ಮನೆ ಗೇಟ್ ನಲ್ಲಿ ಗುಜ್ಜೆ ನೇತಿದ್ದು!!

ಫೆಬ್ರವರಿ 12, 2010 at 10:10 ಅಪರಾಹ್ನ (article) (, )

ಶಿವರಾತ್ರಿಯ ರಾತ್ರಿ…. ನಮ್ಮ ಹಾಸ್ಟೆಲ್ ಎದುರು ಇಬ್ಬರು ಪೋಲೀಸ್ ನಿತ್ತಿದ್ದರು. ಹೋಗಿ ಬರೋ ಜನ ಏನಾದ್ರು ಪೋಲಿ ಕೆಲ್ಸ ಮಾಡಿದ್ರೆ ಅಂತ ಪ್ರಿಕಾಶನ್ ಆಗಿ ನಿತ್ತಿದ್ರೇನೋ!! ಇವರನ್ನ ನೋಡಿ ಶಿವರಾತ್ರಿ ಸಮಯ ಮನೆಯಲ್ಲಿದ್ದಾಗ ಜನಗಳು ಮಾಡಿದ್ದ ಪೋಲಿ ಕೆಲ್ಸ ನೆನಪಾಯ್ತು 🙂

ರಾತ್ರಿ ೧೦ ಕಳೆಯುತ್ತಿದ್ದಂತೆ, ಟಣ್ ಟಣ್ ಎಂಬ ಶಬ್ದ! ಮನೆಯ ಮಾಡಿನ ಹೆಂಚಿಗೆ ರೋಡಿಂದ ಕಲ್ಲು ಬಿಸಾಕ್ತಿದ್ದಿದ್ದು! ಎಲ್ಲರ ಮನೆ ಮಹಡಿಯಿಂದ ಇದೇ ಸೌಂಡ್! ನಾವೋ ಒಳಗೆ, ಹೊರಗೇನಾಗ್ತಿದೆ ಅಂತ ಗೊತ್ತಾಗದವರ ಹಾಗೆ ಡಿಡಿ ೧ ನವ್ರು ಹಾಕ್ತಿದ್ದ ಒಂದೇ ಒಂದು ಬೇಡರ ಕಣ್ಣಪ್ಪ ಸಿನಿಮಾವನ್ನ ಭಕ್ತಿಯಿಂದ ನೋಡುತ್ತಿದ್ದೆವು. ಚಿಕ್ಕವರಾಗಿದ್ದರಿಂದ ದಿನ ಬೇಗ ಮಲಗಿ ಬೇಗ ಎಳ್ಬೇಕು ಎಂಬ ತಾಕೀತಿತ್ತು.ಆದ್ರೆ ಶಿವರಾತ್ರಿ ದಿನ ಬೇಗ ಮಲಗಿ ಎಂದು ಒತ್ತಾಯ ಇಲ್ಲ. ಜಾಗರಣೆ ಅಂತ ಲೆಕ್ಕ. ಸಿನಿಮ ಮುಗಿದ ಕೂಡ್ಲೆ ನಾನು ತಂಗಿ ಅಲ್ಲೇ ಫ್ಲಾಟ್! 🙂

ಒಂದು ಶಿವರಾತ್ರೆ ಮುಗಿದು ಬೆಳಗ್ಗೆ ಎದ್ದು ಸಸ್ಯವೀಕ್ಷಣೆಗೆ ಹೋದೆ. ದಿನಾ ಬೆಳಗ್ಗೆದ್ದು ಸುತ್ತಲಿನ ಗಿಡಕ್ಕೆ ನಂದೊಂದು ಗುಡ್ ಮಾರ್ನಿಂಗ್ ಹೇಳೋ ಕಾರ್ಯಕ್ರಮವಿತ್ತು. ಅಂತೆಯೇ ಅಂದೂ ಹೋಗಿ ಗೇಟ್ ಹತ್ರ ಬಂದೆ. ನೋಡಿದ್ರೆ ಗೇಟ್ ಅಲ್ಲಿ ಗುಜ್ಜೆ (ಮಿಡಿ ಹಲಸಿನಕಾಯಿ)ಯನ್ನ, ಬಳ್ಳಿಕಟ್ಟಿ ನೇತು ಹಾಕಿದ್ರು!. ಶಿವರಾತ್ರಿ ಕೆಲ್ಸ ಅಂತ ಅಪ್ಪಂಗೆ ಹೋಗಿ ಹೇಳಿದೆ. ಅಮ್ಮ, ಅಯ್ಯೋ ಬರೇ ಮಿಡಿ! ಸ್ವಲ್ಪ ಬೆಳೆದಿದ್ರೆ ಅಡುಗೆಗಾಡ್ರೂ ಆಗ್ತಿತ್ತು ಅಂತಂದ್ರು. ಅಪ್ಪ ಉಪ್ಪಿನಕಾಯಿ ಹಾಕು ಚೆನ್ನಾಗಿರುತ್ತೆ ಅಂತ ಐಡಿಯಾ ಕೊಟ್ರು.

ಸಂಜೆ ಮೇಲಿನ ಮನೆ ಆಂಟಿ ಬಂದು ” ಬೆಳಗ್ಗೆ  ನಮ್ಮನೆ ಗೇಟ್ ಅಲ್ಲಿ ಯಾರೋ ಗುಜ್ಜೆ ನೇತು ಹಾಕಿದ್ರು. ಈವತ್ತು ಅದರದ್ದೇ ಸಾರು” ಅಂದ್ರು! ಆಗ ನಮ್ಮನೆಲೂ ಹಾಕಿದ್ರು ಅಂತಂದ್ವಿ! ಆಮೇಲೆ ಗೊತ್ತಾಯ್ತು.. ನಮ್ಮ ರೋಡ್ ಸೈಡ್ ಇರೋ ಎಲ್ಲಾ ಮನೆಗಳ ಗೇಟ್ ಅಲ್ಲೂ ಒಂದೊಂದು ಗುಜ್ಜೆ ನೇತಿದ್ಯಂತೆ!.

ಪ್ರಶ್ನೆ ಈಗ ಶುರು ಆಯ್ತು.. ಯಾರ ಮನೆ ಗುಜ್ಜೆ ಇರಬಹುದು ಎಂದು. 🙂 ಎಲ್ಲರೂ ತಮ್ಮ ತಮ್ಮ ಹಲಸಿನ ಮರಾನ ದಿಟ್ಟಿಸಿ ನೋಡಿದ್ದೇ ನೋಡಿದ್ದು. ಮರದಲ್ಲಿರೋ ಗುಜ್ಜೇನ ಕೌಂಟ್ ಮಾಡಿದ್ದೇ ಮಾಡಿದ್ದು! 🙂 ಆಗ ಸ್ವಲ್ಪ ದೂರದಲ್ಲೇ ರೋಡ್ ನ ಡೆಡ್ ಎಂಡ್ ಅಲ್ಲಿ ಇರೋವರ ಮನೆಯಾಕೆ ಬಂದು ನಮ್ಮನೆ ಗೇಟ್ ಗು ಕಟ್ಟಿದ್ರು. ಆದ್ರೆ ನಮ್ಮನೆ ಗೇಟ್ ಹತ್ತಿರದ ಹಲಸಿನ ಮರದಲ್ಲಿ ಕೆಳಗಿದ್ದ ಸುಮಾರು ಗುಜ್ಜೆ ಎಲ್ಲಾ ಮಾಯವಾಗಿದೆ ಎಂದ್ರು!! ಮತ್ತೆ ಒಂದೊಂದೇ ವಿಷಯಗಳು ಹೊರಗೆ ಬಂತು. ಈಶ್ವರ ಭಟ್ಟರ ಮನೆ ಗೇಟ್ ಅಲ್ಲಿ ” ಇಲ್ಲಿ ಜೋತಿಷ್ಯ, ಭವಿಶ್ಯ, ಮತ್ತು ಜಾತಕ ಮಾಡಿಕೊಡಲಾಗುವುದು” ಎನ್ನೋ ಬೋರ್ಡು, ಲೆಕ್ಚರ್ ಅವ್ರ ಮನೆ ಗೇಟ್ ಅಲ್ಲಿ ನೇತಾಡಿತ್ತು! 🙂 ಶಿವರಾತ್ರೆ ಜಾಗರಣೆ ಮಾಡ್ಬೇಕೇನೋ ನಿಜ, ಆದ್ರೆ ಹೀಗೆಲ್ಲ ಕುತಂತ್ರ ಮಾಡಿ ರಾತ್ರೆ ಕಳೆಯೋದು ಎಷ್ಟು ಸರಿ???!!ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು..  🙂


-ನಲ್ಮೆಯಿಂದ
ದಿವ್ಯ

Advertisements

6 ಟಿಪ್ಪಣಿಗಳು

 1. ಉಮೇಶ್‌ಕುಮಾರ್‍ said,

  ದಿವ್ಯಾ…
  ಶಿವರಾತ್ರಿ ಜಾಗರಣೆ ಸೂಪರ್‍… ಬೋರ್ಡ್‌ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ… ಒಟ್ನಲ್ಲಿ ಗೋಲ್‌ಮಾಲ್‌ 🙂

 2. KUUSU MULIYALA said,

  ದಿವ್ಯಾ,
  ನನ್ನ ಶಾಲೆಯ ದಿನಗಳನ್ನು ಪುನಹ ನೆನಪಿಸಿತ್ತು ನಿಮ್ಮ ಲೇಖನ.ನನ್ನ ಮನೆ ಮುಳಿಯಾಲದಿ೦ದ ಅದ್ಯನದ್ಕದ ಶಾಲೆಗೆ ನನಾಗ ಹೋಗುತ್ತಿದ್ದೆ ಪೂರಾ ಗದ್ದೆ ಬದಿಯ ದಾರಿ .ಶಿವರಾತ್ರಿಯ ಮರುದಿನದ ಮಜವೆ ಬೇರೆ. ಚೆನ್ನಾಗಿ ಬರೆಯುತ್ತೀರಿ ಮು೦ದುವರಿಸಿ.

 3. vinaya said,

  ಸಕತ್ ಆಗಿದೆ , ಮತ್ತೊಮ್ಮೆ ಬಾಲ್ಯಕ್ಕೆ ಹೋಗಿ ಬಂದ ಹಾಗಾಯಿತು 🙂

 4. santosh vaidya said,

  nammurinalli navu maduva kitalegala nenapu bantu…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: