ಬಣ್ಣವೆಂಬ ಭಾಷೆ..!

ಫೆಬ್ರವರಿ 15, 2010 at 9:43 AM (article)

ಬಣ್ಣಗಳು ಎಷ್ಟೊಂದು ಮಾತಾಡುತ್ತವೆ. ಸ್ವರವಿಲ್ಲದೆ, ಹಾವ ಭಾವ ಇಲ್ಲದೆಯೇಲ್ಲದೆಯೇ..! ಆದರೂ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ.ಮಿಶ್ರ ಬಣ್ಣಗಳೂ ಮಾತಾಡುತ್ತವೆ.ಕೆಂಪು ಬಣ್ಣ ಪ್ರೀತಿಯನ್ನು ಬಿಂಬಿಸಿದರೆ, ಇನ್ನೊಂದೆಡೆ ಅಪಾಯಕಾರಿ, ಬ್ಯುಸಿ ಎಂದು ಬಿಂಬಿಸುತ್ತದೆ. ನೋಡಿರ್ಬಹುದು, ನೆಟ್ ಚ್ಯಾಟ್ ಲಿಸ್ಟ್ ಅಲ್ಲಿ ರೆಡ್ ಇದ್ರೆ ಯಾರೂ ಮಾತಾಡಿಸೋಲ್ಲ, ಟ್ರಾಫಿಕ್ ಸಿಗ್ನಲ್, ಟ್ರಾನ್ಸ್ಫಾರ್ಮರ್ ಇರುವಲ್ಲಿಯೂ ಕೆಂಪು ಬಣ್ಣ, ಬಣ್ಣದ ಭಾಷೆಯಲ್ಲಿ ಮಾತಾಡುತ್ತೆ.

ಶುಭ ಸಮಾರಂಭಕ್ಕೆ ಹೋಗ್ತಿದ್ರೆ, “ಕಪ್ಪು ಬಟ್ಟೆ ಹಾಕೋಬೇಡ… ” ಹೇಳ್ತಾರೆ ಅಲ್ವಾ.. ಅಲ್ಲೂ  ಕಪ್ಪು ಬಣ್ಣ ಅಶುಭ ಎಂದಾಯ್ತು. ಮಡಿಯನ್ನ ಶುಭ್ರ ಬಿಳುಪು ಸೂಚಿಸುತ್ತದೆ. ನೀಲಿ ಬಣ್ಣ ವಿಶಾಲತೆಯನ್ನು, ಹಸಿರು ಸಮೃದ್ಧಿ, ಟ್ರಾಫಿಕ್ ನಲ್ಲಾದ್ರೆ ಮುಂದೆ ನಡೆಯಿರಿ ಅಂತೇನಾದ್ರು ಹೇಳುತ್ತೆ. ನಮ್ಮ ರಾಷ್ಟ್ರ ಧ್ವಜದಲ್ಲಿಯೂ ದೇಶದ ಬಗ್ಗೆ ತಿಳಿಸಲು ಬಣ್ಣಗಳ ಭಾಷೆಯನ್ನೇ ಅಳವಡಿಸಿದ್ದೇವೆ. ಹೀಗೆ ಒಂದೊಂದು ಬಣ್ಣ ಒಂದೊಂದು ಮಾತುಗಳ ಕೋಡ್ ವರ್ಡ್ ಅಲ್ಲವೇ?

ಬಣ್ಣಗಳು ಭಾವನಾತ್ಮಕವಾಗಿಯೂ ಮಾತಾಡುತ್ತವೆ. ತಿಳಿ ಬಣ್ಣದ ಬಟ್ಟೆ ಹಾಕಿದರೆ, ಕಡು ಬಣ್ಣದ ಬಟ್ಟೆ ಹಾಕಿದರೆ.., ಕೆಲ್ವೊಮ್ಮೆ ಕೂಲ್ ಮಾಡಿದರೆ ಕೆಲವೊಮ್ಮೆ ಕಲಹ ಮಾಡುತ್ತದೆ. ಈಗ ವಾಸ್ತು ಶಾಸ್ತ್ರ ತುಂಬಾ ಪ್ರಚಾರ ಗಿಟ್ಟಿಸುತ್ತಿರುವುದರಿಂದ, ಬಣ್ಣಗಳೂ ವಾಸ್ತುವನ್ನು ಹೇಳಲು ಪ್ರಾರಂಭಿಸಿದೆ. ಈ ದಿಕ್ಕಿನ ಗೋಡೆಗೆ ಇಂಥಹುದೇ ಬಣ್ಣವಾಗಬೇಕು! ಉತ್ತರಕ್ಕೆ ಆ ಬಣ್ಣ, ದಕ್ಷಿಣಕ್ಕೆ ಮತ್ತೊಂದು ಬಣ್ಣ. ಅದಕ್ಕಾಗಿಯೇ ಈಗ ಕಲರ್ ಕಲರ್ ಮನೆಗಳು ಕಾಣಸಿಗುವುದು 🙂 ಎಲ್ಲಾ ಬಣ್ಣಗಳ ಮಹಿಮೆ!!

-ನಲ್ಮೆಯಿಂದ

ದಿವ್ಯ


Advertisements

4 ಟಿಪ್ಪಣಿಗಳು

  1. shimladkaumesh said,

    ದಿವ್ಯಾ… ಲೈಫ್‌ ಕೂಡಾ ಹಾಗೇ… ಕಲರ್‌ಗಳಂತೆ ಕಷ್ಟ ಸುಖಗಳ ಸಮ್ಮಿಶ್ರಣ… ಅದಕ್ಕೇ ಹೇಳೋದೂ LIFE IS COLORFUL 🙂

  2. ekangi said,

    ಕೆಲವೊಂದು ಬಣ್ಣದ ಭಾಷೆಗಳು ನನಗೆ ತೊಂದರೆ ಕೊಡುತ್ತವೆ. ಆಹಾರದ ಪೊಟ್ಟಣಗಳ ಮೇಲೆ ಕೆಂಪು ಹಸಿರು ಚುಕ್ಕಿಗಳನ್ನು ಗುರುತಿಸಲು ಪರದಾಡುವ ನನಗೆ ಚುಕ್ಕಿಗಳ ಬದಲು ಪದಗಳಲ್ಲಿ ವಿಷಯವನ್ನು ನಮೂದಿಸಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ಬಣ್ಣಗುರುಡು ಕೆಲವರಿಗೆ ತಮಾಷೆಯ ವಿಷಯವೆನಿಸುತ್ತದೆ.

    ನಿಮ್ಮ ಬರಹಗಳ ಶೈಲಿ ಚೆನ್ನಾಗಿದೆ. ಬರಹಕ್ಕೆ ಪೂರಕವಾಗಿ ಬಳಸುತ್ತಿರುವ ಚಿತ್ರಗಳು ಮೆರುಗು ನೀಡುತ್ತಿವೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: