ಕಳೆದ ಗಣರಾಜ್ಯೋತ್ಸವದ ದಿನಗಳು

ಜನವರಿ 26, 2010 at 3:48 AM (article)

ಇಂದು ಬೆಳ್ಳಂಬೆಳಗ್ಗೆ ಕಿವಿಗೆ ಕೇಳುತ್ತಿತ್ತು ಪೆರೇಡ್ ಸೌಂಡ್!. ಹತ್ತಿರದಲ್ಲೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತ್ತಿದ್ದ ಗಣರಾಜ್ಯೋತ್ಸವ ಆಚರಣೆಯಲ್ಲಿ ಮಾರ್ಜ್ ಫಾಸ್ಟ ಆಗುತ್ತಿತ್ತು! ಈಗಂತೂ ಆ ಕಾರ್ಯಕ್ರಮಗಳ ವೀಕ್ಷಣೆ, ಭಾಗವಹಿಸುವಿಕೆ ಯಾವುದಕ್ಕೂ ಆಸಕ್ತಿ ಇಲ್ಲವೋ, ಬೇರೆ ಕೆಲಸಗಳ ಒತ್ತಡವೋ, ಒಂದಲ್ಲ ಒಂದು ಕಾರಣಗಳು!

ಬಾಲ್ಯದಲ್ಲಿ ಕಳೆದ ಆ ದಿನಗಳು ಹಾಗೇ ಕಣ್ಣೆದುರಿಗೆ ಬಂದವು. ಪುತ್ತೂರಿನ ತಾಲ್ಲೂಕು ಮೈದಾನದಲ್ಲಿ, ಜನವರಿ ೨೬ ಬಂತೆಂದರೆ ಗೌಜಿ ಗದ್ದಲ. ತಿಂಗಳ ಮೊದಲೇ ನೃತ್ಯ, ನಾಟಕ ತರಬೇತಿ ಪ್ರಾರಂಭ. ದಿನಾಲೂ ಸಂಜೆ ಮನೆಗೆ ಒಂದು ಗಂಟೆ ಲೇಟ್ ಎಂಟ್ರಿ! ಕೇಳಿದರೆ ಗಣರಾಜ್ಯೋತ್ಸವ. ಎಲ್ಲರಿಗೂ ೨೬ಕ್ಕೆ ಇದ್ದರೆ ನಮಗೋ ಒಂದು ತಿಂಗಳ ಮೊದಲೇ ಪ್ರಾರಂಭವಾಗುತ್ತಿತ್ತು! ಈ ಗೈಡ್ಸ್ ಮುಂತಾದವುಗಳಲ್ಲಿದ್ದರೆ, ಒಂದು ವಾರ ಮೊದಲೇ ಮಾರ್ಚ್ ಫಾಸ್ಟ್ ಅಭ್ಯಾಸ. ಬ್ಯಾಂಡ್ ಸೌಂಡ್, ಕಮಾಂಡ್ ಕೊಡೋ ಪೋಲೀಸ್ ಪಡೆ! ಅವರ ಹೇಳಿಕೆಯಂತೆ ಪಥ ಸಾಗುತ್ತಿತ್ತು! ಇದಕ್ಕೆ ಬೆಳಗ್ಗೆ ಒಂದು ಗಂಟೆ ಮೊದಲು ಹೋಗಬೇಕಿತ್ತು.

ಎಲ್ಲಾ ಶಾಲೆಯ ಮಕ್ಕಳೂ ಒಂದೊಂದು ಕಾರ್ಯಕ್ರಮ ಕೊಡಬೇಕಿತ್ತು.ಅದೂ ಎಲ್ಲಾ ಮಕ್ಕಳೂ ಭಾಗವಹಿಸಿ, ಕ್ರೀಡಾಂಗಣವೇ ತುಂಬಬೇಕು! ಕೇಸರಿ, ಬಿಳಿ, ಹಸಿರು ಬಣ್ಣಗಳ ಧರಿಸು ಕಲೆಕ್ಟ ಮಾಡಿ, ಒಟ್ಟಾರೆ ಅದರ ಕಾಂಬಿನೇಶನ್ ಇರೋ ಧರಿಸುಗಳೇ!. ಒಂದು ವಾರವಿರುವಾಗ ಆ ಸಂಜೆ ನಾಲ್ಕರ ಬಿಸಿಲಿಗೆ ಕ್ರೀಡಾಂಗಣಕ್ಕೆ ಹೋಗಿ ಪ್ರಾಕ್ಟೀಸ್. ಮನೆಗೆ ಬಂದು ಕೈ ನೋವು, ಕಾಲು ನೋವು ಎಂದು ಕೂಗಾಡುವುದು. ಎಲ್ಲಾ ರಾಷ್ಟ್ರಭಕ್ತಿ ಮೆರೆವೆ ಹಾಡುಗಳಿಗೆ ತಾಳ! ನಾನು ಗೈಡ್ಸ್ ನಲ್ಲಿದ್ದುದರಿಂದ ಬೆಳಗ್ಗೆ ಮಾರ್ಚ್ ಫಾಸ್ಟ ಪ್ರಾಕ್ಟೀಸ್ ಇತ್ತು. ಆ ಕೋವಿ ಹಿಡಿದ ಪೋಲೀಸ್ ಪಡೆಗಳು ಮುಂದೆ, ನಮ್ಮ ಪಡೆಗೆಗಳು ಅವರ ಹಿಂದೆ! ಆ ಪೆರೇಡ್ ಬ್ಯಾಂಡ್, ಅದರ ತಾಳಕ್ಕೆ ಕಾಲು ತಂತಾನೆ ನಿರ್ಧಿಷ್ಟವಾಗಿ ಹೆಜ್ಜೆ ಹಾಕುತ್ತಿತ್ತು. ಪಥಸಂಚಲನದ ನಂತರ ಪಡೆಗಳು ಒಂದೊಂದಾಗಿ ಲೈನ್ ನಲ್ಲಿ ನಿತ್ತಿರಬೇಕಿತ್ತು. ಮುಂದಿನಲ್ಲಿ ಪಡೆಯ ಲೀಡರ್. ಹೆಡ್ ಪೋಲೀಸ್ ಒಬ್ಬರು ಅದಿಕಾರಿಗೆಳನ್ನು ಕರೆದು ಕೊಂಡು, ಎಲ್ಲಾ ಪಡೆಗಳ ಪರಿಚಯ ಮಾಡಿಸುವರು. ಹಿಂದಿನಿಂದ ಬ್ಯಾಂಡ್ ತಾಳಕ್ಕೆ ಅವರ ಹೆಜ್ಜೆ ಸಾಗುತ್ತಿತ್ತು. ನಮ್ಮ ಪಡೆಯ ಎದುರು ಬಂದಾಗ ಸೆಲ್ಯೂಟ್ ಹೊಡೆದು ಹೇಗೆ ಸ್ವಾಗತಿಸಬೇಕು ಎಂಬಿತ್ಯಾದಿಗಳ ಬಗ್ಗೆ ಬೆಳಿಗ್ಗೆ ಪ್ರಾಕ್ಟೀಸ್ ಆಗುತ್ತಿತ್ತು.

ಕೊನೆಗೆ ಗಣರಾಜ್ಯಾತ್ಸವದ ದಿನ ಬೆಳಗ್ಗೆ  ಮನೆಯಲ್ಲಿ ಅಮ್ಮನಿಗೆ ತಾಕೀತು, ನೀನೂ ನೋಡಲು ಬರಲೇ ಬೇಕು ಎಂದು ಹೇಳಿ,ನಾವು ಬೇಗ ಮನೆಯಿಂದ ಹೊರಡುತಿದ್ದೆವು. ಹ್ಮ್ಮ್ ಎಂದು ಪಕ್ಕದ ಮೆನೆಯ ಆಂಟಿ ಜೊತೆ ಬರುತ್ತಿದ್ದರು. ಆ ಆಂಟಿಗೂ ಅವರ ಮಕ್ಕಳ ತಾಕೀತಾಗಿರುತ್ತಿತ್ತು. ಅದೆಲ್ಲೋ ಮೇಲುಗಡೆ ಕುಳಿತಿರುತ್ತಿದ್ದರು.ನಾವೋ ಬಿಸಿಳಿನ ಝಳಕ್ಕೆ ಧರಿಸನ್ನು ಧರಿಸಿ ನಮ್ಮ ಸರದಿಗಾಗಿ ಕಾಯುವುದೇ ಆಯಿತು. ಎಲ್ಲಾ ಶಾಲೆಯಿಂದಲೂ ವಿಭಿನ್ನವಾದ ಕಾರ್ಯಕ್ರಮ. ನೋಡಲು ಸುಂದರವಾಗಿ ಕಾಣುತ್ತಿತ್ತು. ಲೆಟರ್ ಗಳನ್ನ ಬರೆಯುವುದು, ಭಾರತ ನಕ್ಷೆ ಮಾಡುವುದು.. ಹೀಗೆ! ಒಹ್.. ಎಲ್ಲ ನೋಡಿ ಮಾಡಿ ಮುಗಿಯುವ ಹೊತ್ತಿಗೆ ಹಿಂಡಿ ಹಿಪ್ಪೆಯಾಗುತ್ತಿದ್ದೆವು. ಮನೆಗೆ ಹೋಗಿ ಒಂದಿಷ್ಟು ಹೊಟ್ಟೆಗೆ ಹಾಕಿ, ದಿನದ ಕಥೆ ಅಪ್ಪ ಮದ್ಯಾಹ್ನ ಊಟಕ್ಕೆ ಬಂದಾಗ ವರದಿಗಾರರಂತೆ, ಅವರಿಗಿಂತಲೂ ಸುಂದರವಾಗಿ ವಿವರಿಸುತ್ತಿದ್ದೆವು. ಅಮ್ಮನಲ್ಲಿ, ನಮ್ಮನ್ನು ಅಲ್ಲಿ ಗ್ರೌಂಡ್ನಲ್ಲಿ ಗುರುತಿಸಿದೆಯಾ? ಎಂದು ಕೇಳಿದರೆ, ನಿನ್ನನ್ನು ಕಾಣಲಿಲ್ಲ, ತಂಗಿಯನ್ನು ನೋಡಿದೆ. ಇಲ್ಲ, ತಂಗಿಯನ್ನು ಕಾಣಲಿಲ್ಲ ನಿನ್ನನು ಗುರುತಿಸಿದೆ ಎಂದು ಮಾತು ಹಾರಿಸುತ್ತಿದ್ದರು..!! ನಮ್ಮನ್ನು ಗುರುತಿಸುವುದಾದರೂ ಹೇಗೆ? ಅದೂ.. ಅಷ್ಟು ಮಕ್ಕಳ ನಡುವೆ!, ಒಂದೇ ರೀತಿಯ ಬಟ್ಟೆ ತೊಟ್ಟು ಪ್ರೋಗ್ರಾಂಮ್ ಆಗ್ತಿರೋವಾಗ ಅದ್ಅನು ನೋಡುವುದೇ,ಅಲ್ಲ ಅಷ್ಟು ಮಕ್ಕಳಲ್ಲಿ, ತಮ್ಮ ಮಕ್ಕಳನ್ನು ಹುಡುಕುವುದೇ? ಅನತಿ ದೂರದಿಂದ ಗುರುತಿಸುವುದು ಅಸಾದ್ಯವೇ ಸರಿ!!

ಎಲ್ಲಾ ಹತ್ತನೇ ತರಗತಿಯವರೆಗೆ.!!. ಮತ್ತಿನ ದಿನಗಳಲ್ಲಿ, ೨೬ಕ್ಕೆ ರಜೆಯಲ್ಲವೇ ಕೋಚಿಂಗ್ ಕ್ಲಾಸ್ ನಿಂದ ಬುಲಾವ್!! ಕೆಲಸಕ್ಕೆ ಹೋಗುತ್ತಿರುವವರಿಗೆ, ಒಂದು ದಿನವಾದರೂ ವಾರದ ನಡುವೆ ರಜೆ ಸಿಕ್ಕಿತಲ್ಲ ಎಂದು ರೆಸ್ಟ್! ಸಂಭ್ರಮ ಮಕ್ಕಳಲ್ಲಿ ನೋಡಿ, ನಮ್ಮ ಕಳೆದ ದಿನಗಳ ನೆನಪಿಸುವುದೇ ಆಯಿತು..!
ಮರಳಿ ಆ ದಿನಗಳ ಕಡೆಗೆ ಮಗದೊಮ್ಮೆ ಯಾವಾಗ ಪ್ರಯಾಣವೋ??!!!


ಎಲ್ಲರಿಗೂ ಗಣರಾಜ್ಯೋತ್ಸವದ ಶುಭ ಹಾರೈಕೆಗಳು.


-ನಲ್ಮೆಯಿಂದ
ದಿವ್ಯ

Advertisements

2 ಟಿಪ್ಪಣಿಗಳು

 1. sharadabooks said,

  ಮರಳಿ ನಿಮ್ಮ ಮಕ್ಕಳ ಜೊತೆಗೆ…ಪಯಣ..
  ನಮ್ಮ ಕಾಲದಲ್ಲಿ ಹೀಗಿತ್ತು,..ಹಾಗಿತ್ತು… ಅನ್ನುತ್ತಾ..
  ಅನುಭವ ಸವಿ..ಅದರ ನೆನಪು..ಇನ್ನೂ…ಸವಿ..
  ಸವಿ ನೆನಪುಗಳು ಬೇಕು..ಸವಿಯಲೀ..ಬದುಕು..
  ಅಲ್ಲವೇ???

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: