“ಅಡುಗೆಯಲ್ಲಿ ಎತ್ತಿದ ಕೈ??”

ಫೆಬ್ರವರಿ 3, 2010 at 12:42 ಅಪರಾಹ್ನ (article)

“ಅಡುಗೆ” ಇದು ಒಂಥರಾ ವಿಶಿಷ್ಟವಾದ ಕಲೆ! ಇದರಲ್ಲಿ ಪರಿಣಿತಿಯನ್ನು ಹೊಂದಬೇಕೆಂದೇನಿಲ್ಲ! ಕೊಂಚ ಕಾಮನ್ ಸೆನ್ಸ್ ಇದ್ದರೆ ಸಾಕು ;). ಎಲ್ಲರೂ ಅಡುಗೆ ಟ್ರೈ ಮಾಡಬಹುದು. ಎಷ್ಟರ ವರೆಗೆ ಇಷ್ಟವಾಯಿತು, ರುಚಿಸಿತು ಎನ್ನುವುದು ಸ್ವಲ್ಪ ಅನುಮಾನದ ಮಾತೇ ಬಿಡಿ!! ಈ ಕಲೆಯನ್ನು ರೂಢಿಸಿಕೊಳ್ಳಲು ಗಂಡು ಹೆಣ್ಣು ಎಂಬ ಬೇಧವಿಲ್ಲ! ಯಾರಾದರೂ ಮಾಡಬಹುದು.

ಈ ಕಲೆಯಲ್ಲಿ ಆಸಕ್ತಿಯೇ ಇಲ್ಲದವರು ಆಸಕ್ತಿ ಬೆಳೆಸಬೇಕೆಂದಿದ್ದರೆ ಅಡುಗೆ ಪುಸ್ತಕ ತೆಗೆದು ನಾಲ್ಕು ಪುಟ ಓದಿ. ಏನಾದ್ರು ಟ್ರೈ ಮಾಡೋಣ ಅಂತ ಅನಿಸಿ ಬಿಡುತ್ತೆ. ಮನೆಯಲ್ಲಿ ಯಾರೂ ಇರಬಾರದು. ಇದು ಒಳ್ಳೆಯ ಕಲೆಯನ್ನು ಪ್ರಾರಂಭಿಸಲು ಉತ್ತಮವಾದ ಸಮಯ. ಒಮ್ಮೊಮ್ಮೆ ಇಷ್ಟವಿದ್ದೋ ಇಲ್ಲದೆಯೋ ಈ ಕಲೆಯನ್ನ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಒಂದು ಬೆನಿಫಿಟ್  ಏನಂದ್ರೆ ಇತರರಿಗೂ ಕಲಿಸಬಹುದು, ಉಣಬಡಿಸಬಹುದು!! :)! ಉತ್ತಮ ಕಮೆಂಟ್ಸ್ ಕೂಡಾ ತೆಕ್ಕೊಳ್ಬಹುದು! ರುಚಿಕರವಾಗಿದ್ದಲ್ಲಿ, ಮತ್ತೊಮ್ಮೆ ಮಗದೊಮ್ಮೆ ಮಾಡಲು ಡಿಮಾಂಡ್ ಸಿಗಬಹುದು! ಇಲ್ಲ ಕೆಲವೊಂದು ಐಟಂಗೆ ಇವರೆ ಬೆಸ್ಟ ಅಂತ ಅನಿಸಿಕೊಳ್ಳಬಹುದು.!

ಮನೆಯಲ್ಲಿ ಅಮ್ಮ ಮಾಡಿದ ಅಡುಗೆಯಲ್ಲಿರುವ ರುಚಿ, ಎಲ್ಲೂ ಸಿಗದ ರುಚಿಯೇನೋ ನಿಜ. ಆದರೆ ಕೆಲವೊಂದು ಸಂದರ್ಭದಲ್ಲಿ ಅಪ್ಪನ ಆಡುಗೆಯ ರುಚಿ, ಅಮ್ಮನ ಅಡುಗೆಯ ರುಚಿಗೆ ಹೊಸ ತಿರುವು ತಂದಿರುತ್ತದೆ!. ಅಮ್ಮ ಆಡುಗೆ ಮಾಡುವಾಗ ಒಮ್ಮೆ ಅಡುಗೆ ಕೋಣೆ ಪ್ರವೇಶ ಮಾಡಿ ನೋಡಿ. ಅಜ್ಜಿ ಮಾಡಿದಂತೆಯೇ ಎಲ್ಲಾ ಸ್ಟೆಪ್! ಒಂದೂ ಮಿಸ್ ಆಗಲ್ಲ! ಅದೇ ಅಪ್ಪ ಮಾಡುವಾಗಲೂ ಒಮ್ಮೆ ಹೋಗಿ ನೋಡಿ.. ಸೀದಾ ಮಿಡಲ್ ಸ್ಟೆಪ್! ಮತ್ತೆ ಫಸ್ಟೆ ಸ್ಟೆಪ್! ಕೊನೆಯಲ್ಲೇನೋ ಮಾಡಿ ಮುಗಿಸಿರುತ್ತಾರೆ. ಆದರೆ ಅದೊಂದು ಅಡುಗೆಯಲ್ಲಾಗುವ ನಾಗರೀಕತೆ ತರ ಇರುತ್ತೆ.. ಲೈಕ್ ಇನೊವೇಶನ್!! 🙂 ಸಕತ್ತಾಗಿರುತ್ತೆ. ಅಮ್ಮ , ಕೊತ್ತಂಬರಿ ಸೊಪ್ಪು ಇಲ್ಲ, ಸಾರು ಮಾಡಲ್ಲ, ಹುಳಿ ಮಾಡ್ತೀನಿ ಅಂದ್ರೆ, ಅಪ್ಪನ ಸರದಿ ಇದ್ದಾಗ , ಅಮ್ಮ ಮನೆಯಲ್ಲಿಲ್ಲದಾಗ, ಅದಿಲ್ಲದೆಯೇ ಇನ್ನೇನೋ ಹೊಸ ರೀತಿಯಲ್ಲಿ ಮಾಡಿರುತ್ತಾರೆ ಗಮನಿಸಿದ್ದೀರಾ?? ಅಮ್ಮ  ಹುಳಿಗೆ ಅರಿಶಿನ ಪುಡಿಹಾಕಲ್ಲ!, ಪಾತ್ರೆಯಲ್ಲೇ ಹಾಗೇಯೇ ಬೇಯಿಸಿರುತ್ತಾರೆ, ಆದ್ರೆ ಅಪ್ಪ, ಆರೋಗ್ಯಕ್ಕೆ ಒಳ್ಳೆಯದು ಕಲರ್ ಫುಲ್ ಆಗಿರುತ್ತೆ, ಮತ್ತು ಎಲ್ಲಾ ಸೇವಿಂಗ್ ಪಾಸಿಬಿಲಿಟಿ ನೋಡಿ, ಕುಕ್ಕರ್ ಅಲ್ಲೇ ಬೇಯಿಸ್ತಾರೆ! ಇಷ್ಟೆಲ್ಲಾ ಕೆಲಸದ ನಂತರ ಅಡುಗೆ ಮನೆ ಕ್ಲೀನ್ ಗೆ ಅಮ್ಮನೇ ಬರ್ಬೇಕಷ್ಟೆ!! 🙂 ಚಿಕ್ಕವರಿದ್ದಾಗ ಶಾಲಾ ದಿನಗಳಲ್ಲಿ ಕಂಡಿರುವ ಇಂಥ ವಿಷ್ಯಗಳೆಲ್ಲಾ ಮತ್ತೆ ಮತ್ತೆ ನೆನಪಾಗುತ್ತೆ.!

ಹೆಂಗಸರು ಅಡುಗೆ ಪುಸ್ತಕದಲ್ಲಿರುವಂತೆ ಎಲ್ಲಾ “ಬೇಕಾಗುವ ಸಾಮಾಗ್ರಿಗಳು” ಇಟ್ಟುಕೊಂಡು ಮಾಡಿದರೆ, ಗಂಡಸರು ಅದನ್ನ ಒಮ್ಮೆ ಓದಿ,”ಬೇಕಾಗುವ ಸಾಮಾಗ್ರಿಗಳು” ಇದ್ದರೆ ಓಕೆ! ಇಲ್ಲದಿದ್ದಲ್ಲಿ ಆ ಸಾಮಾಗ್ರಿಗೆ ಆಲ್ಟರ್ನೇಟ್ ಹುಡುಕಿ, ಹೊಸತೊಂದು ಪುಸ್ತಕಕ್ಕೆ ಬರೆಯಲು ಪ್ರೇರಣೆಯಾಗುತ್ತಾರೆ. ಅದರಲ್ಲೂ ಏನೋ ರುಚಿ ಇರುತ್ತೆ ಬಿಡಿ!! ನಾವೇ ಮಾಡಿದ್ದನ್ನ ತಿನ್ನುವುದರಲ್ಲಿ ಏನೋ ಒಂಥರಾ ಇಂಟ್ರೆಸ್ಟೆ ಇರುತ್ತೆ! ಚೆನ್ನಾಗಿದೆಯೋ ಇಲ್ಲವೋ ಇದ್ದರೆ ನಮಗೆ ಉಳಿಯುವುದಿಲ್ಲ! ಇಲ್ಲದಿದ್ದರೆ ಪಾತ್ರೆಯಲ್ಲಿರುವುದೆಲ್ಲ ನಾವೇ ಖಾಲಿ ಮಾಡಬೇಕು :).. ನಾವು ಸಿಂಪಲ್ ಟೀ ಮಾಡಿದ್ರೆ.. ಹುಡುಗರು ಇದ್ದದ್ದೆಲ್ಲದರಲ್ಲೂ ಟೀ ಮಾಡ್ತಾರೆ! ಏನೇ ಹೇಳಿ ಈ ಕಲೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಪರಿಣಿತರೇ!! ಅವರವರ ಲೆವೆಲ್ ವರೆಗೆ!!:) ಚಿಕ್ಕವರು ಅಡುಗೆ ಮಾಡ್ತಾರೆ. ದೊಡ್ಡವ್ರೂ ಮಾಡ್ತಾರೆ! ವಯಸ್ಸಿನ ಮಿತಿಯಿಲ್ಲ! ಈ ಕಲೆಯನ್ನ ಇಷ್ಟರ ವರೆಗೆ ಟ್ರೈ ಮಾಡಿಲ್ಲ ಅಂತಾದ್ರೆ ಒಮ್ಮೆ  ಟ್ರೈ ಮಾಡ್ಬೇಕಪ್ಪಾ…. “ಮತ್ತೊಂದು ಮಾಡಿದರೆ ಹೇಗೆ?” ಎಂದು ನಮ್ಮಲ್ಲೇ ಪ್ರಶ್ನೆಯೇಳುತ್ತದೆ!! 🙂

– ನಲ್ಮೆಯಿಂದ

ದಿವ್ಯ


Advertisements

7 ಟಿಪ್ಪಣಿಗಳು

 1. ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ ) said,

  ಅಂತೂ ಅಡಿಗೆಯತ್ತ ಎಲ್ಲರ ಗಮನವನ್ನ ಆಕರ್ಷಿಸುವಂತೆ ಸುಂದರವಾಗಿ ಬರೆದಿದ್ದೀರಾ.
  ಒಳ್ಳೆಯ ಲೇಖನ.

 2. ದಿವ್ಯ said,

  🙂 ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

 3. Ganesh Bhat Madavu said,

  ಶೀರ್ಷಿಕೆ ಓದುತ್ತಿರುವಂತೆ ನನಗೆ ಬಾಲ್ಯದ ನೆನಪಾಯಿತು. – ನನ್ನನ್ನು ಮತ್ತು ತಂಗಿಯನ್ನು – ಕರೆದುಕೊಂಡು ಒಂದು ತಿಂಗಳಿಗೆ ನಮ್ಮ ಅಮ್ಮ ಅಜ್ಜನ ಮನೆಗೆ ಹೋದಾಗ ಹೋದಾಗ ಎಂದಿನ ತೋಟ ಗದ್ದೆಯ ಜವಾಬ್ದಾರಿಯೊಂದಿಗೆ ಅಡಿಗೆ ಮನೆಯ ಎಲ್ಲ ಹೊಣೆಯನ್ನು ಅಪ್ಪ ಖುಷಿಯಿಂದ ಹೊರುತ್ತಿದ್ದರು. ಅಮ್ಮನ ಬರವಣಿಗೆಗೆ ಅಪ್ಪ ಅದುಗೆ ಮನೆಯೊಂದಿಗೆ ಸಹಕರಿಸಿದ್ದು ಅಮ್ಮ ಈಗಲೂ ನೆನೆಸಿಕೊಳ್ಳುತ್ತಾಳೆ. ದೊಡ್ದವನಾದ ಹಾಗೆ ನಾನು ಮತ್ತು ಅಪ್ಪ ತಿಂಗಳುಗಳ ಕಾಲ ಅಡುಗೆ ಮನೆಯ ಜವಾಬ್ದಾರಿ ಹೊತ್ತದ್ದು, ಪ್ರಯೋಗ ಮಾಡುತ್ತಿದ್ದುದು ಈಗಲೂ ನೆನಪಾಗುವ ಖುಷಿಯ ದಿನಗಳು. ಎಲ್ಲ ಗಂಡಸರು ಅಡುಗೆ ಮನೆ ದ್ವೇಷಿಸುತ್ತಾರೆನ್ನುವುದನ್ನು ನಂಬುವಂತಿಲ್ಲ. ಪೇಟೆ ನನಗೆ ತಿಳಿಯದು, ಹಳ್ಳಿಯ ಮನೆಗಳಲ್ಲಿ – ಗಂಡಸರು ಅಡುಗೆ ಮನೆಯನ್ನು ಧ್ವೇಷಿಸುತ್ತಾರೆಂದರೆ ನಂಬಲಾಗದು. ಹೆಚ್ಚಿನ ಮನೆಗಳಲ್ಲಿ ಇಬ್ಬರೂ ಸೇರಿ ಅಡುಗೆ ಮನೆಯ ಒಳ ಹೊರಗೆ ಕೆಲಸ ಹಂಚಿಕೊಂಡು ಬದುಕು ಸಾಗುತ್ತಿದೆ. ನಿಜ, ಕಾಲ ಬದಲಾಗುತ್ತಿದೆ. ಹುಡುಗ ಹೇಗೂ ಅಡುಗೆ ಮನೆಯಿಂದ ದೂರ ಎಂದಾದರೆ, ಹುಡುಗಿಯೂ ದೂರ ಸರಿಯತೊಡಗಿದ್ದಾಳೆ. ನಿಧಾನವಾಗಿ ಹಳ್ಳಿಯಲ್ಲೂ ಬೇಕರಿ ಹೆಚ್ಚುತ್ತಿದೆ. ಚಿಂತನೆಗೆ ಹಚ್ಚುವ ಬರಹ.

  • sanath said,

   ಹ್ಮ್..ನಿಜ ದಿನವಿಡಿ ಆಫೀಸಿನ ಕೆಲಸದಲ್ಲಿ stress ಆಗಿ ಬಂದಾಗ ಅಡಿಗೆಗೆ ಮಿಗಿಲಾದ stress buster ಇಲ್ಲ.

 4. ದಿವ್ಯ said,

  ಒಹ್!! 🙂
  ಪ್ರತಿಕ್ರಿಯೆಗೆ ಧನ್ಯವಾದಗಳು..

 5. jinnu said,

  ಕೆಲವೊಂದು ಐಟಂಗಳಂತು ನಮ್ಮ ಅಮ್ಮನಿಗಿಂತ ನಮ್ಮ ಅಪ್ಪನೇ ಸಖತ್ತಾಗಿ ಮಾಡೋದು. ವಾಂಗಿಭಾತ್, ಮೈಸೂರ್ಪಾಕ್, ಜಾಮೂನ್.

  ನಾನು ಸೆಕೆಂಡ್ ಪೀಯೂಸೀಯಲ್ಲಿದ್ದಾಗ, ಒಮ್ಮೆ ಕ್ಯಾರೆಟ್ ಪಾಯ್ಸ್ ಮಾಡಿದ್ದೆ, ಆಮೇಲೆ ಇನ್ನೊಂದೆರೆಡು ಬಾರಿ ಟೋಮ್ಯಾಟೋ ಸೂಪ್ ಮಾಡಿದ್ದೆ. ಅದಾದ ಮೇಲೆ ಈಗೆಲ್ಲ ಮ್ಯಾಗಿಯೇ ಗತಿ ;-(

 6. ದಿವ್ಯ said,

  ಹಹ್ಹ ಯಾಕೆ ಜಿನ್ನುರವರೆ?? ?? 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: