ಇಬ್ಬನೀ ನಿನ್ನ ಬಾಚಿ ಕುಡಿಯೋ ಆಸೆ..!

ಫೆಬ್ರವರಿ 22, 2010 at 5:23 ಅಪರಾಹ್ನ (article)

ಇನ್ನೇನು ಬೇಸಗೆ ಕಾಲ ಪ್ರಾರಂಭ ಆದ್ರೂ ಹಾಸನದಲ್ಲಿ ಚುಮು ಚುಮು ಮುಂಜಾವಿನ ಚಳಿ, ಚುರ್ ಎಂದು ಮುದುಡಿ ಮಲಗುವಂತೆ ಮಾಡುತ್ತಿತ್ತು… ಇಲ್ಲಿ ಮಂಜು ಮುಸುಕಿದ ಮುಂಜಾನೆ ಚಳಿಗಾಲದಲ್ಲಿ ಸಹಜವಾದ ದೃಶ್ಯ. ಆ ಚಳಿಯಲ್ಲಿ ೭.೩೦ ಕ್ಲಾಸ್ ಗೆ ಹೋಗೋದಂದ್ರೆ.. ಬೆಳಗ್ಗೆ ಬೇಗನೆ ಹಾಸಿಗೆ ಬಿಡೋದು..ಕಷ್ಟ!.. ಆದ್ರೆ ಚಳಿಲಿ ನಡ್ಕೊಂಡು ಕಾಲೇಜ್ ಗೆ ಹೋಗೋದು ಇಷ್ಟ. ಹೋಗಿ ಕ್ಲಾಸ್ನಲ್ಲಿ ಬೆಳಬೆಳಗ್ಗೆ “ಆ….” ಎಂದು ಲೆಕ್ಚರ್ ಕಣ್ಣು ತಪ್ಪಿಸಿ ಆಕಳಿಸೋದು…ಹೀಗೆಲ್ಲ ಮುಂಜಾವಿನ ಕಥೆ!!

ಬೆಳಗ್ಗೆ ದೇವರ ನೆನಪಾಯ್ತು.. ಕಷ್ಟ ಬಂದಾಗ ಅವನಲ್ಲಿ ಅಪ್ಲಿಕೇಶನ್ ಹಾಕೋದು ಇದ್ದಿದ್ದೇ.. ಆದ್ರೂ ಮಧ್ಯಾಹ್ನ ಹೊತ್ತಿನಲ್ಲಿ ಹೋದ್ರೆ ದೇವರು ಇಂಪ್ರೆಸ್ ಆಗಲ್ಲ.. ಬೆಳಗ್ಗೆ ಆ ಚಳಿಲಿ  ಬೇಗ ಎದ್ದು ಹೋದ್ರೆ ಮೊದಲನೆದು ನಮ್ಮದೇ ಕೋರಿಕೆಯಾಗಿ ತಕ್ಕೊಳ್ಳಲಿ, ಸ್ವಲ್ಪ ಕರುಣೆ ಬರಲಿ ಅಂತ ಬೆಳಗ್ಗೆ ಹೊರಟೆ. ಒಬ್ಬಳೇ ವಾಕ್.. ಉದ್ದದ ರಿಂಗ್ ರೋಡ್ ನೈಸ್ ರಸ್ತೆಯಂತೆಯೇ ಇದೆ. ಆದರೆ, ಅಷ್ಟಗಲಕ್ಕಿಲ್ಲ! ಹತ್ತೆ ಹೆಜ್ಜೆ ದೂರಕ್ಕೆ ಏನಿದೆ ಎಂದು ಕಾಣದಷ್ಟು ಮಂಜು ಮುಸುಕಿತ್ತು!

ವಾಹ್ ನೋಡಲು ಅತಿ ರೇರ್ ಸಿಕ್ಕೋದು ಇಂಥಹ ದೃಶ್ಯಗಳು.. ಎಲೆ ಮೇಲೆ ಹನಿ ಹಾಗೆ ಮುತ್ತಿನಂತೆ ಕಾಣ್ತಿತ್ತು. ರಸ್ತೆ ಬದಿಯ ಸಾಲು ಮರಗಳು ಬರಿ ಅದರ ಸ್ಕೆಲಿಟನ್ ಮಾತ್ರ ಕಂಡಂತೆ, ಎಲೆಗಳೆಲ್ಲ ಕಾಣಿಸ್ತಿರಲಿಲ್ಲ… ಇದೆಲ್ಲ ಕಾಶ್ಮೀರವನ್ನ ನೆನಪಿಸಿತ್ತು. ಆ ಬೆಳಗ್ಗೆ ಇಂಥಾ ದೃಶ್ಯದ ಜೊತೆ ಚೀಂವ್ ಚಿಂವ್ ಎಂದು ಹಕ್ಕಿಗಳ ಸಂಭಾಶಣೆ. ಒಬ್ಬಳೇ ಎಲ್ಲವನ್ನೂ ಆಸ್ವಾದಿಸುತ್ತಾ ಹೋದೆ.. ದೇವರಿಗೆ ಭಕ್ತಿಯಲ್ಲಿ ಕೈ ಮುಗಿದು ಅಪ್ಲಿಕೇಶನ್ ಹಾಕಿ ಬರೋವಾಗ್ಲೂ ವಾತಾವರಣ ಹಾಗೆಯೇ ಇತ್ತು. ಬರೋ ವಾಹನಗಳೆಲ್ಲಾ ಹೆಡ್ ಲೈಟ್ ಹಾಕೊಂಡೇ ಬರುತ್ತಿದ್ದವು.. ಇದೆಲ್ಲ ನೋಡ ಸಿಗೋದು ಬಲು ಅಪರೂಪವೆ. ಯಾವುದೋ ಬೇರೆಯೇ ಪ್ರಪಂಚಕ್ಕೆ ಕರೆದೊಯ್ಯುತ್ತೆ. ಕಪ್ಪು, ಬಿಳುಪು ಲೋಕಕ್ಕೆ…! ಏಕೋ ಮುಂದೆ ರಮಣೀಯ ಅಪರೂಪ ದೃಶ್ಯ ನೋಡ್ತಾ.. ಸಾಗುತ್ತಾ ಸಾಗುತ್ತಾ.. ಅಲ್ಲೇ ಕುಣಿದು ಬಿಡೋಣ ಅನಿಸ್ತು!! 🙂 ನೆನಪುಳಿಯೋ ಮುಂಜಾನೆಯಪ್ಪಾ ಅದು!

“ಹನಿ ಹನಿ ಇಬ್ಬನಿ ನಿನ್ನ ಬಾಚಿ ಕುಡಿಯೋ ಆಸೆ!

ಚಿಲಿಪಿಲಿ ಹಕ್ಕಿಯೇ ನಿನ್ನ ಭಾಷೆ ಕಲಿಯೋ ಆಸೆ. . . .”

-ನಲ್ಮೆಯಿಂದ

ದಿವ್ಯ

Advertisements

2 ಟಿಪ್ಪಣಿಗಳು

  1. shimladkaumesh said,

    🙂 🙂

  2. aruna said,

    nimma “Mathoda mana” odi bahala santhosha aaithu, thavu putturalli nimma vasa sthala elli?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: