ಐಶ್ವರ್ಯಕ್ಕೆ ತಲೆಬಾಗಿ

ಜನವರಿ 13, 2010 at 11:31 AM (kavana)

ನಿನ್ನ ಒಲುಮೆಯ ಮಹಲಿಗೆ
ನನ್ನ ರಾಣಿಯಾಗಿಸಿದೆ,
ನನ್ನ ಬಣ್ಣ ಬಣ್ಣದ ಕನಸಿಗೆ
ನೀ ಕಾಮನಬಿಲ್ಲಾದೆ,

ಒಂಟಿ ಯಾನದ ಹಡಗಿಗೆ
ದಾರಿ ದೀಪವಾದೆ,
ಬಿಕೋ ಎನ್ನುತಿದ್ದ ಹೃದಯವ
ಬೃಂದಾವನವಾಗಿಸಿದೆ,

ಇಳಿಯುತ್ತಿದ್ದ ಕಣ್ಣೀರಲೂ
ಪಾಲನ್ನು ಕೇಳಿದೆ,
ಮಾತಿನಿಂದಲೇ ಮನದ ನೋವ
ಮರೆವಂತೆ ಮಾಡಿದೆ,

ನಾ ನುಡಿಯದ ಮಾತನೆಲ್ಲ
ಅರಿತೆ ಹೇಗೆ??
ನೋವನು ನುಂಗಿ ನಗುವಲ್ಲೇ
ನಲುಮೆಯನಿತ್ತೆ ಹೇಗೆ?

ನಿನ್ನ ಮನದ ಗೋಡೆಯಲಿ
ಚಿತ್ತಾರವ ಬಿಡಿಸಲೇ??
ಸ್ಮಾರಕವಾದ ಎದೆಗೂಡಿಗೆ
ಚೈತನ್ಯವ ನೀಡಲೇ??

ನಿನ್ನ ಕನಸಿನ ಅರಮನೆಗೆ
ಬಲಗಾಲಿಟ್ಟು ಬರುವೆ,
ನಿನ್ನಂತರಂಗದ ಐಶ್ವರ್ಯಕೆ
ಕಾಲೂರಿ ತಲೆಬಾಗಿರುವೆ!!

-ನಲ್ಮೆಯಿಂದ..

ದಿವ್ಯ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: