ನಿಮ್ಮ ಮನಸ್ಸು ನಿಮ್ಮೊಂದಿಗೆಯೇ ಮಾತನಾಡುತ್ತದೆಯೇ??

ಜನವರಿ 21, 2010 at 1:08 ಅಪರಾಹ್ನ (article)

ಹೌದು!!, ನನ್ನ ಮನಸ್ಸು ಇಂದೂ..  ನನ್ನೊಂದಿಗೆ ಮಾತಾಡಿತು. ಒಂಥರಾ ಎರಡು ದಿವ್ಯ!! ನೋಡಿದರೊಬ್ಬಳೇ..! ಒಂದು ರೀತಿಯ ಮನಸುಗಳ ನಡುವಣ ಮಾತುಕತೆ,ಯುದ್ಧ, ಜಟಾಪಟಿ ಎನ್ನಬಹುದು.ಆದರೆ ಸ್ವರವೇನು ಹೊರಡುವುದಿಲ್ಲ. ಸುಮ್ಮನೆ ಒಬ್ಬಳೇ ಕುಳಿತು ನನ್ನೊಂದಿಗೆ ನಾನೇ ನನ್ನಷ್ಟಕ್ಕೆ ಮಾತಾಡುವುದು.

ಗೊಂದಲಮಯ ವಾತಾವರವಿರುವ ಸಮಯದಲ್ಲಿ ಈ ಮಾತುಕತೆಗಳು ನಡೆಯುತ್ತವೆ. ವಿಷಯಗಳು ಸರಿಯೋ ತಪ್ಪೋ ಎಂದು ನಿರ್ಧರಿಸುವ ಸಂದರ್ಭಗಳಲ್ಲೇ ಮಾತಾಡುತ್ತದೆ.ಒಂದು ಮನಸ್ಸು ಧನಾತ್ಮಕವಾಗಿ ಪ್ರೇರಣೆ ನೀಡುತ್ತಿದ್ದರೆ, ಇನ್ನೊಂದು ರುಣಾತ್ಮಕವಾಗಿ!!

ಎಲ್ಲಾದರು ಹೋಗುವ ನಿರ್ಧಾರ ಖಂಡಿತವಾಗಿರದಾಗ, ಹೋಗಲೋ ಬೇಡವೋ ಹೋದರೆ ಹಾಗೆ ಹೋಗದಿದ್ದರೆ ಹೀಗೆ, ಹೋಗದಿದ್ದಲ್ಲಿ, ತಪ್ಪು ತಿಳಿಯುತ್ತಾರೇನೋ ಎಂದು ಒಂದು ಮನ, ಇಲ್ಲ ಹೋಗು ಹೋದರೆ ಎಲ್ಲರನ್ನು ಕಂಡು ಮಾತಾಡಿಸಿದಂತೆ ಎಂದು ಇನ್ನೊಂದು!. ಮತ್ತೊಮ್ಮೆ, ಮನೆಯಿಂದ ಬರಲು ಮನಸ್ಸಿಲ್ಲ, ಬಾರದಿದ್ದರೆ ಇಲ್ಲಿಯ ಕೆಲಸ ಮುಂದುವರೆಯುವುದಿಲ್ಲ. ಇಂಥಹ ಸನ್ನಿವೇಶ ಬಂದಾಗ, ಈ ಮನಸ್ಸುಗಳು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ವರೆಗೆ ಮಾತಾಡುತ್ತವೆ. ಎಲ್ಲಾ ಪಾಸಿಬಿಲಿಟೀಸ್ ಗಳನ್ನು ಲೆಕ್ಕ ಹಾಕಿರುತ್ತದೆ. ಕೊನೆಯಲ್ಲಿ ಯಾವುದಾದರೊಂದು ಮನ ನುಡಿದುದರ ಹಿಂಬಾಲಿಸಿ,ನಮ್ಮ ಮನಸ್ಸು ಮುಂದೆ ನಡೆಯುತ್ತದೆ.

ಇವತ್ತು ಹೀಗೇ ಆಯಿತು, ಗೆಳತಿಯ ಮನೆಗೆ ಹೋಗಲೋ, ಬೇಡವೋ ಎನ್ನುವ ಗೊಂದಲ. ಒಂದು ಮನಸ್ಸು ಹೋಗು.. ಇವತ್ತಿನ ದಿನದ ಹಾಸ್ಟೆಲ್ ಊಟವಾದರೂ ತಪ್ಪುತ್ತದೆ.ರಜೆ ಬೇರೆ! ಹಾಸ್ಟೆಲಲ್ಲೇ ಪ್ರಾಜೆಕ್ಟ್ ಕೆಲಸ ಅಂತ ಎಷ್ಟು ತಲೆ ಕೆಡಿಸಿಕೊಂಡಿರುತ್ತೀ?? ಆಗ ಇನ್ನೊಂದು ಮನ, ಯಾಕೆ ಸುಮ್ಮನೆ ಹೋಗ್ಬೇಕು ಊಟ ದಿನ ಮಾಡುವುದೇ.. ಇವತ್ತೂ ಮಾಡು! ಅವಳೇ ಬರ್ತಿದ್ದಾಳಲ್ಲ ಹೋಗೋದು ಯಾಕೆ ಇಲ್ಲೇ ಮಾತಾಡಿದ್ರಾಯ್ತು. ಗಾಡಿಲೇ ಅವಳ ಜೊತೆ ಹೋದ್ರೂ, ಮತ್ತೆ ಬರ್ಬೇಕಾದ್ರೆ ಅಟೋಕ್ಕೊಂದಿಷ್ಟು ಸುರಿಬೇಕು. ಆಗ ಇನ್ನೊಂದು ಮನಸ್ಸು ತಾನೇಕೆ ಬಿಟ್ಟು ಕೊಡಲಿ ಎಂದು ಪ್ರಾರಂಭಿಸಿತು, ಹಣ ಕೊಟ್ಟರೇನಾಯಿತು ಹಾಸ್ಟೆಲಿನಾಚೆಗಿನ ಬದುಕಿಗೊಮ್ಮೆ ಪ್ರವೇಶಿಸಿ ಚೇಂಜ್ ಸಿಕ್ಕಿದಂತಾಗುತ್ತದೆ. ಅವಳ ಅಕ್ಕನ ಮಕ್ಕಳೊಟ್ಟಿಗೆ ಬೆರೆತಾಗ ಸ್ವಲ್ಪ ಮನಕ್ಕೂ ನೆಮ್ಮದಿ,ಸಂತೋಷ ಸಿಗುತ್ತದೆ. ಆಂಟಿನು ಈಗೇನು ಬರುತ್ತಿಲ್ಲ? ಬಾ ಒಮ್ಮೆ ಅಂತ ಹೇಳುತ್ತಿರುತ್ತಾರಲ್ಲ. ಹೀಗೆ… ಅಂತು ಧನಾತ್ಮಕವೇ ಗೆದ್ದಿತು. ಹೊರಟೇ ಬಿಟ್ಟೆ!.

ಇದೇ ತರಹ ಪ್ರತಿ ದಿನವೂ ಒಂದಲ್ಲ ಒಂದು ರೀತಿಯ ಗೊಂದಲವು ಮನದಲ್ಲೆಬ್ಬುತ್ತದೆ. ಪೀತಿ, ಪ್ರೇಮ ಸ್ನೇಹ, ವಾತ್ಸಲ್ಯ ಎಲ್ಲವೂ ಇಲ್ಲಿ ಗೊಂದಲವನ್ನುಂಟು ಮಾಡಿಯೇ ಮಾಡುತ್ತದೆ. ಹೀಗೇಕೆ ನಮ್ಮ ಮನಸ್ಸು ನಮ್ಮೊಡನೆಯೇ ಮಾತನಾಡುತ್ತದೆ? ಇನ್ನೊಬ್ಬರ ಸಲಹೆ, ಒತ್ತಡಗಳಿದ್ದಲ್ಲಿ ಆ ಕಡೆ ನಮ್ಮ ನಿಲುವು ಹರಿಯುತ್ತದೆ. ಆದರೆ ನಾವೇ ಡಿಸೈಡ್ ಮಾಡಬೇಕಾಗಿ ಬಂದಾಗ ಮನವು ಹೀಗೆಲ್ಲ ಮಾತನಾಡುತ್ತದೆ!! ಎಲ್ಲರ ಮನದಲ್ಲೂ ಈ ರೀತಿ ನಡೆಯುತ್ತೇನೋ???!!

-ನಲ್ಮೆಯಿಂದ

ದಿವ್ಯ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: