ಯಕ್ಷಗಾನ ಆಕರ್ಷಿಸಿದ್ದು!!

ಫೆಬ್ರವರಿ 2, 2010 at 12:31 AM (article)


ಅಂದು ಪಿಯುಸಿ ವೆಕೇಶನ್ ಕೋಚಿಂಗ್ ಎಂದು ಬೆಳಗ್ಗೆ ಪೂರ್ತಿ ಕೇಳಿ, ಮುಗಿಸಿ ಮನೆಗೆ ತಲುಪುವಾಗ ಸಂಜೆ ನಾಲಕ್ಕು!. ಅಮ್ಮ, “ನಾಳೆಸಂಜೆಯಿಂದ ನೀನೂ ಮನೆ ಕೀ ತೆಕ್ಕೊಂಡು ಹೋಗು ನನಗೆ ಯಕ್ಷಗಾನ ನೋಡ್ಲಿಕ್ಕೆ ಹೋಗ್ಬೇಕು ಮಹಾಲಿಂಗೇಶ್ವರ ದೇವಸ್ಥಾನ ಸಭಾ ಭವನದಲ್ಲಿ ಯಕ್ಷಗಾನ ಸಾಪ್ತಾಹ ಇದೆ” ಅಂದ್ರು. ಆಶ್ಚರ್ಯವಾಯ್ತು!! ಈ ಕಾಲದಲ್ಲಿ ಎಂತದ್ದು ಯಕ್ಷಗಾನ, “ಯಾಕೆ ಹೋಗ್ತಿ ಸುಮ್ಮನೆ, ಅದಕ್ಕೆಲ್ಲ ಯಾರು ಬರಲ್ಲ ಬಿಡು” ಅಂದೆ. ಅಮ್ಮ,” ನಿನು ನೋಡಿದ್ರೆ ಬಿಡಲ್ಲ ಕಣೆ.. ಚೆನ್ನಾಗಿರುತ್ತೆ ಬರ್ತೀಯಾ” ಅಂತ ಕೇಳಿದರು.. “ನಾನ.. !!ನನ್ನನ್ನು ಎಳ್ಕೊಂದು ಹೋಗ್ಬೇಡ, ಬೇಕದ್ರೆ ನೀನೆ ಹೋಗಿ ಬಾ” ಎಂದೆ. ಮರು ದಿನ ನಾನೆ ಬೀಗೆ ತೆಗೆದೆ ಅಮ್ಮ  ಆಗಲೇ ಹೋಗಿಯಾಗಿತ್ತು. ೬ ರಿಂದ ೯-೧೦ ಗಂಟೆಯವರೆಗಿತ್ತು. ಯಕ್ಷಗಾನ ಮುಗಿಸಿ ಅಮ್ಮ ಮನೆಗೆ ಬಂದು ಅದನ್ನ ಹೊಗಳಿದ್ದೇ ಹೊಗಳಿದ್ದು. ಬಡಗು ತಿಟ್ಟಿದು(ಉತ್ತರ ಕನ್ನಡ)ಬಾರೇ.. ಚೆನ್ನಾಗಿರುತ್ತೆ ಅಂತ, ನಾನು ಬರಲ್ಲ ಅಂತ! ಮರುದಿನ ನಾನು ಕೋಚಿಂಗ್ ಮುಗಿಸಿ ಬಂದಾಗ ಅಮ್ಮ ಮನೆಲಿದ್ರು.. “ಇವತ್ತು ಸ್ಥಳ ಕಾಯ್ದಿರಿಸಲು ಮೇಲಿನ ಮನೆ ಆಂಟಿ ಹತ್ರ ಹೇಳಿದೀನಿ.. ನಿನ್ನ ಕರ್ಕೊಂಡೇ ಹೋಗೋದು..ಇವತ್ತು ಒಂದು ದಿನ ಬಂದು ನೋಡು, ಇಷ್ಟ ಆಗದಿದ್ದರೆ ನಾಳೆಯಿಂದ ಬರ್ಬೇಡ.. ಇವತ್ತು ಬಾ..” ಅಂದರು. ಇನ್ನೇನು ಮಾಡುವುದು. ಅಮ್ಮನ ಜೊತೆ ಹೊರಟೆ.

ಯಕ್ಷಗಾನ ಪ್ರಾರಂಭ ಆಯ್ತು. ಆ ಭಾಗವತಿಗೆ “ದಕ್ಷಿಣ ಮೂರ್ತಯೇ…” ಕೇಳುತ್ತಲೇ ಮೈಯೆಲ್ಲಾ ಕರೆಂಟ್ ಶಾಕ್ ಹೊಡೆದಂತಾಯಿತು.. ಅದ್ಭುತ.!!.. ಅಬ್ಬಾ ನೋಡಿ ಬಂದು ಮನೆಯಲ್ಲಿ ನಾನು ಅಪ್ಪಂಗೆ ವಿವರಿಸಿದ್ದೇ ವಿವರಿಸಿದ್ದು.!. ಎಲ್ಲೋ ೨-೩ ನೆಯೋ ತರಗತಿಯಲ್ಲಿದ್ದಾಗ ಕಟೀಲು ಮೇಳದವರ ದೇವಿಮಹಾತ್ಮೆ ನೋಡಿದ್ದೆ.. ಅಪ್ಪ ಕರ್ಕೊಂಡು ಹೋಗಿದ್ರು.. ಶಾಲೆಯ ಮೈದಾನದಲ್ಲೇ ಇತ್ತು. ನಾನು ತಂಗಿ ಇಬ್ಬರೂ ನಿದ್ದೆ ಹೋಗಿದ್ದೆವು. ಮಹಿಷಾಸುರ ಎಂಟ್ರಿ ಕೊಡುವಾಗ ಎಬ್ಬಿಸಿದ್ರು ನಮ್ಮನ್ನ!ಮಹಿಷಾಸುರ ಬರುವ ದೃಶ್ಯ ಈಗಲೂ ಕಣ್ಣಿಗೆ ಕಂಡಂತಾಗುತ್ತದೆ. ಅದೊಂದೇ ನೆನಪಿದ್ದಿದ್ದು.. ಆವತ್ತು ಮತ್ತೆ ಪುನಃ ಯಕ್ಷಗಾನ ನೋಡಿ ಇಷ್ಟೊಂದು ಸಕತ್ತಾಗಿರುತ್ತೆ ಅಂತ ಗೊತ್ತಾಯ್ತು.. ಮರು ದಿನ ಅಮ್ಮನಿಗೆ ನಾನು ಬರೋ ವರೆಗೆ ಕಾಯುತ್ತಿರು ಬಂದ ಮೇಲೆ ಜೊತೆಗೇ ಹೋಗೋಣ ಎಂದೆ. ಆ ದಿನ ನೋಡಲು ಸ್ವಲ್ಪ ಹಿಂದೆ ಜಾಗ ಸಿಕ್ಕಿತ್ತು. ಮರು ದಿನ ಕೋಚಿಂಗ್ ಬಿಟ್ಟ ಕೂಡಲೆ ನಾನು ೫ಕ್ಕೇ ಯಕ್ಷಗಾನ ಜಾಗದಲ್ಲಿ ಹಾಜಿರ್.. ಅಮ್ಮಂಗೆ “ಜಾಗ ಇಟ್ಟಿದೀನಿ ಹೊರಟು ಬಾ” ಎಂದು ಫೋನಾಯಿಸಿದೆ.. ಕೊನೆಯ ದಿನ, ಮುಗಿಯುತ್ತಲ್ಲಾ ಅಂತ ಬೇಜಾರವಾಯಿತು. ಮುಗಿದ ಮರು ದಿನ ಮನೆಯಲ್ಲಿ ನಮ್ಮದೇ ಭಾಗವತಿಗೆ ನಮ್ಮದೇ ನೃತ್ಯ. ಆ ಚೆಂಡೆ ಶಬ್ದ ಈಗಲೂ ಕೇಳಿದಂತಾಗುತ್ತದೆ.

ಕೊನೆಗೂ ೬ಆಟವನ್ನ ನೋಡಿದ್ದೆ. ಮುಂದಿನ ವರುಷ ಹಾಸ್ಟೆಲ್ ವಾಸ ಇದ್ದುದರಿಂದ ನೋಡಲಾಗಲಿಲ್ಲ. ಈ ಬಾರಿ ಊರಿಗೆ ಹೋಗಿದ್ದಾಗ ಒಂದಾಟ ನೋಡಿ ಬಂದೆ. ಈಗ ನಾನು ಯಕ್ಷಗಾನ ಅಭಿಮಾನಿಯಾಗಿ ಹೋದೆ. ಹಿಂದಿನವರಿಗೆ ಇದರಲ್ಲಿ ಎಷ್ಟು ಆಸಕ್ತಿ ಇತ್ತೆಂದರೆ, ನಮಗೀಗ ಸಿನಿಮಾಗಳಲ್ಲಿ ಶಾರುಕ್, ಹೃತಿಕ್, ಅಂತೆಲ್ಲ ಇರೋತರ ಅವರೆಲ್ಲ ಯಕ್ಷಗಾನ ವೇಶಧಾರಿಗಳ ಫ್ಯಾನ್ ಆಗಿದ್ದರು.ಈವನ್ ನಾನೂ ಕೆಲವರ ಫ್ಯಾನ್ 😉 !! ಏನೇ ಹೇಳಿ ಆ ವೇಶಭೂಷಣವನ್ನು ಧರಿಸಿ ರಂಗ ಪ್ರವೇಶ ಮಾಡಿದಾಗ.. ನಮಗೆಲ್ಲ ಗತ ಕಾಲದ ರಾಮಾಯಣ ಮಹಾಭಾರತ ಕಣ್ಣಮುಂದೆಯೇ ನಡೆಯುತ್ತಿದೆಯೇನೋ ಎಂದೆನಿಸುತ್ತದೆ. ನನಗಂತೂ ಈಗ ಯಕ್ಷಗಾನ ನೋಡೋ ಅವಕಾಶ ಸಿಕ್ಕರೆ ಚಾನ್ಸ್ ಮಿಸ್ ಮಾಡಲ್ಲ 🙂  ನೀವೂ ನೋಡಿ.. ನಿಮಗಿಷ್ಟವಾಗೇ ಆಗುತ್ತದೆ..

-ನಲ್ಮೆಯಿಂದ

ದಿವ್ಯ

ಚಿತ್ರಕೃಪೆ: http://www.sulekha.com/


Advertisements

4 ಟಿಪ್ಪಣಿಗಳು

 1. ಆಸು ಹೆಗ್ಡೆ said,

  ದಿವ್ಯಾ,
  ಯಾವ ವಿಷಯವನ್ನೇ ಆದರೂ ಸುಂದರವಾಗಿ, ಓದಿಸಿಕೊಂಡು ಹೋಗುವಂತೆ, ಬರೆಯುವ ಕಲೆ ನಿಮಗೆ ಒಗ್ಗಿದೆ. ಇದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಿ. ನಿಜಕ್ಕೂ ದಿವ್ಯ, ನಿಮಗೆ ಭವ್ಯ ಭವಿಷತ್ತು ಕಾದಿದೆ. ನನ್ನೀ ಮಾತನ್ನು ಮುಂದೊಂದು ದಿನ ಮೆಲುಕುಹಾಕುತ್ತೀರಿ ಖಂಡಿತ.

  – ಆಸು ಹೆಗ್ಡೆ.

  • ದಿವ್ಯ said,

   ಧನ್ಯಾವಾದಗಳು ಆಸು ರವರೆ..
   ನಿಮ್ಮ ಪ್ರೋತ್ಸಾಹಕ್ಕೆ.. ನನ್ನೀ….

 2. Shrividya said,

  ದಿವ್ಯ,
  ಕಾಕತಾಳೀಯವೋ ಅರಿಯೆನು, ಅದೇ ಯಕ್ಷ ಗಾನದ ಬಗ್ಗೆ ಯೋಚಿಸಿಕೊಂಡು, ನಿನ್ನ ಈ ಬ್ಲಾಗು ತೆರೆದರೆ , ಅದೇ ಮತ್ತೆ ಪ್ರತ್ಯ್ಕ್ಷ! ಆ ದಿನಗಳು ಸಂಭ್ರಮದ ದಿನಗಳಲ್ಲವೇ…. ಆ ಚಪ್ಪರಮನೆ, ಕೊಂಡದಕುಳಿ, ತೋಟಿಮನೆ…….. ಏನ್ ಕುಣಿತವೋ…… ಏನ್ ಲಯವೋ….. ಏನ್ ಆಕರ್ಷಣೆಯೋ…. ಆಹ್ ….ಮತ್ತೆ ಆ ದಿನಗಳು, ಇನ್ನೊಮ್ಮೆ ಬರಬಾರದೆ? ನಳ ದಮಯ‌ಂತಿ ಯಕ್ಷಗಾನ ನನಗೆ ಇನ್ನೂ ಕಣ್ಣಿನ ಮುಂದೆ ನಡೆಯುತ್ತಿರುವಂತಿದೆ…..

  ಸುಂದರ ಲೇಖನಕ್ಕೆ ಧನ್ಯವಾದಗಳು ,
  ವಿದ್ಯಾ

  • ದಿವ್ಯ said,

   ಹೌದು ವಿದ್ಯಕ್ಕ..
   ನಾವೆಲ್ಲರೂ ಒಟ್ಟಿಗೆ ಕೂತು ಅದ ನೋಡಿದ ದಿನಗಳು ಮತ್ತೆ ಬರುತ್ತವೆಯೇ??

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: