“ಬದುಕು ಪ್ರಶ್ನಾರ್ಥಕವಾದಾಗ??”

ಫೆಬ್ರವರಿ 5, 2010 at 12:30 ಅಪರಾಹ್ನ (article)

ಬದುಕಲ್ಲಿ ಬಂದದ್ದನ್ನು ಎದುರಿಸು ಎಂದು ಹಿರಿಯರು ಹೇಳ್ತಾರೆ. ಆದ್ರೆ ಕೆಲವೊಮ್ಮೆ ಬದುಕು ನಮಗೆ ಪ್ರಶ್ನಾರ್ಥಕ ಚಿಹ್ನೆಯನ್ನ ಮುಂದಿಡುತ್ತದೆ. ಎಲ್ಲಿ, ಹೇಗೆ,ಏನು ,ಎತ್ತ ಒಂದೂ ಗೊತ್ತಾಗದ ಸ್ಥಿತಿ! ಇದನ್ನು ಸರಿಯಾಗಿ ನಿಭಾಯಿಸುವ ಧೈರ್ಯ, ಛಲ ಇದ್ದಲ್ಲಿ, ಪ್ರಶ್ನೆಗೆ ಉತ್ತರಿಸಬಹುದು. ಆದರೆ ಎದುರಿರುವ ಎಲ್ಲರ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ, ಬದುಕಿನ ಪ್ರಶ್ನೆಗೆ ಮಾತ್ರವಲ್ಲ!!

ಈ ಬದುಕು ಪ್ರಶ್ನಾರ್ಥಕವಾಗಿ ಕಾಣುವುದು, ಬಯಸಿದ್ದು ನಡೆಯದಾಗ, ಸಿಗದಿದ್ದಾಗ!! “ಡೋನ್ಟ್ ಎಕ್ಸ್ಪೆಕ್ಟ್ ಎನಿ ಥಿಂಗ್” ಹೇಳಲು ಸುಲಭ ಆದರೆ ಅಳವಡಿಸುವುದು ಕಷ್ಟವೇ ಸರಿ. ಏನೋ ಒಂದು ಪ್ರಯತ್ನ, ಆಶಾಭಾವನೆ, ನಾವೇನಾದರೂ ಕೊಟ್ಟಿದ್ದಲ್ಲಿ, ಡೆಡಿಕೇಟೆಡ್ ಮನಸ್ಸಾಗಿದ್ದಲ್ಲಿ ಉತ್ತರ ಬಯಸಿಯೇ ಬಯಸುತ್ತೇವೆ..ಕೊಟ್ಟಿರುವುದ್ಯಾವುದೇ ಇರಲಿ, ವಸ್ತುವಾಗಿದ್ದಲ್ಲಿ ಪಡೆದವರಿಂದ ಸಣ್ಣ ಮುಗುಳು ನಗು,ಇಲ್ಲ ಥಾಂಕ್ಸ್, ಪ್ರೀತಿಯಾಗಿದ್ದಲ್ಲಿ, ಕರುಣೆ, ರಕ್ಷಣೆ ಇತ್ಯಾದಿ ಇದೆಲ್ಲವನ್ನು ಎಕ್ಸ್ಪೆಕ್ಟ್ ಮಾಡುತ್ತೇವೆ.

ಇದೆಲ್ಲ ಪ್ರತಿಯಾಗಿ ದೊರಕದಿದ್ದಾಗ ಬದುಕು ಪ್ರಶ್ನಾರ್ಥಕವಾಗುತ್ತದೆ. ಪರೀಕ್ಷೆಯಲ್ಲಿ ಕಷ್ಟ ಪಟ್ಟು ಓದಿದ್ದರೂ ಒಮ್ಮೊಮ್ಮೆ ಅಂಕಗಳು ಕಡಿಮೆ ಸಿಗುತ್ತದೆ. ಆಗ ಪ್ರಯತ್ನ ಪಟ್ಟರೂ ಸಿಕ್ಕಲಿಲ್ಲ, ಇನ್ನು ಓದಲ್ಲ ಅಂತೆಲ್ಲ ಮನಸ್ಸಲ್ಲಿ ಅಂದುಕೊಳ್ಳುತ್ತೇವೆ. ಅದೇ ಹೆತ್ತವರು, ಮಕ್ಕಳಿಗೆ ಕಷ್ಟಪಟ್ಟು ಹಾಸ್ಟೆಲ್ ಗೆ ಕಳುಹಿಸಿ ಓದಿಸಿದ್ದೇವೆ. ಏಕೆ ಮಾರ್ಕು ಕಡಿಮೆಯಾಯಿತು. ನಮಗೋಸ್ಕರವಾದರೂ ಓದಿ ಉತ್ತಮ ಅಂಕ ಪಡೆಯಬೇಕೆಂದು ಏಕೆ ಅನಿಸಲಿಲ್ಲ? ಇದು ಹೆತ್ತವರಲ್ಲಿ ಮೂಡುವ ಪ್ರಶ್ನೆ! ಯಾಕಂದ್ರೆ ಕಲಿಸಿದ್ದೇವೆ, ಮಾರ್ಕು ತೆಗೆಯ ಬೇಕಿತ್ತು ಇದು ಅವರ ಎಕ್ಸ್ಪೆಕ್ಟೇಶನ್!! ಇದು ಫಲಿಸದಾಗ ಬದುಕು ಪ್ರಶ್ನೆಯನ್ನೊಡ್ಡುತ್ತದೆ. ಇಲ್ಲೂ “ಬಯಸದಿರು ಎಂದೂ”.. ಎಂಬ ಮಾತನ್ನ ಅಳವಡಿಸಲಾಗುವುದಿಲ್ಲ. ಬಯಸಿದ್ದು ನಡೆಯದಾಗ ಸಹಜವಾಗಿಯೇ ಬೈಗುಳದ ರೂಪದಲ್ಲಿ ಬದುಕಿನ ಪ್ರಶ್ನೆಯನ್ನು ಕಡಿಮೆ ಮಾಡ್ಕೊತಾರೆ. ಅದೇ ಮಕ್ಕಳಲ್ಲಿ, ಓದಿದ್ದೇವೆಂದು ಹೇಳಿದರೆ ನಂಬಲ್ಲ, ಅಂಕ ಬಂದರೇ ನಂಬುವವರಿಗೇನು ಹೇಳಲಿ. ಇದೆಲ್ಲವನ್ನು ಮನಸ್ಸಿಗೆ ಹಾಕಿದಲ್ಲಿ, ಇದು ಮಕ್ಕಳಲ್ಲಿ ಪ್ರಶ್ನೆಯನ್ನು ಮೂಡಿಸುತ್ತದೆ. ಈ ಎಲ್ಲಾ ಬಯಸುವಿಕೆಗೆ ಪರಿಹಾರ ಬದುಕನ್ನು ಕಳಕೊಳ್ಳುವುದೇ ಉತ್ತರವೆಂದು ಯೋಚಿಸುತ್ತಾರೆ.

ಇದು ಒಂದು ಉದಾಹರಣೆಯಷ್ಟೆ! ಹೀಗೆ ಅನೇಕವಿದೆ. ಹೆತ್ತವರು ಮಕ್ಕಳು, ಮುದಿ ವಯಸ್ಸಲ್ಲಿ ನೋಡಿಕೊಳ್ಳುವರೆಂದು ಬಯಸಿದರೆ, ಮಕ್ಕಳು ಅವರವರ ಹಾದಿ ಹಿಡಿದು ದೂರ ಹೋದಾಗ, ಮುದುಕರಿಗೆ ಬದುಕು ಪ್ರಶ್ನೆ! ಅದೇ ಪ್ರೇಮಿಯೊಬ್ಬ ಪ್ರೀತಿ ಮಾಡಿ ಅವಳೂ ನನ್ನೇ ಅಷ್ಟೇ ಪ್ರೀತಿ ಮಾಡಲಿ,ಎಂದು ಬಯಸುತ್ತಾರೆ. ಮುಹು!! ಬಯಸಿದಂತೆ ನಡೆಯದಾಗ ಬದುಕು ಪ್ರಶ್ನೆ! ಹೆತ್ತವರು ಮಕ್ಕಳಿಗಿಷ್ಟು ಓದಿಸಿದ್ದೇವೆ ಬೆಳೆಸಿ ದೊಡ್ಡವ್ರನ್ನಾಗಿ ಮಾಡಿಸಿದ್ದೇವೆ. ನಾವು ಹೇಳಿದಂತೆ, ನಮಗೊಪ್ಪಿಗೆಯಾದವನನ್ನೇ ವರಿಸಬೇಕು ಇದು ಅವರ ಬಯಕೆ, ಆದ್ರೆ ಮಕ್ಕಳು ಅವರ ಇಷ್ಟದಂತೆ ಹೆತ್ತವರು ನಮ್ಮ ಪ್ರೀತಿಯನ್ನು ಒಪ್ಪುತ್ತಾರೆ, ಒಪ್ಪಲಿ ಎಂದೇ ಬಯಸಿರುತ್ತಾರೆ! ಆದ್ರೆ ಬಯಸಿದಂತೆ ನಡೆಸಲಾಗುವುದಿಲ್ಲ!ಕಷ್ಟ ಪಟ್ಟು ಬೆವರು ಸುರಿಸಿ ಕೂಡಿಟ್ಟ ಹಣ, ಕಳೆದುಕೊಂಡಾಗ, ಪ್ರೀತಿ ಪಾತ್ರರು ಬಿಟ್ಟು ಹೋದಾಗ.. ಬದುಕು ಪ್ರಶ್ನಾರ್ಥಕವಾಗಿ ಕಾಣುತ್ತದೆ.

ಈ ಬದುಕಿನ ಪ್ರಶ್ನೆಗೆ ಉತ್ತರಿಸಲು, ಕೆಲವರ ಮೋಟಿವೇಶನ್ ಬೇಕಾಗಬಹುದು. ಕೆಲವರಿಗೆ ಸೆಲ್ಫ್ ಮೋಟಿವೇಟ್ ಮಾಡಿ ಬದುಕನ್ನು ಮುನ್ನಡೆಸುವ ಕಲೆ ಗೊತ್ತಿರಬಹುದು. ಆಗ ಮತ್ತೊಂದು ಬಯಸುವಿಕೆಗೆ ಬದುಕು ಮುನ್ನಡೆಯುತ್ತದೆ.  ಇದು ಬಿಟ್ಟು ಬದುಕು ಕಳೆದು ಕೊಳ್ಳುವುದು, ಬದುಕು ಮುಂದಿಟ್ಟ ಪ್ರಶ್ನೆಗೆ ಉತ್ತರವಾಗುವುದಿಲ್ಲ ಅಲ್ಲವೇ?? ಕುವೆಂಪುರವರು ಹೇಳಿದಂತೆ “ನುಗ್ಗಿ ನಡೆ, ನುಗ್ಗಿ ನಡೆ, ನುಗ್ಗಿ ನಡೆ ಮುಂದೆ.ಹಿಗ್ಗದಯೆ, ಕುಗ್ಗದಯೆ, ಜಗ್ಗಿ ನಡೆ ಮುಂದೆ”!

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು |
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ||

-ನಲ್ಮೆಯಿಂದ
ದಿವ್ಯ

Advertisements

4 ಟಿಪ್ಪಣಿಗಳು

 1. ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ ) said,

  ದಿವ್ಯಾ,ಚೆನ್ನಾಗಿದೆ.ಒಳ್ಳೆಯ ಲೇಖನ.
  ಬದುಕಿನಲ್ಲಿ ಕೆಲವೊಂದು ಪ್ರಶ್ನೆಗಳು ಯಾವತ್ತೂ ಇರುತ್ತವೆ.
  “ಪೆಟ್ಲ ಬೆಡಿಯ ಕಾಯಿಗಳಂತೆ..”
  ಇನ್ನೊಂದು ಗುಟ್ಟು ಹೇಳ್ಲಾ..
  ಬದುಕಿನ ಸ್ವಾರಸ್ಯಯಿರುವುದೇ ಪ್ರಶ್ನೆಗಳಲ್ಲಿ.ಅದು ನಮ್ಮಲ್ಲಿ
  ಜೀವನದ ಬಗ್ಗೆ ಒಂದು ಅಚ್ಚರಿಯನ್ನು ಯಾ ಕುತುಹಲವನ್ನು ಯಾವತ್ತೂ ಕಾಪಿಡುತ್ತದೆ.
  ಬದುಕಿನ ಏಕತಾನತೆಯನ್ನು ಒಡೆದು ಜೀವನದ ಸಂಭ್ರಮವನ್ನು ಅನುಭವಿಸುವುದಕ್ಕೆ ಈ ಪ್ರಶ್ನೆಗಳನ್ನು ಬಳಸಿಕೊಂಡವರು ಗೆದ್ದಂತೆ.
  ನನ್ನ ಒಂದು ಕವನ “ಪ್ರಶ್ನೆಗಳು…”ನಿನಗೆ ಇಷ್ಟ ಆಗಬಹುದು..ಪುರುಸೊತ್ತಾದಾಗ ಒಮ್ಮೆ ಓದು.

 2. ದಿವ್ಯ said,

  ಧನ್ಯವಾದಗಳು ಸಾರ್.. ಖಂಡಿತ ಓದುತ್ತೇನೆ.. ಹೀಗೇ ಪ್ರೋತ್ಸಾಹಿಸುತ್ತಿರಿ…

 3. sukrutha said,

  very nice …. good article…. I liked the title , title is too catchy … As a whole the flow is good .. Keep writing … U got a good hold of language …

  Neev bareyodu hecha, Naavu odhodhu Hecha… 🙂

 4. ದಿವ್ಯ said,

  thanks sukhi.. keep reading 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: