ಅಜ್ಜಿ ಅಜ್ಜಿ ನಮ್ಮಜ್ಜಿ..

ಫೆಬ್ರವರಿ 10, 2010 at 8:49 ಅಪರಾಹ್ನ (article)

ಇಂದು ಸಂಜೆ ಫೋಟೋ ಫೋಲ್ಡರ್ ತೆಗೆದು ಎಲ್ಲಾ ಫೋಟೋ ನೋಡುತ್ತಿದ್ದೆ. ಅಜ್ಜಿ ಮನೆಗೆ ಅಂದರೆ ಊರಿಗೆ ಹೋದಾಗ ತೆಗೆದ ಇತ್ತೀಚಿನ ಫೋಟೋಗಳು! ಅಜ್ಜಿಯ ದಿನಚರಿಯನ್ನ ಸೆರೆ ಹಿಡಿದಿದ್ದು!. ಏಕೋ “ಇವತ್ತಿನ ಕಾನ್ಸೆಪ್ಟ್” ಅವರ ಬಗ್ಗೆಯೇ ಬರೆಯೋಣ ಎಂದೆನಿಸಿತು.ನಮ್ಮಜ್ಜಿ ಎಂಭತ್ತು ದಾಟಿರಬಹುದು.ನಾಲ್ಕು ಮಕ್ಕಳ ತಾಯಿ,ಒಂಭತ್ತು ಮೊಮ್ಮಕ್ಕಳು, ಚಿಳ್ಳಿಗಳೂ ಇದ್ದಾರೆ 🙂

ನೋಡಲು ಸಣಕಲಾಗಿದ್ದರೂ ಬಾಯಿ ಮಾತ್ರ ದೊಡ್ಡದೇ.. ಚುರುಕಾಗೇ ಇದ್ದಾರೆ. ಸಕತ್ ಮಾತು!. ಯಾರೇ ಹೊಸಬರು ಮನೆಗೆ ಬಂದರೂ ತಮ್ಮ ಮರುಜನ್ಮದ ಕಥೆ ಹೇಳೇ ಹೇಳುತ್ತಾರೆ. ಅಜ್ಜಿ ಒಮ್ಮೆ ಬಸ್ ಅಕ್ಸಿಡೆಂಟ್ ಅಲ್ಲಿ ನಜ್ಜಿ ಗುಜ್ಜಿ ಹೋಗಿದ್ರು, ಅತ್ತೆಯೋ ಇತ್ತೆಯೋ ಎಂಬಂತಾಗಿತ್ತಂತೆ. ಈಗಲೂ ಹರಿದಲ್ಲಿಗೆಲ್ಲ ಹಾಕಿದ ಸ್ಟಿಚ್ ಗಳನ್ನು ತೋರಿಸಿ ಆ ಕಥೆಯನ್ನ ನೈಜವಾಗಿ ವಿವರಿಸಿ ಹೇಳ್ತಾರೆ.

ಕಲಿತಿದ್ದು ನಾಲ್ಕನೆ ಕ್ಲಾಸ್. ಮತ್ತೆ ಶಾಲೆಗೆ ಹೋಗುವುದನ್ನು ಅವರಪ್ಪ ಬೇಡವೆಂದು ವಿರೋಧಿಸಿ, ಅತ್ಲಾಗಿ ವಯಸ್ಸಿಗೆ ಬಂದಾಗ ಬೇಗ ಮದುವೆ ಮಾಡಿ ಬಿಟ್ರು. ಅಜ್ಜನಿಗೋ ಕೌಂಟಿಂಗ್ ಬರ್ತಿರ್ಲಿಲ್ಲ! ಎಲ್ಲಾ ಅಜ್ಜಿಯದ್ದೇ ಕೌಂಟಿಂಗ್! ತೋಟ, ಮನೆ, ಗೇರು ಬೀಜ ಮರ,ಇತ್ಯಾದಿಗಳಲ್ಲಿ ಜೀವನ ಸಾಗಿತು. ಊರವರಿಗೆಲ್ಲ ದೊಡ್ಡಮ್ಮ ತರ ಇದ್ರು!

ಅಜ್ಜಿಯಲ್ಲಿ ತುಂಬಾನೇ ಕಥೆಗಳ ಹಾಡುಗಳ ಸ್ಟೋರೇಜ್ ಇದೆ. ಒಂದು ಹೇಳಿ ಅಂದ್ರೆ, ಎರಡು ಮೂರು ಉಚಿತವಾಗಿ ಕೇಳ್ಬಹುದು!:) ಅವ್ರು ನಾಲ್ಕನೆಯವರೆಗೆ ಕಲಿತ ಪಠ್ಯ ಪುಸ್ತಕದ ಹಾಡುಗಳು ಇನ್ನೂ ಹೇಳ್ತಾರೆ. ನಮಗೋ ಲಾಸ್ಟ ಸೆಮ್ ಅಲ್ಲಿ ಯಾವದೆಲ್ಲ ಸಬ್ಜೆಕ್ಟ್ ಇತ್ತು ಅಂದ್ರೆ.. ಮೇಲೆ ಕೆಳಗೆ ನೋಡ್ತೀವಿ.  😦 . ಅದೆಲ್ಲ ಹೇಗೆ ನೆನಪಿದೆಯೋ!! ಅಪ್ಪನಿಗೆ ಒಮ್ಮೆ ಛದ್ಮವೇಶ ಸ್ಪರ್ಧೆಗೆ ಬೇಟೆಗಾರನ ವೇಶ ಹಾಕಿ ಅಭಿನಯಗೀತೆ ಇತ್ತಂತೆ. ಅಜ್ಜಿ ಈಗಲೂ ಮಾಡಿ ತೋರಿಸ್ತಾರೆ.” ಬೇಟೆಗಾರ ಬಂದನು..” ಅಪ್ಪನ ಕೇಳಿದ್ರೆ ಗೊತ್ತಿಲ್ಲಪ್ಪ ನೆನಪಿಲ್ಲ ಅಂತಾರೆ :). ಗಾರ್ಮೆಂಟ್ ವಯಸ್ಕರಿಗೆ ಕಳ್ಸೋ ನಾಕ್ಲುನೂರು ರುಪಾಯಿ, ಮೊಮ್ಮಕಳಿಗೆ ಅಜ್ಜಿಯ ಪ್ರಸಾದ! ಎಲ್ಲರಿಗೂ ಸಮನಾಗಿ ಕೊಡುತ್ತಾರೆ.. ಇನ್ನೂ ಉತ್ತಮ ಅಂಕ ತೆಗಿರಿ.. ಮುಂದೆ ಬನ್ನಿ ಅಂತ ದುಡ್ಡಿನೊಂದಿಗೆ ಆಶೀರ್ವಾದ 🙂

ಅವಿಭಾಜ್ಯ ಕುಟುಂಬದಲ್ಲಿ ಹಿರಿ ಸೊಸೆಯಾಗಿ ಎಂಟ್ರಿ! ಮತ್ತೆ  ವಿಭಜನೆ ಆಗಿ ಆಗಿ ಈಗ ಊರಿನ ಮನೆಲಿ ಚಿಕ್ಕಪ್ಪ, ಚಿಕ್ಕಮ್ಮ ಅಜ್ಜಿ! ಹಿಂದೆ ಮಗಳ ಮಕ್ಕಳು ಮಗಂದಿರ ಮಕ್ಕಳು ಎಲ್ಲೋ ೭-೮ ಕಲಿಯೋ ಮಕ್ಕಳು ಎಲ್ಲ ಗಲಗಲ ವೆಬ್ಬಿಸುತ್ತಿದ್ದ ಕಾಲ. ಈಗ ಕೆಲ್ವರಿಗೆ ಮದ್ವೆ ಆಯ್ತು ಕೆಲ್ವರು ಹೈಯರ್ ಎಜುಕೇಶನ್ ಎಂದು ಹಳ್ಳಿಯಿಂದ ಪಟ್ಟಣ ಸೇರಬೇಕಾಯ್ತು.

ಬೆಳಗ್ಗೆ ಅಜ್ಜಿ ಬ್ರೆಶ್ ಮಾಡಿ, ತಿಂಡಿ ತೀರ್ಥ ಮುಗಿಸಿ, ದೋಸೆ ಹುಯ್ಯೋ ಕೆಲ್ಸವಿದ್ರೆ ಅದು.. ದೇವರ ಪೂಜೆಗೆ ಹೂಗಳನ್ನು ಕೊಯ್ಯುವುದು, ಸ್ನಾನ, ನೀಟ್ ಆಗಿ ಎಣ್ಣೆ ಹಾಕಿ , ಜುಟ್ಟು ಕಟ್ಟಿ ರೆಡಿ !! ಮತ್ತೆ ಒಂದು ರೌಂಡ್ ಚಿಕ್ಕಮ್ಮನಿಗೆ ಅಡುಗೆ ಕೆಲ್ಸದಲ್ಲಿ ಸಹಾಯ. ಮತ್ತೆ ಸಂಜೆ ಬಾಗಿಲ ಬಳಿಯ ತೋಟದಲ್ಲಿ ಮರಗಳಲ್ಲಿ ಕುಶಲ ಕ್ಷೇಮ ವಿಚಾರಣೆ, ಅನನಾಸು ಗಿಡದ ಪ್ರೊಟೆಕ್ಷನ್! ಜೊತೆಗೊಂದಿಷ್ಟು ಟಿವಿ 🙂 ಹಲಸಿನ ಕಾಯಿ ಸೀಜನ್ ಅಲ್ಲಿ ಬೆಳೆದಿದೆಯೇ ಎಂದು ನೋಡಲು, ತೋಟದ ಮೂಲೆ ಮರದ ಮೇಲೆ ದಿಟ್ಟಿಸುತ್ತಾ, ಅಡಕೆ ಹೊಂಡಕ್ಕೆ ಬಿದ್ದು ಸೊಂಟ ನೋವೆಂದು ಹೇಳ್ತಾರೆ. ಹೋಗ್ಬೇಡಿ ಅಂದ್ರೆ ಕೇಳ್ಬೇಕಲ್ಲಾ…!!


ಅಜ್ಜಿಯ ಬೆಳಗ್ಗೆ ಎದ್ದು!

ದೇವರ ಪೂಜೆಗೆ ಹೂ ರೆಡಿ!ಮಾತು ಕತೆ

ಜೊತೆಗೊಂದಿಷ್ಟು ಟಿವಿ

ನಮ್ಮಜ್ಜಿಯ ಪೋಸ್ 🙂

ಒಂದು ಲೋಟ ಕಾಫಿ

ಅನನಾಸಿನ ಗಿಡದೊಂದಿಗೆನಮ್ಮಜ್ಜಿಮೊಮ್ಮಕ್ಕಳು ಯಾರಾದ್ರು ಮನೆಗೆ ಬರುತ್ತಾರೆಂದರೆ  ಫಸ್ಟ ಬಸ್ ಬರೋ ಹೊತ್ತಿಂದಲೇ ದಾರಿ ನೋಡಲು ಶುರು! ಬಂದಾಗ  ಹರಟುವುದು.” ಹೋದರೆ ಮತ್ತೆ ನನಗಿಲ್ಲಿ ಬೇಜಾರು.. ನಾಳೆಂದ ಗುಯ್.. ಎನ್ನುತ್ತದೆ” ಎಂದು ಕೊನೆಯ ರಾಗ! ಇನ್ಯಾವಗ ಬರ್ತೀರಿ ಅನ್ನೋ ಕೊನೆಯ ಪ್ರಶ್ನೆ! ಮನೆಗೆ ಮಕ್ಕಳು ಹೇಗೆ ಬೇಕೋ… ಹಾಗೇ ಮನೆಗೊಂದು ಅಜ್ಜ ಅಜ್ಜಿ ಬೇಕಪ್ಪಾ..!! ಮೊಮ್ಮಕ್ಕಳ ದಾರಿ  ಕಾಯುತ್ತಾ ನಮ್ಮಜ್ಜಿ ಬಾಳೆಕಾನ ಎಂಬ ಪುಟ್ಟ ಮನೆಯ ಪಕಳಕುಂಜ ಎನ್ನೋ ಪುಟ್ಟ ಊರಲ್ಲಿ, ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಈಗಲೂ ಮೊಮ್ಮಕ್ಕಳಿಗೋಸ್ಕರ ಹರಟಲಿದ್ದಾರೆ 🙂 ಅಜ್ಜೀ ವಿ ಮಿಸ್ ಯೂ… !! 😦

-ನಲ್ಮೆಯಿಂದ

ದಿವ್ಯ

Advertisements

6 ಟಿಪ್ಪಣಿಗಳು

 1. ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ ) said,

  ಅಜ್ಜಿ,ಹೇಳಿದರೆ ಭಾರೀ ಪ್ರೀತಿಯ ದಿವ್ಯಂಗೆ?
  ಒಳ್ಳೇ ಲೇಖನ ಆತಾ..

 2. ಹರೀಶ್ ಹಳೆಮನೆ said,

  ಅಜ್ಜಿಯ ಬಗ್ಗೆ ಬರದ್ದು ಲಾಯಿಕ್ಕಾಯಿದು ಆತಾ…? ಬರವಣಿಗೆ ಹೀಂಗೇ ಮುಂದುವರ್ಸು… ಎಂಗೊ ಓದುತ್ತೆಯೋ….

 3. ಉಮೇಶ್‌ಕುಮಾರ್‍ said,

  ದಿವ್ಯಾ… ಎನ್ನ ಅಜ್ಜಿಯ ನೆಂಪು ಆವುತ್ತಿದ್ದು… ರಿಯಲಿ ಲಾಯಕಾಯಿದು ಬರದ್ದು.. ಕೀಪ್ ಇಟ್‌ ಅಪ್‌ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: