ನಗು ನಗುತಾ…!

ಫೆಬ್ರವರಿ 7, 2010 at 2:36 AM (article)

ಬಾಳಲ್ಲಿ  ಬೇಸರ ದುಖಃಗಳೆಲ್ಲ ಇದ್ದಿದ್ದೇ.. ಅವುಗಳನ್ನು ಬೇಕೆಂದು ಬರಮಾಡಿಕೊಳ್ಳದಿದ್ದರೂ ಮೂಲೆಯಲ್ಲೊಂದು ಜಾಗ ಹುಡುಕಿ ನುಸುಳಿ ಮನಸಿನೊಳಗೆ ಎಂಟ್ರಿ ತೆಕ್ಕೊಳ್ತವೆ!ಮೂಡ್ ಹಾಳು ಮಾಡ್ತವೆ! ಇಂಥ ಮೂಡ್ ಆಚೆ ಹಾಕಲು ನಗುವಿನಿಂದ ಮಾತ್ರವೇ ಸಾಧ್ಯ. ನಗಲು ಅವಕಾಶ ಸಿಕ್ಕಾಗ ನಕ್ಕು ಬಿಡಿ :). ಇಲ್ಲ ಅವಕಾಶವನ್ನು ಹುಡುಕಿ ನಗಬೇಕು. ಇಲ್ಲವೇ ಅವಕಾಶವನ್ನು ಸೃಷ್ಟಿ ಮಾಡಿ ನಗುವುದಪ್ಪ! 😉


ಚಾರ್ಲಿ ಚಾಪ್ಲಿನ್, ರಾಂಪ, ಸರ್ದಾರ್ಜಿ ಜೋಕ್ ಗಳು ಇಂಥವೆಲ್ಲ ನಗಿಸಲೆಂದೇ ಹುಟ್ಟಿದೆಯೇನೋ.. ಮೆಸ್ಸೇಜ್ ಗಳಲ್ಲಿ ಬರುವ ಇಂಥ ಜೋಕ್ ಗಳನ್ನ  ಓದಿ ನಕ್ಕಿದ್ದೀರೇ? ಹಾಗದರೆ ಬೇರೆಯವರಿಗೂ ಅದನ್ನು ಫಾರ್ವರ್ಡ್ ಮಾಡಿ. ಈ ಬ್ಯುಸಿ.. ದಿನಗಳಲ್ಲಿ ಬಿಟಿಎಂ ಬಸ್ಸುಗಳಲ್ಲಿ ಚಲಿಸುವಾಗಲೋ ಎಫ್ ಎಂ ಕೇಳುತ್ತಾ, ಜೋಕ್ ಮೆಸ್ಸೇಜ್ ಓದುತ್ತಾ ಮನದಲ್ಲೇ ನಕ್ಕರೆ, ಮನೆ ತಲುಪಿದ್ದೇ ಗೊತ್ತಾಗದು.


ತುಂಬಾನೇ ಸ್ಟ್ರೆಸ್ ಆಗಿದ್ದಾಗ ನೋವಿರುವಾಗ ಏಕಾಂಗಿತನ ವಿದ್ದಾಗ ಒಮ್ಮೆ  ಟಿವಿ ಹಾಕಿ, “ಟಾಮ್ ಆಂಡ್ ಜೆರ್ರಿ” ನೋಡಿ, ನಗ್ಲಿಲ್ಲಾಂದ್ರೆ ಹೇಳಿ!! 🙂 ಅವರೆಲ್ಲ ನಗಿಸುವುದರಲ್ಲಿ ನಿಸ್ಸೀಮರು. ಎಪಿಸೋಡ್  ತಪ್ಪದೇ ನೋಡಿ. ಹಾಗೆಯೇ ಮಿಸ್ಟರ್ ಬೀನ್ ಕೂಡಾ!.. 😉  ಗೊತ್ತಿರ್ಬೇಕಲ್ಲ ಎಲ್ಲರಿಗೂ? ಹಾಗೇ ಹಾಸ್ಯ ಕಾರ್ಯಕ್ರಮಗಳನ್ನು ಕೊಡುವಂಥಹ ಸುಧಾ ಬರಗೂರು, ಪ್ರಾಣೇಶ್ ಮುಂತಾದವರ ಹಾಸ್ಯ ಮಿಸ್ ಮಡ್ಕೊಳ್ಬೇಡಿ. ತುಳು ಹಾಸ್ಯ ನಾಟಕಗಳು ಅಬ್ಬಾ..! ನಕ್ಕು ನಕ್ಕೇ ಹೊಟ್ಟೇ ನೋಯುತ್ತದೆ!! 😉 “ಬಲೇ ಚಾ ಪರ್ಕ್” “ಪುದರ್ ದೀತಿಜಿ” ಇಂಥಾ ನಾಟಾಕಗಳೆಲ್ಲ ಸಕತ್ತಾಗಿರುತ್ತೆ. ಭಾಷೆ ಅರ್ಥ ಆದ್ರೆ! :).


ಬೆಂಗಳೂರಿನ ಪಾರ್ಕಗಳಲ್ಲಿ  ಬೆಳ್ಳಂಬೆಳಗ್ಗೆ ವಾಕಿಂಗ್ ಜೊತೆ ಲಾಫಿಂಗ್! ಲಾಫಿಂಗ್ ಕ್ಲಬ್ ಅಂತೆಲ್ಲಾ ಇದೆಯಂತೆ. ಏನೇ ಹೇಳಿ ನಗಲಿಕ್ಕೊಂದು ದಾರಿ ಅಷ್ಟೆ, ಮನೆಯಲ್ಲಿ ಪುಟ್ಟ ಮಗುವಿದ್ದರೂ ಸಾಕು. ನಗಿಸುವ ಕೆಲಸವನ್ನು ಅದೇ ನಿರ್ವಹಿಸುತ್ತದೆ. ನಗುವುದರಿಂದ ನಮ್ಮ ಆರೋಗ್ಯ ಉತ್ತಮ ಸ್ಥಿತಿಯಲಿರುತ್ತದೆ. ಖಿನ್ನತೆ ದೂರವಾಗುತ್ತದೆ. ದೇಹಕ್ಕೊಂದು ವ್ಯಾಯಾಮವಾದಂತೆ! ನಗುವುದರಿಂದ ಆಯಸ್ಸು ಹೆಚ್ಚುತ್ತದಂತೆ. ಹಾಗೇಂದು ಸದಾ ನಗುತ್ತಿದ್ದರೆ ಜನ ಬೇರೇನೇ ತಿಳ್ಕೊಂಡಾರು.. 🙂

ನಗುವು ಸಹಜದ ಧರ್ಮ

ನಗಿಸುವುದು ಪರ ಧರ್ಮ

ನಗುವ ನಗಿಸುತ ನಗಿಸಿ

ನಗುತ ಬಾಳುವ ವರವ

ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-


-ನಲ್ಮೆಯಿಂದ

ದಿವ್ಯ


Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: