ಏನಿದು ಸ್ಕೌಟ್ಸ್ ಮತ್ತು ಗೈಡ್ಸ್?

ಜನವರಿ 19, 2010 at 2:50 ಅಪರಾಹ್ನ (article)

ಸ್ಕೌಟ್ಸ್ ಮತ್ತು ಗೈಡ್ಸ್ ಮೊದಲಿಗೆ ಪ್ರಾರಂಭವಾಗಿದ್ದು ಯುನೈಟೆಡ್ ಕಿಂಗ್ಡಮ್ನಲ್ಲಿ.ಲಾರ್ಡ್ ಬಾಡನ್ ಪಾವೆಲ್ ರವರು ೧೯೦೭ರಲ್ಲಿ  ಹುಡುಗರಿಗಾಗಿ ಸ್ಕೌಟ್ಸ್ ಪ್ರಾರಂಭಿಸಿದರು.ಇದು ಅಲ್ಲೂ, ಮತ್ತು ಇತರೆ ದೇಶಗಳಲ್ಲೂ ಬೇಗನೆ ಹರಡಿಕೊಂಡಿತು.


ಪ್ರಾಥಮಿಕ ಶಾಲೆಯಲ್ಲಿ ಮತ್ತು ಪ್ರೌಢಶಾಲೆಯಲ್ಲಿ ಇದರ ತರಗತಿಗಳು ಪ್ರಾರಂಭವಾಗುತ್ತೆದೆ. ಅನೇಕ ಕ್ಯಾಂಪ್ ಗಳು,ಮತ್ತು ಪ್ರಥಮ ಸೋಪಾನ, ದ್ವಿತೀಯ ಸೋಪಾನ ತ್ರಿತೀಯ ಸೋಪಾನ, ರಾಜ್ಯ ಪುರಸ್ಕಾರ, ರಾಷ್ಟ್ರಪತಿ ಪುರಸ್ಕಾರ,ಇವೆಲ್ಲ ಇದರ ಹಂತಗಳು! ಇದರ ಮೂಲ ಉದ್ದೇಶ ,ಒಂದು ರೀತಿಯಲ್ಲಿ ಸೇವಾ ಮನೋಭಾವನೆ ಬೆಳೆಸುವಂಥದ್ದು, ಯಾವದೇ ಪ್ರರಿಸ್ಥಿತಿಯನ್ನು ಎದುರಿಸಲು ಸಿದ್ದರಿರುವಂತೆ ಸನ್ನದ್ಧರಾಗಿ ಮಾಡುವುದು, ಎಂಥದಕ್ಕೂ ಸೈ ಎನ್ನಿಸುವುದು.ಆ ದಿನಗಳೆಲ್ಲ ಮೇಲಿನ ಸಮವಸ್ತ್ರ ಧರಿಸಿಯೇ ಚಟುವಟಿಕೆ ಮಾಡುವುದು.


ಇದರದ್ದೇ ಆದ ಪ್ರತಿಜ್ಞೆ, ೯ ನಿಯಮಗಳು, ಇದು ತಿಳಿದಿರಲೇ ಬೇಕು!ಅದರಂತೆ ನಡೆಯಬೇಕು.ಅದಕ್ಕೆಂದೇ ಪ್ರತಿಯೊಂದು ಶಾಲೆಯಲ್ಲಿ ಒಂದು ಇಲ್ಲ ಎರಡು ಅಧ್ಯಾಪಕರಿರುತ್ತಾರೆ. ಅವರ ಮಾರ್ಗದರ್ಶನದಂತೆ ಗುರಿಯತ್ತ ಪಥವು ಸಾಗುತ್ತದೆ. ಅದರದೇ ಆದ ಚಿಹ್ನೆ, ಧ್ವಜ ಎಲ್ಲವೂ ಇದೆ.ಅದನ್ನು ಹಾಸ್ಟ್ ಮಾಡಕು ತಯಾರಿ, ಮೂರು ಕೋಲುಗಳಿಂದ, ರೋಪ್ ಗಳಿಂದ ಧ್ವಜಸ್ಥಂಭ ಕಟ್ಟುವುದು ಎಲ್ಲವೂ ತಿಳಿದಿರಬೇಕು.


ಪ್ರಥಮ ದ್ವಿತೀಯ ತ್ರಿತೀಯದಲ್ಲೆಲ್ಲ, ವಿವಿಧ ಗಂಟುಗಳು ನಿಯಮ, ಪ್ರತಿಜ್ಞೆ, ಎತ್ತರವನ್ನ ಅಳೆಯುವುದು, ನಕ್ಷತ್ರ ಪುಂಜವನ್ನ ಗುರುತಿಸುವುದು, ಸಾಹಸಮಯ ಕ್ರೀಡೆಯನ್ನಾಡುವುದು, ಕಂಪಾಸ್ ಹಿಡಿದು ಮ್ಯಾಪ್ನಲ್ಲಿ ಬೇಕಾದ ಸ್ಥಳ ತಲುಪುವುದು. ಕೆಲವೊಂದು ದಾರಿ ಗುರುತುಗಳನ್ನು ಬಳಸಿ ತಲುಪಬೇಕಾದ ಸ್ಥಳ ಹುಡುಕುವುದು, ಪ್ರಥಮ ಚಿಕಿತ್ಸೆಯ ಬಗ್ಗೆ ಅರಿತಿರುವುದು ಇತ್ಯಾದಿ.

ನಂತರ ಸ್ವಲ್ಪ ಕಷ್ಟ ಪಡಬೇಕು. ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ಕ್ಯಾಂಪ್ ಫಯರಿಂಗ್, ನಮ್ಮದೇ ವೈವಿಧ್ಯತೆಯನ್ನ ಬೆಳಕಿಗೆ ತರುವುದು, ಇನ್ನೂ ಮೇಲಿನ ವಿಷಯಗಳಲ್ಲಿ ಹೆಚ್ಚಿನ ತಿಳುವಳಿಕೆ ಪಡೆದು, ಗ್ರೂಪ್ ನಲ್ಲಿ ಕೆಲಸ ಮಾಡುವ ಮನೋಭಾವನೆ, ಲೀಡರ್ ನ ಸ್ಥಾನದಲ್ಲಿ ಕಾರ್ಯ ಚಟುವಟಿಕೆಯ ಅನುಭವ, ಜಾಗ್ರತ ಗೊಳಿಸಲು ಚಳುವಳಿಗಳು, ನಗರ ನೈರ್ಮಲ್ಯ ಎಲ್ಲವನ್ನೂ ಹಮ್ಮಿಕೊಳ್ಳುವುದು.ಉತ್ತಮ ಕೆಲಸ ಮಾಡುವುದು. ಕೆಲವೊಂದು ಬ್ಯಾಡ್ಜ್ ಪಡೆಯಬೇಕು, ಉದಾಹರಣೆಗೆ ಯೋಗ ಗೊತ್ತಿದ್ದಲ್ಲಿ, ಅದರಲ್ಲಿ ಸಂಪೂರ್ಣ ಮಾಹಿತಿ ಇರುವುದರ, ಖಾತ್ರಿಯ ಬಗ್ಗೆ ಒಂದು ಸರ್ಟಿಫಿಕೇಟ್ ಪಡೆಯುವುದು,ಆಗ ಯೋಗ ಬ್ಯಾಡ್ಜ್ ದೊರೆಯುತ್ತದೆ.ಹೀಗೆ ಇನ್ನೂ ಕೆಲವನ್ನು ಮಾಡಬೇಕು. ಹೈಕಿಂಗ್, ಟ್ರೆಕ್ಕಿಂಗ್ ಎಲ್ಲ ಅನುಭವವಿರಬೇಕು. ಇದೆಲ್ಲ ಮಾಡಿದುದರ ಬಗ್ಗೆ ಪ್ರತಿಯೊಂದರ ಬಗ್ಗೆ ಮಾಹಿತಿ ಅದರದೇ ಪುಸ್ತಕದಲ್ಲಿ ಬರೆದಿಟ್ಟಿರಬೇಕು. ಇನ್ನು ರಾಜ್ಯ ಪ್ರಶಸ್ತಿ ಪರೀಕ್ಷೆಗೆ ಅರ್ಹರು!.ಸಿದ್ಧತಾ ಪರೀಕ್ಷೆಯ ನಂತರವೇ,ರಾಜ್ಯ ಪ್ರಶಸ್ತಿ ಪರೀಕ್ಷೆ ನಡೆಯುತ್ತದೆ.ಉತ್ತೀರ್ಣರಾದರೆ ರಾಜ್ಯಪಾಲರ ಹಸ್ತಾಕ್ಷರವಿರುವ ಪ್ರಮಾಣ ಪತ್ರ!.


ಉತ್ತೀರ್ಣರಾದಲ್ಲಿ ಮತ್ತೆ ಮುಂದುವರೆಸುವ ಆಸಕ್ತಿ ಇದ್ದಲ್ಲಿ, ರಾಷ್ಟ್ರಪತಿ ಪರೀಕ್ಷೆಯ ಸಿದ್ಧತೆ ನಡೆಸಬಹುದು. ಮತ್ತೂ ಉತ್ತಮ ಜ್ಞಾನ,ಸ್ಕಾರ್ಫ್ ಬೆಲ್ಟೆ ಹೊದಿಕೆಗಳನ್ನೆಲ್ಲ ಉಪಯೋಗಿಸಿ ಸ್ತ್ರೆಚ್ಚರ್ ಮಾಡಿ ರೋಗಿಯನ್ನು ಹೊತ್ತೊಯ್ಯಲು ಗೊತ್ತಿರಬೇಕು. ಮೂಳೆ ಮುರಿತಗಳಿಗೆ ಪ್ರಥಮ ಚಿಕಿತ್ಸೆ ಹೇಳಿದರೆ, ತಾತ್ಕಾಲಿಕ ಬ್ಯಾಡೇಜ್ ಕಟ್ಟಲು ಗೊತ್ತಿರಬೇಕು. ಗಂಟುಗಳ ಉಪಯೋಗ ಮಾಹಿತಿ ಗೊತ್ತಿರಬೇಕು. ಬಿಪಿ ೬  ವ್ಯಾಯಾಮಗಳು, ಅಡುಗೆ, ರಾಷ್ಟ್ರಗೀತೆ ಯನ್ನು ನಿರ್ದಿಷ್ಟ ಸಮಯದಲ್ಲಿ ಹಾಡಲು, ವಿವರಗಳು ಗೊತ್ತಿರಬೇಕು. ಅಂಗನವಾಡಿ ಮಕ್ಕಳಿಗೆ ಪಾಠ, ಸರಕಾರಿ ಆಸ್ಪತ್ರೆಯಲ್ಲಿ ಕೆಲವು ದಿನಗಳ ಸೇವೆ, ಇದೆಲ್ಲ ಮಾಡಿರುವುದಕ್ಕೆ ರುಜುವಾತುಗಳಿರೆಬೇಕು.ಒಟ್ಟಾರೆ ನಾವು ಸಧಾ ಸಿದ್ದರು ಎನ್ನುವುದನ್ನ  ಮನವರಿಕೆ ಮಾಡಬೇಕು.ಇದರ ಪರೀಕ್ಷೆ ಹರಿಹರದ ಕೊಂಡಜ್ಜಿ ಇಲ್ಲವೇ, ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಅದಕ್ಕೆಂದ್ದೇ ಇರುವ  ಜಾಗದಲ್ಲಿ ನಡೆಯುತ್ತದೆ. ೬ ದಿನ ಸಿದ್ಧತಾ ಪರೀಕ್ಷೆಯು  ಒಂದು ಕಡೆ ನಡೆದರೆ, ಮತ್ತಿನದು ಇನ್ನೊಂದೆಡೆ ಮತ್ತಾರು ದಿನ ನಡೆಯುತ್ತದೆ!. ಟೆಂಟ್ಗಳಲ್ಲೇ ವಾಸ. ದಿನವೂ ಹಲವು ಕಡೆಗಳಲ್ಲಿ ಅಲ್ಲಲ್ಲಿ ಮರಗಳ ಕೆಳಗೆ ಪರೀಕ್ಷೆ!! ಉತ್ತೀರ್ಣರಾದರೆ ರಾಷ್ಟ್ರಪತಿಯವರ ಹಸ್ತಾಕ್ಷರವಿರುವ ಪ್ರಮಾಣ ಪತ್ರ ಅವರ ಕೈಯಿಂದಲೇ ಪಡೆದುಕೊಳ್ಳುವ ಅವಕಾಶ!!
ಮಕ್ಕಳನ್ನು ಇದಕ್ಕೆ ಕಳುಹಿಸಿ, ಇದಕ್ಕೆ ಪ್ರೋತ್ಸಾಹಿಸಿದರೆ, ಧೈರ್ಯವಂತರು, ಮುನ್ನಡೆಯಿವ ಛಲ ಎಲ್ಲವನ್ನೂ ಪಡೆಯುವುದರಲ್ಲಿ ಸಂಶಯವಿಲ್ಲ, ಜೊತೆಗೆ ವ್ಯಕ್ತಿತ್ವ ವಿಕಸನ, ಪ್ರತಿಭೆಗೆ ಪ್ರೇರಣೆ,ರಾಷ್ಟ್ರಭಕ್ತಿ,ಸುತ್ತಮುತ್ತಲ ಬದುಕಿನ ಹಾದಿ ಇದೆಲ್ಲದರೆ ಬಗ್ಗೆಯೂ ಅರಿವು ಮೂಡಿಸುತ್ತದೆ. ಮತ್ತೊಂದು, ಇದ್ದನ್ನು ಪೂರೈಸಿದಲ್ಲಿ ಇಂಜಿನಿಯರಿಂಗೆ ಸೀಟ್ ನಲ್ಲಿ ಪ್ರಥಮ ಆದ್ಯತೆ ಕೊಡುತ್ತಾರೆ.ಹಾಗಾದರೂ ಪ್ರೇರೇಪಿಸುವರೇನೋ!! 🙂

ಆದರೆ ಈಗಿನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸ ಬರಿ, ಪುಸ್ತಕಗಳಿಗಸ್ಟೇ, ಓದಿಗಸ್ಟೇ ಸೀಮಿತವಾಗದೆ, ಇಂತಹ ಚಟುವಟಿಕೆಗಳೂ ಜೊತೆಗಿರಲಿ. ಮುಂದಿನ ಜೀವನಕ್ಕೆ ಒಂದು ತರಹದ ಸ್ಪೂರ್ತಿ, ಎಲ್ಲಿ ಹೋದರೂ ಜಯಿಸಬಲ್ಲೆನೆಂಬ ಆತ್ಮವಿಶ್ವಾಸವನ್ನು ತರಲಿ. ಮಾಹಿತಿ ಕಡಿಮೆಯಾಯಿತು ನಿಜ. ಸಮಯವಿದ್ದಾಗ ನಾನು ರಾಷ್ಟ್ರಪತಿ ಪರೀಕ್ಷೆಯನ್ನು ಪೂರೈಸಿದ ಮಹಲುಗಳ ಬಗ್ಗೆಯೂ ಬರೆಯುತ್ತೇನೆ. ಆದರೂ ಅಬ್ದುಲ್ ಕಲಾಂನವರ ಹಸ್ತಾಕ್ಷರವಿರುವ ಪರಮಾಣಪತ್ರ ನೋಡಿದಾಗ ಮನಸ್ಸಿಗಾದ ಸಂತೋಷ ಅಸ್ಟಿಸ್ಟಲ್ಲ!! ನನಗೆ ಗೈಡ್ಸ್ ನಿಜವಾಗಿಯೂ ಬದುಕಲ್ಲಿ ಭರವಸೆಯ ಕೊಟ್ಟಿಟು!

-ನಲ್ಮೆಯಿಂದ

ದಿವ್ಯ

Advertisements

2 ಟಿಪ್ಪಣಿಗಳು

 1. sharadabooks said,

  ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಕೇಳಿ ಗೊತ್ತಿತ್ತು.ಅದರೆ ಭಾಗವಹಿಸಿದವರ ಅನುಭವ ಕೇಳಿ ಗೊತ್ತಿರಲಿಲ್ಲ.
  ಇನ್ನೂ ವಿವರವಾಗಿ ಬರೆದರೆ ಇದರಲ್ಲಿ ಒಂದು ಲೇಖನ ಮಾಲೆಗಾಗುವಷ್ಟು ಸರಕು ಇರಬಹುದುಅಂತ ಅನಿಸುತ್ತಾಇದೆ.
  ನಮ್ಮ ಸ್ವಂತ ಅನುಭವದ ವಿಶಯಗಳನ್ನು ಬರೆದಾಗ ಲೇಖನಗಳೂ ಹೆಚ್ಚು ಆಪ್ತವಾಗುತ್ತವೆ.
  ನೀನೇ ಹೇಳಿಕೊಂಡಂತೆ ’”ಸಮಯವಿದ್ದಾಗ”’ ಅಲ್ಲ ಸಮಯ ಮಾಡಿಕೊಂಡಾದರೂ ಬರೆಯಬೇಕಾದ ಸಂಗತಿ.
  ದಿವ್ಯಾ,
  ನಿನ್ನ ವ್ಯಯಕ್ತಿಕ ಸಾಧನೆಯ ವಿವರಣೆ,ಆಸಕ್ತರಿಗೆಲ್ಲ ಪ್ರೇರಣೆಯಾಗಲಿ.

 2. ದಿವ್ಯ said,

  ಸರಿ.. ಖಂಡಿತಾ ಬರೆಯುತ್ತೇನೆ… ನಿಮ್ಮ ಆಸಕ್ತಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: