ಹೀಗೊಂದು ಯೋಚನಾ ಲಹರಿ!

ಜನವರಿ 27, 2010 at 11:37 AM (article)


ಒಲೆ ಜೋರಾಗಿ ಉರಿಯುತ್ತಿತ್ತು! ಸೀತಮ್ಮ ಸೌದೆಯನ್ನು ಹಿಂದೆ ಸರಿಸಿ ಉರಿಯನ್ನು ಕಡಿಮೆ ಮಾಡಿದಳು.ಆಗಲೇ ಕಿಟಕಿಯಿಂದ “ಜು…ಯ್…” ಎಂದು ವಿಮಾನ ಹಾರಿ ಹೋಗುತ್ತಿದ್ದ ಸದ್ದಾಯಿತು. ಹಾಗೆ ಮೆಲಕ್ಕೆ ಕಿಟಕಿಯಿಂದಲೇ ಕಣ್ಣು ಹಾಯಿಸಿದಳು.. ವಿಮಾನ ಪುಟ್ಟದಾಗೆ ಕಾಣಿಸುತ್ತಾ ಕೊನೆಗೆ ಕಾಣದಾಯಿತು.. ಅದು ದೂರಕೆ ಹಾರಿದಂತೆ ಸೀತಮ್ಮನ ಯೋಚನಾ ಲಹರಿಯೂ ಮುಂದಕೆ ಸಾಗಿತು..

ಸುಖದಲ್ಲಿ ಮೇಲೆ ಹಾರಿದರೇನಂತೆ, ತಲುಪಬೇಕಾದಲ್ಲಿ ತಲುಪುವರೆಂಬ ಖಾತ್ರಿಯಿಲ್ಲ!! ಇಳಿದನಂತರವಷ್ಟೇ ಖಚಿತ. ಆದರೂ ಈ ಒಲೆ ಉರಿಸಿ,ಇಲ್ಲೆ ಮಸಿ ಮೆತ್ತಿ ಸಾಯೋದಕ್ಕಿಂತ ಹಾರಾಡಿ ಸತ್ತರೂ ಲೇಸು!. ಕೂಗಿದರೆ ಆಚೆ ಕೇಳಿಸದಷ್ಟು ದೂರದಲ್ಲಿ ಮನೆ. ಪಟ್ಟಣದಲ್ಲಿದ್ದರೇ ಚೆನ್ನಿತ್ತು. ಅದು ಇನ್ನೊಂದು ತರಹದ ಜೀವನ..ನೆಮ್ಮದಿಯನ್ನ ಯಾವೂರಲ್ಲಿ ಅಲೆಯಲಿ? ಎಲ್ಲಿ ಹುಡುಕಲಿ?. ಎಲ್ಲಿ ಹೋದರೂ ಸೇರುವುದು ಕೊನೆಯಲ್ಲಿ ಒಂದೇ ಜಾಗಕ್ಕೆ!. ಆ ನಾಲ್ಕು ಗೋಡೇಯಲ್ಲೆಂತದು ಕ್ಷೇಮ?..


ಆಗ ಸೀತಮ್ಮನ ಮನಸ್ಸು ಪುನಃ ಎಚ್ಚೆತ್ತಂತಾಗಿ,..

ಆದರೆ ಸುಖ ಜೀವನವನ್ನು ನೋಡುವ..ಎಂದು,ಮಗಳ ಮನೆಗೆ ಹೋದರೆ.. ಪಟ್ಟಣದಲ್ಲಿ ಇದ್ದಿದ್ದು ಒಂದು ವಾರದಲ್ಲೇ ಬೇಸರ ತಂದಿತು. ಸೌಕರ್ಯ, ಕಾರು, ಮನೆ ಎಲ್ಲಾ ಇದ್ದರೂ ಏನೋ ಕಳಕೊಂಡಂತಿದೆ ಆ ಜೀವನ. ಹಗಲೆಲ್ಲಾ ಮನೆಯೊಳಗೆ ಸ್ಮಶಾನ ಮೌನ. ಇರುಳಾಯಿತೆಂದರೆ ಗಡಿಬಿಡಿಯ ಜೀವನ,ಒಂದಿಷ್ಟು ನಿದ್ದೆ!.ಬೆಳಗ್ಗೆ ಮತ್ತದೇ ಗಡಿಬಿಡಿ,ಮತ್ತದೇ ಸ್ಮಶಾನ ಮೌನ.ಇತ್ತ ಯಾವಾಗ ಬಂದು ತಲುಪುತ್ತೇನೋ ಎಂದು ಮನ ಪ್ರಶ್ನಿಸುತ್ತಿತ್ತು.

ಅಲ್ಲಿ ಸ್ವಲ್ಪ ಸ್ವಲ್ಪವೇ ಕಳೆದು ಹೋಗುತ್ತಿದೆ ಜೀವನ, ಇಲ್ಲೂ ಅದೇ ಸ್ಥಿತಿ!. ಅಬ್ಬಾ ಮಗಳು, ಅಳಿಯ ಇಬ್ಬರೇ ಅದು ಹೇಗಿರುತ್ತಾರೋ? ಮನೆಯಲ್ಲಿ ಯಾರಾದರೂ ಬಂದರೆ ಬೀಗ ನೋಡಿ ಹೋಗಬೇಕಾದ ಸ್ಥಿತಿ! ನಮ್ಮ ಕಾಲದಲ್ಲಿ ಮನೆ ತುಂಬಾ ಜನ ತುಂಬಿದ ಸಂಸಾರ.ಆದರೆ, ಈಗೆಲ್ಲಾ ಒಡೆಯಿತಲ್ಲಾ..ಯಜಮಾನರು,ಮರ,ಗಿಡ,ದನ,ನಾಯಿ,ಬೆಕ್ಕು,ಅಲ್ಲಿ ಇಲ್ಲಿ ಊಟದ ಕಾರ್ಯಕ್ರಮಗಳಿಗೆಲ್ಲ ಹೋದಾಗ ದಿನಗಳುರುಳುವುದೇ ಗೊತ್ತಾಗದು..

“ಉಫ್!!”… ಎಂದು ಬೊಬ್ಬಿಟ್ಟಳು.. ಹಾಲು ಉಕ್ಕಿ ಒಲೆಯ ಮೇಲೆ ಬಿದ್ದಾಗಿತ್ತು!! ಬಿಸಿ ಬಿಸಿ ಪಾತ್ರೆಯನ್ನು ಪಕ್ಕಕ್ಕಿರಿಸಿ…,ಹೀಗೆ ಯೋಚಿಸುತ್ತಾ ಕುಳಿತರಾಗದು.. ಮಗಳಿಗೊಮ್ಮೆ  ಫೋನಾಯಿಸುತ್ತೇನೆಂದು ಎದ್ದು ಹೊರ ಬಂದಾಗ, ನಾಯಿ ಹಸಿವೆಯಿಂದ “ಕುಯ್ ಕುಯ್” ಎನ್ನುತ್ತಿತ್ತು!!

-ನಲ್ಮೆಯಿಂದ

ದಿವ್ಯ

Advertisements

8 ಟಿಪ್ಪಣಿಗಳು

 1. ವಿನಯ said,

  ಅಕ್ಕ , ಹಲವಾರು ವಿಷಯಗಳನ್ನ ಒಟ್ಟಿಗೆ ನಾಲ್ಕೇ ಮಾತಲ್ಲಿ ಹೇಳಿದ್ದಿರ ಅನ್ಸುತ್ತೆ
  ಚೆನ್ನಾಗಿದೆ ಆದರೆ ಎಲ್ಲವನ್ನ ಒಂದೇ ದೃಷ್ಟಿ ಅಲ್ಲಿ ತಾಳೆ ಹಾಕೋಕೆ ಆಗೋಲ್ಲ
  ಕಾಲ ಬದಲಾದ ಹಾಗೆ ಎಲ್ಲ ಬದಲಾಗಬೇಕು , ಬದಲಾಗುತ್ತೆ ಅಲ್ವೇ?

 2. ಉಮೇಶ್‌ಕುಮಾರ್‍ said,

  hmm … ಕೂಡು ಕುಂಟುಂಬ ಸಣ್ ಸಣ್‌ದಾಗಿ ನ್ಯೂಕ್ಲಿಯರ್‍ ಕುಟುಂಬ ಆಗ್ತಾ ಇರೋದಕ್ಕೇ ಹೀಗಾಗ್ತಿದೆ… ದಿವ್ಯಾ ಆ ತಾಯಿಯ ಮಾತು ವಾಸ್ತವಕ್ಕೆ ತುಂಬ ಹತ್ತಿರವಾಗಿದೆ…

 3. ಬಾಲು said,

  ಯಾಕೋ ಹಳ್ಳಿ ಮತ್ತು ನಗರಗ ಬದುಕಿನ ನಡುವಿನ ಗೋಂದಲ ತಮ್ಮನ್ನು ತುಂಬಾ ಕಾಡುತ್ತಿರುವ ಹಾಗಿದೆ. ಒಳ್ಳೇದೇ!. ಎರಡರಲ್ಲೂ positive and negetive ಅಂಶಗಳಿವೆ. ಎರಡನ್ನೂ ಪಟ್ಟಿ ಮಾಡಿ , ವಿಮರ್ಶಿಸಿ ಮುಂದುವರೆಯಿರಿ, ಶುಭ ಹಾರೈಕೆಗಳು.

 4. Pradnya said,

  good one

 5. ದಿವ್ಯ said,

  ಥ್ಯಾಂಕ್ಯೂ.. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: