“ಬದುಕು”

January 30, 2010 at 5:15 AM (kavana)

ಜೀವನ.. ಎಂಬುದು
ಅರಣ್ಯರೋಧನದಂತೆ
ದಾರಿಯು ಸಿಕ್ಕಿತೆನ್ನಲು
ಪುನಃ ತಪ್ಪಿದಂತೆ,

ಬೆಳಕು ಹರಿದರೂ
ಕತ್ತಲು ಕವಿದಿರುವಂತೆ
ಕಣ್ಣ ನೀರನು ಒರೆಸಿದರೂ
ಇನ್ನೊಂದು ಹನಿ ಮೂಡಿದಂತೆ

ಒಂದು ಮೃಗದಿಂದ ತಪ್ಪಿಸಿದಾಗ
ಇನ್ನೊಂದರ ಆರ್ಭಟವಾದಂತೆ
ಒಂದು ರೆಂಬೆಯನು ಹತ್ತಿದಾಗ
ಇನ್ನೊಂದು ತನ್ನ ಏರು ಎಂದಂತೆ

ಏರಿ ತುದಿಯನು ತಲುಪಿದಾಗ
ಮರವೇ ಕುಸಿದು ನೆಲವಪ್ಪಿದಂತೆ
ಎಲ್ಲರೂ ರೋಧಿಸುವವರೇ ಇರಲು,
ನಮ್ಮ ರೋಧನವ ಕೇಳುವವರಾರು??!!


- ನಲ್ಮೆಯಿಂದ

ದಿವ್ಯ


Permalink 2 Comments

Follow

Get every new post delivered to your Inbox.