕೊಳ್ಳುತ್ತಿದ್ದೇವೆ, ಎನ್ನುವುದಕ್ಕಿಂದ ನಾವೇ ಬಯಸುವುದಿಲ್ಲವೇನೋ ಎಂದೆನಿಸುತ್ತದೆ. ಬಾಲ್ಯದಲ್ಲಿ ಅಮ್ಮನ ಸೆರಗಿನ ಹಿಂದೆ ಅಪರಿಚಿತರನ್ನು ಕಂಡಾಗ ಅಡಗಿದಂತೆ, ಈಗ ಅಡಗಿಕೊಳ್ಳಲಾದೀಗೇ?? ಮುಹು…!! ಮತ್ತೆ ಬಾಲ್ಯಕ್ಕೆ ಮರಳಬೇಕೇನೋ ಅಮ್ಮ ಕೈ ಹಿಡಿದು ನಮ್ಮನು ನಡೆಸಲು…!!!

-ನಲ್ಮೆಯಿಂದ

ದಿವ್ಯ

Advertisements

2 ಟಿಪ್ಪಣಿಗಳು

  1. rakeshsshetty said,

    ಗುಡ್ one… ದಿವ್ಯ,
    ಇನ್ನೊಂದಿಷ್ಟು ಬಿಡಿಸಿ ಚೆನ್ನಾಗಿ ಬರೆಯಬಲ್ಲೆ ನೀನು.. try it..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: