ಯಾಕೆ ಹೀಗೆ??!!

ಜನವರಿ 16, 2010 at 9:32 AM (article)

ಕೆಲವು ಪುಟಗಳ ಪ್ರತಿಗಳು ತುರಂತವಾಗಿ ಬೇಕಾಗಿತ್ತು. ಪ್ರಿಂಟ್ ಔಟ್ ತೆಗ್ಸೋಕೆ ಹೋದೆ.೩ ಜನ ಸರದಿಯಲ್ಲಿದ್ದರು. ನಾನು ಕಾದು ಕೂತೆ. ಅವ್ರದ್ದೆಲ್ಲ ಆಯ್ತು. ಇನ್ನು ನನ್ನದೇ, ಡೌನ್ ಲೋಡ್ ಮಾಡಿ ಕೊಟ್ಟೆ.ಇನ್ನೇನು ಪ್ರಿಟ್ ಕೊಟ್ರು.ನೋಡ್ತೇನೆ ಪೇಜಸ್ ಬರ್ತಾನೆ ಇಲ್ಲ!! ಸಿಕ್ಕಾ ಪಟ್ಟೆ ಮನಸಲ್ಲೆ ಬೈಕ್ಕೊಂಡೆ. ಬೇಜಾರ್ ಆಗಿ ಹೋಯ್ತು! ಬೇರೆ ಕಡೆ ತೆಗ್ಸೋಣ ಅಂದ್ರೆ,ತುಂಬಾನೆ ದೂರ ಹೋಗ್ಬೇಕಿತ್ತು. ಅದು ಸಾಧ್ಯ ಇಲ್ಲ. ಏನ್ ಮಾಡೋದಪ್ಪಾ ಅಂತ ಯೋಚಿಸ್ತಾ ಕೂತ್ರೆ ,ಐಡಿಯಾ ಏನೂ ಸಿಕ್ಕ್ಲಿಲ್ಲ!! ಬದಲಿಗೆ ಇದ್ಯಾಕೆ ಹೀಗಾಯ್ತು, ಅನ್ನೋದೇ ಯೋಚನೆಗೆ ಹೋಯ್ತು.

ಇದ್ಯಾಕೆ ಹೀಗೆ?? ದಿನಾ ಸರಿಯಾದ ಟೈಮ್ ಗೇ ಬರೋ ಟ್ರೈನ್, ನಾವು ಹೋಗೋ   ದಿನಾನೆ ಮುಕ್ಕಾಲು ಗಂಟೆ ಲೇಟ್!! ಉಪ್ಪಿನಂಗಡಿಗೆ ಹೋಗೋ ಬಸ್ಸಿಗೆ ಕಾಯ್ತಾ ಇದ್ರೆ, ಬೇರೆ ಕಡೇ ಹೋಗೋ ಬಸ್ಸುಗಳು ಬೇಕಾದಷ್ಟು ಬರುತ್ತವೆ, ಉಪ್ಪಿನಂಗಡಿಗೆ ಹೋಗೋದು ಬಿಟ್ಟು. 😦
ಹಾಸ್ಟೆಲಲ್ಲಿ ತಟ್ಟೆ ತೊಳಿಬೇಕಾದ್ರೆ ನೀರಿರುತ್ತೆ, ಊಟ ಮಾಡಿ ಕೈ ತೊಳ್ಕೋಳ್ಳೋ ಹೊತ್ತಿಗೆ ನೀರಿಲ್ಲ!, ನಾವೆಲ್ಲ ಮನೆಲಿದ್ದಾಗ ನೀರು ಟ್ಯಾಂಕ್ನಲ್ಲಿ ತುಂಬಿ ಹರಿತಿದ್ರೆ..
ನೆಂಟರು ಮನೆಗೆ ಬಂದಿದ್ದಾಗ ಟ್ಯಾಂಕ್ ಬರಿದಾಗುತ್ತೆ!. ಅಮ್ಮ ಮನೆಲಿದ್ದಾಗ ಯಾರೂ ಬರಲ್ಲ!ಅದೇ ನಮ್ಮನ್ನು ಮಾತ್ರ ಮನೆಲಿ ಬಿಟ್ಟು ಹೋಗಿದ್ದಾಗ ನೆಂಟ್ರು ಬರ್ತಾರೆ! ಬಂದ್ರು ಚಿಂತೆ ಇರಲ್ಲ. ಏನ್ ಕೊಡ್ಲಿ ಕುಡಿಯೋಕೆ? ಅಂತ ಕೇಳಿ, ಮನದಲ್ಲೇ ದೇವ್ರೆ.. ಟೀ ಹೇಳ್ಳೀ, ಕಾಫೀ ಅಷ್ಟು ನೀಟ್ ಆಗಿ ಮಾಡೋಕೆ ಬರಲ್ವಲ್ಲಾಂತ ಮೊರೆ ಇಡ್ತಿದ್ರೆ, ಅರ್ಧ ಲೋಟ ಕಾಫೀನೇ ಕೊಡು ಅನ್ಬೇಕಾ!!?

ನಮ್ಮ ಸರದಿ ಬಂದಾಗ್ಲೇ ಟಿಕೆಟ್ ಮುಗಿದು ಹೋಗೋದು. ಬೇರೆಲ್ಲಾ ದಿನ ಪೆನ್ಸಿಲ್ ತೆಕ್ಕೊಂಡು ಹೀಗಿರ್ತೇವೆ. ಉಪಯೋಗಿಸ್ಬೇಕಾಗಿ ಬರಲ್ಲ , ಅದೇ ಬೇಕು ಅಂದಾಗ ಪೆನ್ಸಿಲ್ ಮನೆಲೇ ಬಿಟ್ಟು ಬಂದಿರೋದು. ಒಂದು ಪೆನ್ ಜೊತೆ ಇನ್ನೊಂದು ಇರ್ಲಿ ಅಂತ ತೆಕ್ಕೊಂಡು ಹೋದ್ರೆ ಎರಡೂ ಒಂದೇ ಟೈಮ್ಗೆ ಕೈ ಕೊಡೋದು!. ನಮಗೆ ಬೇಕಾದ ಪ್ರೋಗ್ರಾಮ್ ಟಿವಿ ನಲ್ಲಿ ಬರ್ತಿದ್ರೆ, ಅಮ್ಮ ತಂಗಿ, ಎಲ್ಲರ ಜೊತೆ ಕಾಡಿ ,ಬೇಡಿ, ಬುಕ್ ಮಾಡಿ  ರಿಮೋಟ್ ತೆಕ್ಕೊಂಡು ಟಿವಿ ನೋಡೋವಾಗ ಕೇಬಲ್ ನವರು ತೆಗಿತಾರೆ!! ಛೇ!! ಅಂತ ಹೇಳೇ ಹೇಳಿರ್ತೇವೆ!!


ಇದೆಲ್ಲ ಯಾಕಾಗುತ್ತೆ?ಹೇಗೆ ಆಗುತ್ತೆ?.. ಆ ಸಮಯಕ್ಕೇ ಕಾದು ನೋಡಿಟ್ಟ ಹಾಗೆ! ನಮ್ಮ ಹಣೆಬರಹವೋ? ಅಗೋಚರ ಶಕ್ತಿಯ ಕೈವಾಡವೋ? ದೇವರಿಗೆ ನಮ್ಮ ಮೇಲೆ ಕೋಪವೋ?ಇಲ್ಲ ಮುಂದುವರಿದ ನಮ್ಮ ವಿಜ್ಞಾನವೋ? ಕೊನೆಗೆ ಮೂಡುವ ಪ್ರಶ್ನೆ ಒಂದೇ….  “ಯಾಕೆ ಹೀಗೆ??”.


-ನಲ್ಮೆಯಿಂದ

ದಿವ್ಯ

Advertisements

9 ಟಿಪ್ಪಣಿಗಳು

 1. sharadabooks said,

  ಯಾಕೆ ಹೀಗೆ ಅನ್ನುವ ಪ್ರಶ್ನೆ ಯಾವ ಸಮಯದಲ್ಲಿ ಹುಟ್ಟ ಬೇಕೊ ಆ ಸಮಯದಲ್ಲಿ ಹುಟ್ಟಲ್ಲ ನೋಡಿ ಅದೇ ಸಮಸ್ಯೆ!ಸಮಸ್ಯೆ ಬಂದಾಗ ಮಾತ್ರ ಸಮಸ್ಯೆ ಯ ಸಮಸ್ಯೆ,ಸಮಸ್ಯೆಯಾಗುತ್ತೆ.
  ನೆನೆದಂತೆ ನಡೆದಾಗ, ಯಾಕೆ ಸಮಸ್ಯೆ ಬರಲಿಲ್ಲ ಅನ್ನುವುದು ನಮಗೆ ಸಮಸ್ಯೆ ಯಾಗುವುದಿಲ್ಲ.ಅನ್ನುವುದೇ ಒಂದು ಸಮಸ್ಯೆ ನೋಡಿ.
  ಒಟ್ಟಿನಲ್ಲಿ ಈ ಸಮಸ್ಯೆಗಳು ಯಾವತ್ತೂ ಸಮಸ್ಯೆಗಳೇ…
  ಯೋಚನೆಗಳೇ ಹೀಗೆ..”.ಯಾಕೆ ಹೀಗೆ??”

 2. divya.. said,

  ಹ್ಮ್ಮ್.. ಅದೂ ಹೌದು.. ನಿಮ್ಮ ಮಾತೂ ಒಪ್ಪಬೇಕಾದ್ದೇ..
  ಪ್ರತಿಕ್ರಿಯೆಗೆ ಧನ್ಯವಾದಗಳು.. 🙂

 3. ವಿನಯ said,

  ಒಳ್ಳೆ ಬರಹ ಅಕ್ಕ , ಯಾಕೆ ಹೀಗೆ? ಅಂದುಕೊಳ್ಳೋ ಬದಲು , ಹೀಗೂ ಆಗುತ್ತೆ ಅಂತ ಅಂದುಕೊಂಡು ಸುಮ್ಮನಿರೋದು ಒಳ್ಳೇದು.
  ಯಾಕೆ ಅನ್ನೋದು ಹೊಸ ಸಮಸ್ಯೆ ಹುಟ್ಟು ಹಾಕಿದರೆ , ಹೀಗೂ ಆಗಬಹುದು ಅಂತ ಅಂದುಕೊಳ್ಳೋದು ಮುಂದೆ ಎದುರಾಗಬಹುದಾದ ಸನ್ನಿವೇಶ ಗಳೆಡೆಗೆ ಜಾಗೃತಿ ಮೂಡಿಸುತ್ತೆ 😉

 4. sharadabooks said,

  ವಿನಯ ಚೆನ್ನಾಗಿ ಹೇಳಿದಿರಿ..

 5. divya.. said,

  ಹ್ಮ್ಮ್..ತಮ್ಮಾ ನೀನು ಹೇಳಿದಾಗೆ ಚೇಂಜ್ ಮಾಡ್ಕೊಳ್ಬೇಕು 🙂

 6. Ismail Mk Shivamogga (UAE) said,

  ಹೌದು ಕಣ್ರಿ ದೀವ್ಯ ಈ ಪ್ರಶ್ನೆ ನನಗು ಬಹಳ ಸಲ ಕಾಡಿದೆ

 7. ದಿವ್ಯ said,

  ಹ್ಮ್ಮ್.. 😦

 8. sanath said,

  have you heard of Murphy’s law ?

  “If anything can go wrong, it will, and it will happen at the worst possible time”. 😉

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: